ವಿವಿಪ್ಯಾಟ್‌ನಲ್ಲಿ ನಿಮ್ಮ ಮತ ಖಾತ್ರಿಪಡಿಸಿಕೊಳ್ಳಿ
Team Udayavani, May 7, 2018, 7:00 AM IST
ಈ ಬಾರಿ ಮತದಾನಕ್ಕೆ ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಬಳಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ
ಇವಿಎಂಗಳ ಬಗ್ಗೆ ಅನುಮಾನ, ಅಪನಂಬಿಕೆ, ಗೊಂದಲಗಳಿಗೂ ಕೊನೆ ಇಲ್ಲ. ನಾವು ಹಾಕಿದ ಓಟು ಯಾರಿಗೆ ಹೋಗುತ್ತದೆಂದು ಗೊತ್ತಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಇದೇ ಮೊದಲ ಬಾರಿಗೆ ಕರ್ನಾಟಕದ ಚುನಾವಣೆಯಲ್ಲಿ “ವಿವಿಪ್ಯಾಟ್'(ಓಟರ್ ವೆರಿಫಾಯೆಬಲ್ ಪೇಪರ್ ಆಡಿಟ್ ಟ್ರಯಲ್) ಮಷಿನ್ ಬಳಸಲಾಗುತ್ತಿದೆ. ಇದನ್ನು ಸರಳವಾಗಿ “ಮತದಾರ ದೃಢೀಕರಣ ಚೀಟಿ’
ಎಂದು ಹೇಳಬಹುದು.
ಇವಿಎಂನಲ್ಲಿ ನೀವು ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಲು ಬಟನ್ ಒತ್ತಿದ ತಕ್ಷಣ ಇವಿಎಂನ ಬ್ಯಾಲೆಟ್ ಯೂನಿಟ್ ಪಕ್ಕದಲ್ಲಿ ಇರುವ ವಿವಿಪ್ಯಾಟ್‌ನಲ್ಲಿ ನೀವು ಯಾರಿಗೆ ಮತ ಹಾಕಿದ್ದು ಎಂದು ಏಳು ಸೆಕೆಂಡ್‌ವರೆಗೆ ಕಾಣುತ್ತದೆ. ಬಳಿಕ ಆ ಮುದ್ರಿತ ಚೀಟಿ ವಿವಿಪ್ಯಾಟ್‌ನ ಸಂಗ್ರಹ ಪೆಟ್ಟಿಗೆಗೆ ಸೇರುತ್ತದೆ.
ಈ ಮೂಲಕ ನೀವು ಹಾಕಿದ ಮತವನ್ನು ನಿಮ್ಮ ಕಣ್ಣಾರೆ ನೀವೇ ಖಾತರಿಪಡಿಸಿಕೊಳ್ಳಬಹುದು. ಮತದಾನದ ದಿನ ನೀವು ಇವಿಎಂನ ಬಟನ್ ಒತ್ತಿದ ಮೇಲೆ ವಿವಿಪ್ಯಾಟ್‌ನಲ್ಲಿ ಕಾಣುವ ಮಾಹಿತಿ ನೋಡಿ ಮತ್ತು ಮುದ್ರಿತ ಚೀಟಿ ಅದರೊಳಗೆ ಬಿದ್ದ ಬಳಿಕವಷ್ಟೇ ಮತದಾನದ ಜಾಗದಿಂದ ಹೊರಬನ್ನಿ. ನಮ್ಮಲ್ಲಿ ಬಳಸಲಾಗುತ್ತಿರುವ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪ್ರಪಂಚದಲ್ಲೇ ಅತ್ಯಂತ ಸುಧಾರಿತ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಇವುಗಳನ್ನು ಭೌತಿಕವಾಗಿ ಅಥವಾ ತಾಂತ್ರಿಕವಾಗಿ ತಿರುಚಲು ಸಾಧ್ಯವೇ ಇಲ್ಲ. ಮೇಲಾಗಿ ಈ ಯಂತ್ರಗಳ ವಿಶ್ವಾಸಾರ್ಹತೆಯನ್ನು ಸುಪ್ರೀಂಕೋರ್ಟ್ ಪ್ರಮಾಣೀಕರಿಸಿದೆ ಅನ್ನುವುದು ನೆನಪಿರಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.