ಮನಸೆಳೆದ ವಿಜ್ಞಾನ ಮಾದರಿ
Team Udayavani, Mar 5, 2017, 11:38 AM IST
ಬೆಂಗಳೂರು: ಜೆ.ಎನ್.ಟಾಟಾ ಅವರ ಜನ್ಮದಿನದ ಅಂಗವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಶನಿವಾರ ಆಯೋಜಿಸಿದ್ದ “ಓಪನ್ ಡೇ’ ವಿಜ್ಞಾನ ಪ್ರದರ್ಶನಕ್ಕೆ ಮಕ್ಕಳು ಹಾಗೂ ವಿದ್ಯಾರ್ಥಿಗಳ ದಂಡೇ ಹರಿದು ಬಂದಿತ್ತು. ಪ್ರದರ್ಶನದಲ್ಲಿ ನಗರ ಎದುರಿಸುತ್ತಿರುವ ಸಮಸ್ಯೆಗಳು, ಹವಾಮಾನ ಬದಲಾವಣೆಯ ಪರಿಣಾಮಗಳ ಪ್ರಾತ್ಯಕ್ಷಿಕೆ ಹಾಗೂ ಮಾನವ ರಹಿತ ವಿಮಾನ ಮಾದರಿ ಸೇರಿದಂತೆ ಹತ್ತು ಹಲವು ಆವಿಷ್ಕಾರಗಳು ಮೇಳದಲ್ಲಿ ಗಮನ ಸೆಳೆದವು.
ಮನುಷ್ಯನ ರಕ್ತದ ಪರೀಕ್ಷೆ ಮೂಲಕ ರೋಗ ಪತ್ತೆಯ ಅತಿ ಸೂಕ್ಷ್ಮ ಉಪಕರಣ (ನ್ಯಾನೋ ಯಂತ್ರ). ಗೂಢಚಾರಿಕೆ, ಕಣ್ಗಾವಲು, ಔಷಧಿ ಸರಬರಾಜು, ಛಾಯಾಗ್ರಹಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ಡ್ರೋಣ್ ಉಪಕರಣಗಳು, ಹಕ್ಕಿಗಳಂತೆ ಆಗಸದಲ್ಲಿ ಹಾರಾಡುವ ವಿವಿಧ ವಿಮಾನಗಳ ಮಾದರಿ, ಅದರಲ್ಲಿ ಬಳಸಲಾಗಿರುವ ತಂತ್ರಜ್ಞಾನ ಹೀಗೆ ವಿವಿಧ ರೀತಿಯ ತಂತ್ರಜ್ಞಾನದ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿತ್ತು.
ಸಮುದ್ರದ ನೀರಿನಿಂದ ವಿದ್ಯುತ್ ಶಕ್ತಿ ತಯಾರು ಮಾಡುವ ತಂತ್ರಜ್ಞಾನ, ಪ್ಯಾರಾಚೂಟ್ ತಂತ್ರಜ್ಞಾನ, ಮಾನವನ ಮಿದುಳಿನ ಕಾರ್ಯಗಳ ಕುರಿತು ಪ್ರಾತ್ಯಕ್ಷಿಕೆ ಹೀಗೆ ವಿವಿಧ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನದ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ಕಾರ್ಯಕ್ರಮ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೆಚ್ಚುಗೆಗಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ
Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ
Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್
MUST WATCH
ಹೊಸ ಸೇರ್ಪಡೆ
Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!
Udupi: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.