13ರಿಂದ ಮೇಕ್‌ ಇನ್‌ ಇಂಡಿಯಾ ಸಮ್ಮೇಳನ


Team Udayavani, Feb 11, 2017, 11:40 AM IST

desh-make-in-india.jpg

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆಗಿರುವ ಅವಕಾಶ, ಕರ್ನಾಟಕದ ಕೈಗಾರಿಕೆ ಬೆಳವಣಿಗೆ, ಉತ್ಪಾದನಾ ವಲಯದ ಸಾಧನೆ, ಕೌಶಲ್ಯತೆ ಅನಾವರಣಗೊಳಿಸುವ ಉದ್ದೇಶದ “ಮೇಕ್‌ ಇನ್‌ ಇಂಡಿಯಾ-ಕರ್ನಾಟಕ’ ಸಮ್ಮೇಳನ ಫೆ.13 ಮತ್ತು 14 ರಂದು ನಗರದಲ್ಲಿ ನಡೆಯಲಿದೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ, ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣ ಮತ್ತು ರಾಜ್ಯದಲ್ಲಿ ತಯಾರಿಕಾ ಕ್ಷೇತ್ರದ ಸ್ವಾಯತ್ತತೆಯ ವೃದ್ಧಿ, ಮುಂದಿನ ಭವಿಷ್ಯದ ದೃಷ್ಟಿಯಿಂದ ಯುವಕರಿಗೆ ಉದ್ಯೋಗಗಳಲ್ಲಿ ಕೌಶಲ್ಯ ತರಬೇತಿ ನೀಡುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದರು.

ಮೇಕ್‌ ಇನ್‌ ಇಂಡಿಯಾ ಸಮ್ಮೇಳನಕ್ಕೆ ಫೆ.13ರಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿÉ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವರಾದ ವೆಂಕಯ್ಯನಾಯ್ಡು, ಸುರೇಶ್‌ ಪ್ರಭು, ಅನಂತಕುಮಾರ್‌, ಸ್ಮತಿ ಇರಾನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಫೆ.14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಮನೋಹರ್‌ ಪರಿಕ್ಕರ್‌ ಮತ್ತು ಎಂ.ಜೆ.ಅಕºರ್‌ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. 

4,000 ಪ್ರತಿನಿಧಿಗಳು ಭಾಗಿ: ಎರಡು ದಿನಗಳ ಸಮ್ಮೇಳನದಲ್ಲಿ 10 ಅಧಿವೇಶನಗಳು ನಡೆಯಲಿದ್ದು, ಮೇಕ್‌ ಇನ್‌ ಇಂಡಿಯಾ ವಿಷಯ ಕುರಿತು ಪ್ರಮುಖವಾಗಿ ಚರ್ಚೆ ನಡೆದರೆ, ಉಳಿದ ಒಂಭತ್ತು ಸಮಾವೇಶಗಳು ವಿವಿಧ ವಲಯಗಳಿಗೆ ಸಂಬಂಧಪಟ್ಟಿರುತ್ತವೆ. ಏರೋಸ್ಪೇಸ್‌ ಮತ್ತು ಡಿಫೆನ್ಸ್‌, ಬಯೋಟೆಕ್ನಾಲಜಿ ಮತ್ತು ಫಾರಸೂಟಿಕಲ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್ಸ್‌, ಪ್ಲಾಸ್ಟಿಕ್ಸ್‌ ಮತ್ತು ಕೆಮಿಕಲ್ಸ್‌ ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚೆಗಳು ಜರುಗಲಿವೆ.

