ಮೆಟ್ರೋ ಅವಧಿ ವಿಸ್ತರಣೆಗೆ ನಿರ್ವಹಣೆ ಸವಾಲು


Team Udayavani, Dec 16, 2019, 11:00 AM IST

bng-tdy-1

ಬೆಂಗಳೂರು: “ನಮ್ಮ ಮೆಟ್ರೋ’ ಸೇವಾವಧಿ ಮಧ್ಯರಾತ್ರಿವರೆಗೆ ವಿಸ್ತರಣೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಮಾರ್ಗಗಳ ವಿಸ್ತರಣೆ ಹಾಗೂ ಅದಕ್ಕೆ ತಕ್ಕಂತೆ ರೈಲುಗಳ ಸಂಖ್ಯೆಯೂ ಹೆಚ್ಚಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಾಮರ್ಥ್ಯದಲ್ಲಿ ವಿಸ್ತೃತ ಅವಧಿಯ ನಿರ್ವಹಣೆ ಬಿಎಂಆರ್‌ಸಿಎಲ್‌ ನಿರ್ವಹಣಾ ವಿಭಾಗದ ನಿದ್ದೆಗೆಡಿಸಿದೆ.

ಜ.1ರಿಂದ ಸೇವಾ ಅವಧಿಯನ್ನು ರಾತ್ರಿ 11.30ರಿಂದ 12 ಗಂಟೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ. ಇದಾಗಿ 8ರಿಂದ 10 ತಿಂಗಳ ಅಂತರದಲ್ಲಿ ತಲಾ 6.46 ಕಿ.ಮೀ. ಹಾಗೂ 6.29 ಕಿ.ಮೀ. ಉದ್ದದ ಎರಡು ಮಾರ್ಗಗಳನ್ನು ಸೇವೆಗೆ ಮುಕ್ತಗೊಳಿಸುವ ಗುರಿಯನ್ನೂ ನಿಗಮ ಹೊಂದಿದೆ. ಸಹಜವಾಗಿ ಅದಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ಮೆಟ್ರೋ ರೈಲುಗಳೂ ಸೇರ್ಪಡೆ ಆಗಲಿವೆ. ಆದರೆ ನಿರ್ವಹಣಾ ಸಾಮರ್ಥ್ಯ ಮಾತ್ರ ಹೆಚ್ಚಾಗಿಲ್ಲ. ಇದರಿಂದ ಈಗಿರುವ ಸಿಬ್ಬಂದಿ ಮೇಲೆ ಹೊರೆ ಬೀಳಲಿದ್ದು, ಪರೋಕ್ಷವಾಗಿ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಕನಕಪುರ ರಸ್ತೆಯ ಅಂಜನಾಪುರ ಮಾರ್ಗ ಶೇ.95ರಷ್ಟು ಹಾಗೂ ಕೆಂಗೇರಿ ಮಾರ್ಗದ ಶೇ.85-90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕ್ರಮವಾಗಿ ಇವೆರಡೂ 2020ರ ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ವಾಣಿಜ್ಯ ಸೇವೆಗೆ ಮುಕ್ತಗೊಳ್ಳಲಿವೆ. ಹೆಚ್ಚು-ಕಡಿಮೆ 13 ಕಿ.ಮೀ.ನಷ್ಟು ಮೆಟ್ರೋ ವಿಸ್ತರಣೆ ಆಗುವುದರಿಂದ ಈ ಮಾರ್ಗಗಳಲ್ಲಿ ಬರುವ ಪ್ರದೇಶಗಳಲ್ಲಿನ ಜನ, ರಸ್ತೆ ಮಾರ್ಗದಿಂದ ಮೆಟ್ರೋಗೆ “ಶಿಫ್ಟ್’ ಆಗಲಿದ್ದಾರೆ. ಅಲ್ಲದೆ, ಕೆಲಸ ನಿಮಿತ್ತ ಮೈಸೂರು, ರಾಮನಗರ, ಚನ್ನಪಟ್ಟಣ, ಮಂಡ್ಯ ಹಾಗೂ ಕನಕಪುರ ಸುತ್ತಲಿನ ಊರುಗಳಿಂದ ಬೆಂಗಳೂರಿಗೆ ಬರುವ ಜನ ವಿಸ್ತರಣೆ ಆಗಲಿರುವ ಮಾರ್ಗಗಳ ಟರ್ಮಿನಲ್‌ಗ‌ಳಲ್ಲೇ ಇಳಿದು, ಮೆಟ್ರೋ ಏರಲಿದ್ದಾರೆ.

