ಸಸಿ ನೆಟ್ಟ ಬಳಿಕ ನಿರ್ವಹಣೆಗೆ ಸಹಕಾರ ಅಗತ್ಯ
ಪಾಲಿಕೆಯಿಂದ 75 ಸಾವಿರ ಸಸಿ ನೆಡುವ ಅಭಿಯಾನಕ್ಕೆ ಚಾಲನೆ; ಐದು ಸಾವಿರ ಇಂಗು ಗುಂಡಿ ನಿರ್ಮಾಣ
Team Udayavani, Aug 15, 2021, 3:22 PM IST
ಬೆಂಗಳೂರು: ಸಸಿ ನೆಡುವುದು ನಮ್ಮ ಸಂಸ್ಕೃತಿ. ಸಸಿ ನೆಟ್ಟ ಬಳಿಕ ಅದರ ನಿರ್ವಹಣೆಗೆ ನಗರದ ಜನರ ಸಹಕಾರವೂ ಮುಖ್ಯವಗಿದೆ. ಸರ್ಕಾರವೊಂದೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ಸ್ವತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಅಭಿಯಾನ ಹಾಗೂ ಇಂಗು ಗುಂಡಿ ನಿರ್ಮಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪಾಲಿಕೆಯ ಅರಣ್ಯ ವಿಭಾಗ, ತೋಟಗಾರಿಕಾ ಹಾಗೂ ಕೆರೆಗಳ ವಿಭಾಗ ಹಾಗೂ ಯುನೈಟೆಡ್ ವೇ ಆಫ್ ಬೆಂಗಳೂರು ಸಹಯೋಗದೊಂದಿಗೆ ಪಾಲಿಕೆಯ ವ್ಯಾಪ್ತಿಯ ಉದ್ಯಾನವನಗಳು, ಕೆರೆಗಳ ಸುತ್ತಮುತ್ತಲಿನ ಖಾಲಿ ಸ್ಥಳದಲ್ಲಿ 75 ಸಾವಿರ ಸಸಿನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಜತೆಗೆ, ನಗರದ ಉದ್ಯಾನವನಗಳಲ್ಲಿ ಮಳೆ ನೀರು ವ್ಯರ್ಥವಾಗದೆ ಅಲ್ಲೇ ಸಂಗ್ರಹಿಸುವ ನಿಟ್ಟಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವ
ಕಾರ್ಯಕ್ರಮ ರೂಪಿಸಲಾಗಿದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಅಧಿಕಾರಿಗಳು ನಗರ ಪ್ರದಕ್ಷಿಣೆ ನಡೆಸಿ ಸಮಸ್ಯೆ ಆಲಿಸಲು ಸೂಚನೆ
ಐದು ಸಾವಿರ ಇಂಗು ಗುಂಡಿ ನಿರ್ಮಾಣ: ಪಾಲಿಕೆ ವ್ಯಾಪ್ತಿಯಲ್ಲಿ 1,300 ಉದ್ಯಾನವನಗಳಿವೆ. ಈ ಎಲ್ಲ ಉದ್ಯಾನವನಗಳಲ್ಲಿ ಬೀಳುವ ಮಳೆ ನೀರನ್ನು ಅಲ್ಲೇ ಇಂಗುವ ಹಾಗೆ ಮಾಡುವ ನಿಟ್ಟಿನಲ್ಲಿ ಯುನೈಟೆಡ್ ವೇ ಆಫ್ ಬೆಂಗಳೂರು ಸಹಯೋದಲ್ಲಿ ವೈಜ್ಞಾನಿಕವಾಗಿ ಐದು ಸಾವಿರ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ.
ಸ್ವತಂತ್ರ್ಯ ಉದ್ಯಾನದಲ್ಲಿ ಈಗಾಗಲೇ 24 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಆರು ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತದೆ. ಎಲ್ಲ ಇಂಗುಗುಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದ್ದು, ಪ್ರತಿ ಇಂಗು ಗುಂಡಿಯೂ 12 ಅಡಿ ಆಳ ಹಾಗು 4 ಅಡಿ ಸುತ್ತಳತೆ ಹೊಂದಿದೆ ಎಂದರು.