ಸಮೇಳನದಲ್ಲಿ ಸುಮಾರು 25-30 ದೇಶಗಳ ನಾಲ್ಕು ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ 55 ದೇಶದ ಕಂಪನಿಗಳಿಂದ ವಸ್ತು ಪ್ರದರ್ಶನ ನಡೆಯಲಿದೆ. ಭವಿಷ್ಯದಲ್ಲಿ ಹಲವು ಸವಾಲುಗಳನ್ನು ಎದುರಿಸಲು ಸಮ್ಮೇಳನ ಸಹಕಾರಿಯಾಗಲಿದೆ ಎಂದು ವಿವರಿಸಿದರು. ಮುಂದಿನ ಏರೋ ಇಂಡಿಯಾ ಪ್ರದರ್ಶನ ಗೋವಾಗೆ ಸ್ಥಳಾಂತರವಾಗುತ್ತದೆ ಎಂದು ನನಗನಿಸುವುದಿಲ್ಲ. ಬೆಂಗಳೂರಿನ ಶಕ್ತಿ ಸಾಮರ್ಥಯದಿಂದ ಇಲ್ಲಿ ಏರ್‌ ಶೋ ನಡೆಯುತ್ತಿರುವುದರಿಂದ ಮುಂದೆಯೂ ನಗರದಲ್ಲಿಯೇ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಐಟಿ ಸಮ್ಮೇಳನ: ಭಾರತಕ್ಕೆ ತೈವಾನ್‌ ಆಹ್ವಾನ
ಬೆಂಗಳೂರು:
ತೈವಾನ್‌ ದೇಶದಲ್ಲಿ ಮೇ 30ರಿಂದ ಜೂನ್‌ 3ರವರೆಗೆ ನಡೆಯಲಿರುವ ಏಷ್ಯಾದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕುರಿತ ಸಮ್ಮೇಳನಕ್ಕೆ ಭಾರತದ ಪ್ರಮುಖ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಅಲ್ಲಿನ ವಿದೇಶಾಂಗ ವ್ಯಾಪಾರ ಅಭಿವೃದ್ಧಿ ಮಂಡಳಿ ಕಾರ್ಯ ನಿರ್ವಹಣಾ ನಿರ್ದೇಶಕ ಥಾಮಸ್‌ ಹುಂಗ್‌ ಹೇಳಿದ್ದಾರೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೈವಾನ್‌ ವಿದೇಶಾಂಗ ವ್ಯಾಪಾರ ಅಭಿವೃದ್ಧಿ ಮಂಡಳಿ ಹಾಗೂ ಭಾರತದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಂಸ್ಥೆ (ಐಸಿಟಿ) ಸಹಯೋಗದಲ್ಲಿ “ಕಂಪ್ಯೂಟೆಕ್ಸ್‌-2017′ ಹೆಸರಿನಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಐಟಿ ಹಬ್‌ ಅನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಮಟ್ಟದ ಈ ಐಟಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಬೇರೆ ದೇಶಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಐಟಿ ಕಂಪನಿಗಳು ಹಾಗೂ ಕಂಪ್ಯೂಟರ್‌ ಪರಿಣಿತರು ಇದ್ದಾರೆ. ಕಳೆದ ವರ್ಷ ನಡೆದ ಕಂಪ್ಯೂಟೆಕ್ಸ್‌ ಸಮ್ಮೇಳನದಲ್ಲಿ ಸುಮಾರು 40,000ಕ್ಕೂ ಹೆಚ್ಚು ವಿದೇಶಿಯರು ಪಾಲ್ಗೊಂಡಿದ್ದು, ಆ ಪೈಕಿ ಹೆಚ್ಚಿನವರು ಭಾರತೀಯರಾಗಿದ್ದರು.

ಹೀಗಾಗಿ, ಈ ಬಾರಿಯ ಸಮ್ಮೇಳನಕ್ಕೆ ಭಾರತದಿಂದ ಹೆಚ್ಚಿನ ಐಟಿ ಉದ್ದಿಮೆದಾರರನ್ನು ಆಕರ್ಷಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.ಅಮೆರಿಕ, ಡೆನ್ಮಾರ್ಕ್‌, ಕೊರಿಯಾ, ಚೀನಾ, ಜರ್ಮನಿ, ಇಂಡೋನೇಷಿಯಾ, ಜಪಾನ್‌, ಫ್ರಾನ್ಸ್‌ ಸೇರಿಂದಂತೆ ಹಲವು ದೇಶಗಳು ಈಗಾಗಲೇ ನೋಂದಾಯಿಸಿಕೊಂಡಿವೆ ಎಂದರು.

ಬೆಂಗಳೂರಿನಲ್ಲಿ ವಿಶೇಷ ಆರ್ಥಿಕ ವಲಯ ಆರಂಭಿಸುವ ಕುರಿತು ಎಲ್‌ ಆ್ಯಂಡ್‌ ಟಿ ಸಂಸ್ಥೆಯಿಂದ ಎರಡು ಪ್ರಸ್ತಾವನೆ ಬಂದಿದೆ. ಒಟ್ಟು 2000 ಕೋಟಿ ರೂ. ಮೊತ್ತದ ಪ್ರಸ್ತಾವನೆಯಾಗಿದ್ದು, ಅವರದ್ದೇ 13 ಎಕರೆ ಜಮೀನಿನಲ್ಲಿ ಎಸ್‌ಇಝಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲ್ಲಿ ಐಟಿ ಪಾರ್ಕ್‌ ನಿರ್ಮಾಣ ಮಾಡಿದ್ದಲ್ಲಿ ಒಟ್ಟು 18,500 ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೇ, ನಗರದಲ್ಲಿ ಆ್ಯಪಲ್‌ ಕಂಪನಿ ಘಟಕ ನಿರ್ಮಾಣ ವಿಚಾರದ ಪ್ರಸ್ತಾವನೆ ಕೇಂದ್ರದ ಮುಂದಿದೆ. ಕಂಪನಿಯವರು ಕೆಲವು ರಿಯಾಯಿತಿಗಳನ್ನು ಕೇಳಿದ್ದು ಪರಿಶೀಲಿಸಲಾಗುತ್ತಿದೆ. ಸಂಸ್ಥೆಯು ಪೀಣ್ಯದ ಬಳಿ ಘಟಕ ನಿರ್ಮಾಣಕ್ಕೆ ಜಮೀನು ಕೇಳಿದೆ.
-ಆರ್‌.ವಿ.ದೇಶಪಾಂಡೆ, ಕೈಗಾರಿಕೆ ಸಚಿವ

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.