ಹೆಚ್ಚಲಿದೆ ದಟ್ಟಣೆ: ಅಷ್ಟೇ ಅಲ್ಲ, ದಟ್ಟಣೆರಹಿತ ಸಮಯ (ನಾನ್‌-ಪೀಕ್‌ ಅವರ್‌)ದಲ್ಲಿ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಒತ್ತಡಕ್ಕೆ ಅನುಗುಣವಾಗಿ ರೈಲುಗಳ ಕಾರ್ಯಾಚರಣೆ ಅವಧಿ ಯನ್ನೂ ಹೆಚ್ಚಿಸಬೇಕಾಗುತ್ತದೆ. ಆಗ, ರೈಲುಗಳನ್ನು ಹೆಚ್ಚು ಓಡಿಸಬೇಕಾಗುತ್ತದೆ. ಸದ್ಯ “ನಾನ್‌-ಪೀಕ್‌ ಅವರ್‌’ನಲ್ಲಿ 10-15 ನಿಮಿಷದ ಅಂತರದಲ್ಲಿ ಸೇವೆ ನೀಡಲಾಗುತ್ತಿದೆ. ಇದರ ಹೊರೆ ನಗರದ ಹೃದಯಭಾಗದ ಮೆಜೆಸ್ಟಿಕ್‌ ಇಂಟರ್‌ ಚೇಂಜ್‌ ಮೇಲೆಯೇ ಬೀಳಲಿದೆ. ಈಗಲೇ ಈ ನಿಲ್ದಾಣದಲ್ಲಿ ಅತ್ಯಧಿಕ ದಟ್ಟಣೆ ಇರುವುದನ್ನು ಕಾಣಬಹುದು. ಈ ಮಧ್ಯೆ ರೈಲುಗಳು ತಂಗಲು ಹಾಗೂ ನಿರ್ವಹಣೆ ಮಾಡಲು ಇರುವ ಡಿಪೋಗಳು ಮಾತ್ರ ಎರಡು. ಒಂದು ಪೀಣ್ಯ, ಮತ್ತೂಂದು ಬೈಯಪ್ಪನಹಳ್ಳಿಯಲ್ಲಿದೆ. ನಿರ್ವಹಣೆಗಾಗಿ ಆ ರೈಲುಗಳು ಕನಿಷ್ಠ 25 ಕಿ.ಮೀ. ದೂರದಿಂದ ಬರಬೇಕಾಗುತ್ತದೆ. ಆಗ ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೂ ವ್ಯತ್ಯಯದ ಪ್ರಮಾಣ ಅಧಿಕವಾಗಲಿದೆ ಎಂದು ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಮೂರು ತಾಸಲ್ಲಿ ಮುಗಿಸುವ ಸವಾಲು: ಇನ್ನು ಬಹುತೇಕ ಎಲ್ಲ ಮೆಟ್ರೋ ರೈಲುಗಳು ಮೂರರಿಂದ ಆರು ಬೋಗಿಗಳಾಗಿ ಮಾರ್ಪಟ್ಟಿವೆ. ಬರಲಿರುವ ರೈಲುಗಳು ಕೂಡ ಇದೇ ಸಾಮರ್ಥ್ಯ ಹೊಂದಿರಲಿವೆ. ನೇರಳೆ ಮತ್ತು ಹಸಿರು ಸೇರಿ ಒಟ್ಟಾರೆ 42 ಕಿ.ಮೀ. ಉದ್ದದ ಮಾರ್ಗದಲ್ಲಿ ಸುಮಾರು 48ರಿಂದ 50 ಮೆಟ್ರೋ ರೈಲುಗಳು ನಿತ್ಯ ಕಾರ್ಯಾಚರಣೆ ಮಾಡುತ್ತವೆ.. ಉಳಿದೆ ರೈಲುಗಳನ್ನು ನಿತ್ಯ ನಿರ್ವಹಣೆ ಮಾಡಲೇಬೇಕಾಗುತ್ತದೆ. ರಾತ್ರಿ 12.30ಕ್ಕೆ ಡಿಪೋಗಳಿಗೆ ಬಂದಿಳಿಯುವ ರೈಲುಗಳನ್ನು ಮುಂದಿನ ಮೂರು ತಾಸುಗಳಲ್ಲಿ ಸೇವೆಗೆ ಸನ್ನದ್ಧ ಗೊಳಿಸುವುದು ಸವಾಲಿನ ಕೆಲಸ ಆಗಲಿದೆ ಎಂದು ನಿರ್ವ ಹಣಾ ವಿಭಾಗದ ಎಂಜಿನಿಯರೊಬ್ಬರು ತಿಳಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ. ಆದರೆ, ಅದಕ್ಕೆ ತಕ್ಕಂತೆ ನಿರ್ವಹಣಾ ಸಾಮರ್ಥ್ಯವನ್ನೂ ಹೆಚ್ಚಿಸಬೇಕು. ಅದರಲ್ಲಿ ಕಾರ್ಯನಿರ್ವಹಿಸುವವರಿಗೂ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ವಿಚಿತ್ರವೆಂದರೆ ವಾಸ್ತವ ಹಾಗಿಲ್ಲ. ನಿರಂತರ ವಾರಗಟ್ಟಲೆ ರಾತ್ರಿ ಪಾಳಿ ಹಾಕಲಾಗುತ್ತದೆ. ಒಂದು ದಿನ ರಜೆ ನೀಡಲಾಗುತ್ತದೆ. ಆದರೆ, ಭಾರತೀಯ ರೈಲ್ವೆಯಲ್ಲಿ ಒಂದು ದಿನ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದವನಿಗೆ “ನೈಟ್‌ ಆಫ್’ ಎಂದು ನೀಡಲಾಗುತ್ತದೆ. ಅಂದರೆ ಮರುದಿನ ಸಂಪೂರ್ಣ ರಜೆ ಇರುತ್ತದೆ. ಜತೆಗೆ ಭತ್ಯೆ ಮತ್ತಿತರ ಸೌಕರ್ಯಗಳೂ ಇರುತ್ತವೆ. ಈ ಒತ್ತಡ ಮತ್ತು ತಾರತಮ್ಯವು ಕಾರ್ಯದಕ್ಷತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಮೆಟ್ರೋ ರೈಲು ಓಡಿಸುವವರ ಮೇಲೂ ಇದರಿಂದ ಒತ್ತಡ ಬೀಳಲಿದೆ ಎಂದು ಅವರು ಹೇಳುತ್ತಾರೆ.