ಎರಡು ಕೋಟಿ ಲೀಟರ್ ನೀರು ಸಂಗ್ರಹ:
ಇಂಗು ಗುಂಡಿಯಲ್ಲಿ ಸುಮಾರು 4000 ಲೀಟರ್ ಮಳೆನೀರನ್ನು ಸಂಗ್ರಹಿಸಿ ಇಂಗಿಸಬಹುದಾಗಿದೆ. ಒಟ್ಟಾರೆ 5 ಸಾವಿರ ಗುಂಡಿಗಳಲ್ಲಿ ಎರಡು ಕೋಟಿ ಲೀಟರ್‌ನಷ್ಟು ನೀರನ್ನು ಸಂಗ್ರಹಿಸಿ ಇಂಗಿಸಬಹುದಾಗಿದೆ. ಮಳೆ ನೀರಿನಲ್ಲಿ ಮಣ್ಣು ಇಂಗು ಗುಂಡಿಗೆ ಹೋಗದಂತೆ ಸುತ್ತಲು ತಳಭಾಗದವರೆಗೆ ಜೆಲ್ಲಿ ಕಲ್ಲುಗಳನ್ನು ಅಳವಡಿಸಲಾಗಿರುತ್ತದೆ ಹಾಗೂ ಮೇಲ್ಭಾಗವನ್ನು ಮುಚ್ಚಲಾಗಿರುತ್ತದೆ. ಒಂದು ಇಂಗು ಗುಂಡಿಗೆ ಸುಮಾರು 32 ಸಾವಿರ ರೂ. ವೆಚ್ಚವಾಗಲಿದ್ದು, ಅದನ್ನು ಯುನೈಟೆಡ್ ವೇ ಆಫ್ ಬೆಂಗಳೂರು ವತಿಯಿಂದಲೆ ಭರಿಸಲಾಗುತ್ತದೆ. ಪಾಲಿಕೆಯಿಂದ ಇಂಗು ಗುಂಡಿ ನಿರ್ಮಿಸಲು ಸ್ಥಳಾವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಶೇ.90ರಷ್ಟು ಬದುಕುವ ಗಿಡ: ಪಾಲಿಕೆ ವಿಶೇಷ ಆಯುಕ್ತ(ಅರಣ್ಯ ಇಲಾಖೆ) ರೆಡ್ಡಿಶಂಕರ ಬಾಬು ಮಾತನಾಡಿ, ಅರಣ್ಯ ವಿಭಾಗದ ನರ್ಸರಿಯಲ್ಲಿ ಶೇ.90ರಷ್ಟು ಬದುಕುವ ಗಿಡಗಳನ್ನೇ ಬೆಳೆಸಲಾಗಿದೆ. ಜನ ಕಿತ್ತು ಹಾಕಿದರೆ ಮಾತ್ರ ಬದುಕುಳಿಯುವುದಿಲ್ಲ. ಪಾಲಿಕೆ ಜತೆಗೆ ಎನ್‌ಜಿಒಗಳು, ಸ್ವಯಂ ಸೇವಕರು ಸೇರಿ ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಬಾರಿ ಪಾರ್ಕ್, ಕೆರೆಗಳು, ಶಾಲೆಗಳ ಆವರಣದೊಳಗೆ 75
ಸಾವಿರ ಗಿಡ ನೆಡುವ ಅಭಿಯಾನಕ್ಕೆ ಮುಂದಾಗಿದ್ದೇವೆ. ದಾನಿಗಳು ಮುಂದೆ ಬಂದರೆ ಮಾತ್ರ ಟ್ರೀ ಗಾರ್ಡ್ ಹಾಕಲಾಗುವುದು ಎಂದು ತಿಳಿಸಿದರು.
ಪಾಲಿಕೆ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ಪಶ್ಚಿಮ ವಲಯದ ಜಂಟಿ ಆಯುಕ್ತ ಬಿ.ಶಿವಸ್ವಾಮಿ, ಕೆರೆಗಳ ವಿಭಾಗ ಮುಖ್ಯ ಇಂಜಿನಿಯರ್ ಮೋಹನ್ ಕೃಷ್ಣ ಹಾಗೂ ಇನ್ನಿತರೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ನೀರು ಸಂಗ್ರಹಿಸಿ ಇಂಗಿಸುವುದರಿಂದ ಅಂತರ್ಜಲ ಮಟ್ಟವು ಏರಿಕೆಯಾಗುತ್ತದೆ. ಉದ್ಯಾನವನಗಳಲ್ಲಿರುವ ಸಸ್ಯ ಪ್ರಭೇದಗಳಿಗೆ ನೀರಿನ
ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ. ಮಳೆ ನೀರನ್ನುಅಲ್ಲಿಯೇ
ಸಂಗ್ರಹಿಸಬಹುದು.
-ಗೌರವ್ ಗುಪ್ತ,
ಬಿಬಿಎಂಪಿ ಮುಖ್ಯ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.