ಮಲೇಷಿಯಾ ಮರಳು ಮಾರಾಟದಲ್ಲಿ ಅವ್ಯವಹಾರವಿಲ್ಲ
Team Udayavani, Jan 25, 2018, 6:15 AM IST
ಬೆಂಗಳೂರು: ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ (ಎಂಎಸ್‌ಐಎಲ್)ಮಲೇಷಿಯಾ ಮರಳು ಮಾರಾಟ ವ್ಯವಹಾರದಲ್ಲಿ 5,800 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ,ವ್ಯವಸ್ಥಾಪಕ ನಿರ್ದೇಶಕ ಜಿ.ಸಿ.ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.
ಸಂಸ್ಥೆಯು ಮಲೇಷಿಯಾದಿಂದ ಈವರೆಗೆ 935 ಟನ್ ಮರಳನ್ನು ಬೆಂಗಳೂರಿಗೆ ತರಿಸಿದ್ದು, ಇದರ ಮೌಲ್ಯ 37 ಲಕ್ಷ ರೂ. ಈ ಮರಳಿನ ಮಾರಾಟ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೀಗಿರುವಾಗ ವಿಧಾನಸಭೆ ಪ್ರತಿಪಕ್ಷ ನಾಯಕರು ಆರೋಪಿಸಿರುವಂತೆ 5,850 ಕೋಟಿ ರೂ. ಅವ್ಯವಹಾರ ನಡೆಯಲು ಹೇಗೆ ಸಾಧ್ಯ? ಐದು ವರ್ಷದಲ್ಲಿ 180 ಲಕ್ಷ ಟನ್ ಮರಳು ತರಿಸಿದರೆ 7000 ಕೋಟಿ ರೂ. ವಹಿವಾಟು ನಡೆಯುತ್ತಿದ್ದೆಯೇ ಹೊರತು ಅಷ್ಟು ಮೊತ್ತವೂ ಅವ್ಯವಹಾರವಲ್ಲ ಎಂದು ಹಂಪನಗೌಡ ಬಾದರ್ಲಿ ಸ್ಪಷ್ಟನೆ ನೀಡಿದ್ದಾರೆ.
ಸಂಸ್ಥೆಯು “ಇ-ಪೋರ್ಟಲ್’ ಮೂಲಕ 2017ರ ಮೇ 25ರಂದು ವಿದೇಶಿ ನದಿ ಮರಳು ಆಮದಿಗೆ ಟೆಂಡರ್ ಆಹ್ವಾನಿಸಿತ್ತು. ಅದರಂತೆ ಜು.12ರಂದು ಟೆಂಡರ್ ತೆರೆಯಲಾಯಿತು. ಫಿಜಾ ಡೆವಲಪರ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ., ಲಿ., ಹಾಗೂ ಪೊಸೈಡೆನ್ ಎಫ್ಜಡ್‌ಇ ಯುಎಇ ಸಂಸ್ಥೆ ಪಾಲ್ಗೊಂಡಿದ್ದವು. ಎರಡೂ ಕಂಪನಿಗಳ ಅಧಿಕೃತ
ಪ್ರತಿನಿಧಿಗಳು, ವಕೀಲರ ಸಮ್ಮುಖದಲ್ಲಿ ಟೆಂಡರ್ ತೆರೆಯಲಾಯಿತು.ಫಿಜಾ ಡೆವಲಪರ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಯಾವುದೇ ದಾಖಲೆ ಅಪ್ ಲೋಡ್ ಮಾಡಿರಲಿಲ್ಲ. ಆ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಸ್ವೀಕೃತಿ ಪಡೆಯಲಾಗಿತ್ತು ಎಂದು ಹೇಳಿದ್ದಾರೆ.
ಪೊಸೈಡನ್ ಸಂಸ್ಥೆ ದಾಖಲೆಗಳನ್ನು ಟೆಂಡರ್ ಪರಿಶೀಲನಾ ಸಮಿತಿ ಪರಿಶೀಲಿಸಿದ ನಂತರ ತಾಂತ್ರಿಕ ಬಿಡ್ ಅಂಗೀಕರಿಸಿ, ಆರ್ಥಿಕ ಬಿಡ್ ತೆರೆಯಲಾಯಿತು. ಮರಳಿನ ದರ, ಡ್ರೆಡಿjಂಗ್ ದರ, ಮಲೇಷಿಯಾದಲ್ಲಿ ಹಡಗಿಗೆ ಮರಳು ತುಂಬುವ ದರ, ಹಡಗಿನಲ್ಲಿ ಮರಳು ಸಾಗಣೆ ದರ, ಆಮದು ಸುಂಕ, ಬಂದರಿನಲ್ಲಿ ಅಪ್‌ಲೋಡಿಂಗ್, ಸಂಗ್ರಹಣೆ, ಬ್ಯಾಗಿಂಗ್ ಹಾಗೂ ರೈಲು ಬೋಗಿಗೆ ತುಂಬುವ ಇಷ್ಟೂ ಪ್ರಕ್ರಿಯೆಗೆ ಪ್ರತಿ ಟನ್‌ಗೆ 2,300 ರೂ. ದರ ನಮೂದಿಸಿತ್ತು ಎಂದು ವಿವರಿಸಿದ್ದಾರೆ.
ಟೆಂಡರ್‌ನಲ್ಲಿ ಪಾಲ್ಗೊಳ್ಳಲು ವಿಧಿಸಿದ ಎಲ್ಲ ಅರ್ಹತೆಗಳನ್ನು ಹೊಂದಿರುವ ಕಂಪನಿಗಳೊಂದಿಗೆ ಪೊಸೈಡನ್ ಕಂಪನಿ ಒಡಂಬಡಿಕೆ ಮಾಡಿಕೊಂಡಿದೆ. ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಟೆಂಡರ್ ಪ್ರಕ್ರಿಯೆ ನಡೆಸಿರುವುದರಿಂದ ಪೊಸೈಡನ್ ಕಂಪನಿಯು ಟೆಂಡರ್ ಆಹ್ವಾನಿಸಿದ ಬಳಿಕವಷ್ಟೇ ಯುಎಇನಲ್ಲಿ ನೋಂದಣಿ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.
ದರದಲ್ಲಿ ಭಾರೀ ಅಂತರ
ತಮಿಳುನಾಡಿನಲ್ಲಿ ಪರಿಶೀಲಿಸಲಾಗಿದ್ದು, ಎಲ್ಲಿಯೂ 925 ರೂ. ದರದಲ್ಲಿ ಟನ್ ಮರಳು ಮಾರಾಟ ಕಂಡುಬಂದಿಲ್ಲ. “ಮ್ಯಾನ್ಯುಫ್ಯಾಕ್ಚರ್ ಸ್ಯಾಂಡ್’ ಹಾಗೂ ನೈಸರ್ಗಿಕ ನದಿ ಮರಳಿನ ದರದಲ್ಲಿ ಭಾರಿ ಅಂತರವಿದ್ದು, ಎರಡನ್ನೂ ತಾಳೆ ಮಾಡಲು ಸಾಧ್ಯವಿಲ್ಲ. ಜಿಎಸ್‌ಟಿ ಜತೆಗೆ ಗಣಿ ಇಲಾಖೆ ಸುಂಕ ಸೇರಿದಂತೆ ದರ ನಿಗದಿಪಡಿಸಲಾಗಿದೆ. ಸರ್ಕಾರ ಮತ್ತು ಸಂಸ್ಥೆ ವಿಧಿಸಿರುವ ಎಲ್ಲ ಷರತ್ತು ಒಳಗೊಂಡಂತೆ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.