ಏನೇನು ನಿರ್ವಹಣೆ?: 12 ಗಂಟೆಗೆ ಟರ್ಮಿನಲ್‌ಗೆ ಬರುವ ರೈಲುಗಳು ಇನ್ನು ಮುಂದೆ 12.30ಕ್ಕೆ ಪ್ರವೇಶಿಸುತ್ತವೆ. ಬೆಳಗಿನ ಜಾವ 4.15ಕ್ಕೆ ಪುನಃ ಕಾರ್ಯಾಚರಣೆಗೆ ಅಣಿಗೊಳಿಸಬೇಕಾದ ಸಮಯ ಈಗ 3.30ಕ್ಕೆ ಸೀಮಿತವಾಗಲಿದೆ. ನಿತ್ಯ ರೈಲುಗಳು ಟರ್ಮಿನಲ್‌ ಪ್ರವೇಶಿಸುತ್ತಿದ್ದಂತೆ ಅತ್ತ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುತ್ತದೆ. ನಂತರ ಎರಡೂ ಹಳಿಗಳ ನಡುವಿನ ಅಂತರದಲ್ಲಿ ವ್ಯತ್ಯಾಸ ಪರೀಕ್ಷಿಸಬೇಕಾಗುತ್ತದೆ. ಅಲ್ಟ್ರಾಸೋನಿಕ್‌ ಫ್ಲಾ ಡಿಟೆಕ್ಟರ್‌ ಯಂತ್ರವನ್ನು ಹಳಿಗಳ ಮೇಲಿಟ್ಟು ತಳ್ಳಿಕೊಂಡು ಹೋಗುವ ಮೂಲಕ ಹಳಿಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಈ ಮಧ್ಯೆ ಆಪರೇಟರ್‌ಗಳು ಯಾವುದೇ ಲೋಪಗಳಿದ್ದರೆ, ನಿರ್ವಹಣಾ ವಿಭಾಗಕ್ಕೆ ವರದಿ ಮಾಡುತ್ತಾರೆ. ನಿರ್ವಹಣಾ ಸಿಬ್ಬಂದಿ ಆ ಲೋಪವನ್ನು ಸರಿಪಡಿಸುತ್ತಾರೆ. ರೈಲು ದ್ವಾರಗಳು ಮುಚ್ಚುವುದು- ತೆರೆಯುವುದು,

ವೈಪರ್‌, ಹೆಡ್‌ಲೈಟ್‌ಗಳು, ಬ್ರೇಕ್‌ ಮತ್ತಿತರ ಅಂಶಗಳನ್ನು ಗಮನಿಸಲಾಗುತ್ತದೆ. ಪ್ರತಿ ರೈಲಿನ ನಿರ್ವಹಣೆಗೆ 4-5 ಜನರನ್ನು ನಿಯೋಜಿಸಲಾಗಿರುತ್ತದೆ. ಇದರಲ್ಲಿ ಕೂಡ ಬೇರೆ ಬೇರೆ ವಿಭಾಗಗಳಿರುತ್ತವೆ. ನಿತ್ಯ ಬೆಳಗ್ಗೆ ಮೊದಲ ಟ್ರಿಪ್‌ ಯಾವ ರೈಲು ಹೋಗಬೇಕು ಎನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ. ಹಾಗಾಗಿ, ಅದನ್ನು ಆದ್ಯತೆಯ ಮೇರೆಗೆ ನಿರ್ವಹಣೆ ಮಾಡಲಾಗುತ್ತದೆ. ಮಧ್ಯರಾತ್ರಿ 3.30ರ ಒಳಗೆ ಈ ಎಲ್ಲ ಪ್ರಕ್ರಿಯೆಗಳು ಮುಗಿಯಲೇಬೇಕು. ಈ ಮೊದಲು 4.15ರವರೆಗೆ ಸಮಯ ಇತ್ತು. ಮೆಟ್ರೋ ನಿರ್ವಹಣೆಯಲ್ಲಿ ಟ್ರ್ಯಾಕ್ಷನ್‌, ರೋಲಿಂಗ್‌ ಸ್ಟಾಕ್‌, ಸಿಗ್ನಲಿಂಗ್‌, ಸಿವಿಲ್‌ ಸೇರಿದಂತೆ ಹತ್ತಾರು ವಿಭಾಗಗಳಿವೆ. ಒತ್ತಡ ಹೆಚ್ಚಿರುವುದರಿಂದ ಈ ವಿಭಾಗದಲ್ಲಿ ನೌಕರರು ತುಂಬಾ ದಿನಗಳು ನಿಲ್ಲುವುದಿಲ್ಲ. ಬದಲಾಗುತ್ತಲೇ ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.

 

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Basanagowda-Yatnal

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

Kapil-Mishra

Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

Indi-Alliaince

Fight Alone: ಮಹಾರಾಷ್ಟ್ರದಲ್ಲೂ ಇಂಡಿಯಾ ಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

13-bng

Bengaluru: ಕೆಂಗೇರಿಯ ಮಧು ಪೆಟ್ರೋಲ್‌ ಬಂಕ್‌ ಜಂಕ್ಷನ್‌ ಮೃತ್ಯುಕೂಪ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Basanagowda-Yatnal

ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್

puttige-7-

Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ

GTD

JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್‌

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.