ಮಂದಿರ, ಮಸೀದಿ, ಚರ್ಚ್‌ಗಳ ಕಚೇರಿ ಸಿಬ್ಬಂದಿಗೂ ಕನಿಷ್ಠ ವೇತನ


Team Udayavani, Oct 16, 2018, 6:50 AM IST

wage-sc.jpg

ಬೆಂಗಳೂರು: ಮಂದಿರ, ಮಸೀದಿ, ಚರ್ಚ್‌ ಸೇರಿ ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿ, ನೌಕರರು ಅಥವಾ ಕೆಲಸಗಾರರಿಗೂ ಕಾನೂನು ರೀತಿ ಕನಿಷ್ಠ ವೇತನ ಸಿಗುವ ಕಾಲ ಸನ್ನಿಹಿತವಾಗಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಸುಮಾರು 37 ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆಯ ಅನುಸೂಚಿಯಲ್ಲಿ ಹೊಸದಾಗಿ ಸೇರಿಸಿದೆ. ಅದರಂತೆ, “ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು ಅಂದರೆ, ಮಂದಿರಗಳು, ಮಠಗಳು, ಚರ್ಚ್‌ಗಳು, ಮಸೀದಿಗಳು, ಗುರುದ್ವಾರಗಳು, ಬಸದಿಗಳು, ಗುಡಿಗಳು, ವಿಹಾರಗಳು ಹಾಗೂ ಇಸ್ಕಾನ್‌, ಆರ್ಯ ಸಮಾಜ, ಥಿಯೋಸೊಫಿಕಲ್‌ ಸೊಸೈಟಿ ಸೇರಿ ಮೇಲ್ಕಂಡ ಎಲ್ಲ ಸಂಸ್ಥೆಗಳ ಕಚೇರಿಗಳನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಲಾಗಿದ್ದು, ಇದರಲ್ಲಿ ಕೆಲಸ ಮಾಡುವವರು ಕಾನೂನು ರೀತಿ ಕನಿಷ್ಠ ವೇತನ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

“ದುಡಿಮೆಗೆ ತಕ್ಕಂತೆ ಪ್ರತಿಫ‌ಲ’ ಎಂಬ ಆಶಯದ ಹಿನ್ನೆಲೆಯಲ್ಲಿ ಕನಿಷ್ಠ ವೇತನಕ್ಕೆ ಒಳಪಡುವ ಉದ್ದಿಮೆಗಳ ವ್ಯಾಪ್ತಿಯನ್ನು ವಿಸ್ತರಿಸಿರುವ ಕಾರ್ಮಿಕ ಇಲಾಖೆ, ವಿವಿಧ 37 ಉದ್ದಿಮೆಗಳನ್ನು “ಕನಿಷ್ಠ ವೇತನ ಕಾಯ್ದೆ-1948’ರ ಅನುಸೂಚಿಯಲ್ಲಿ ಹೊಸದಾಗಿ ಸೇರಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸಲು 3 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಬಂದ ಆಕ್ಷೇಪಣೆಗಳನ್ನು ಕಾನೂನು ರೀತಿ ಪರಿಶೀಲಿಸಿದ ಬಳಿಕ ಉದ್ದಿಮೆಗಳನ್ನು ಅಂತಿಮವಾಗಿ ಕಾಯ್ದೆಯ ಅನುಸೂಚಿಗೆ ಸೇರ್ಪಡೆಗೊಳಿಸಲಾಗಿದೆ.

“ವಿದ್ಯುನ್ಮಾನ ವ್ಯವಹಾರ, ಕೋರಿಯರ್‌ ಸೇವಾ ಸಂಸ್ಥೆಗಳು, ವ್ಯಾಯಾಮ ಶಾಲೆ, ಸ್ಪಾ, ಸೌಂದರ್ಯ ಚಿಕಿತ್ಸಾ, ಮಸಾಜ್‌, ಫಿಟೆ°ಸ್‌, ಯೋಗ ಹಾಗೂ ಇತರೆ ಸೌಂದರ್ಯ ವರ್ಧಕ ಚಿಕಿತ್ಸಾ ಕೇಂದ್ರಗಳು. ಪಬ್ಲಿಕ್‌ ಅಮ್ಯೂಸ್‌ಮೆಂಟ್‌ ಪಾರ್ಕ್‌, ವಾಟರ್‌ ಥೀಮ್‌ ಪಾರ್ಕ್‌ ಹಾಗೂ ಇತರೆ ವಾಣಿಜ್ಯ ಮನೋರಂಜನಾ ಮತ್ತು ವಿಹಾರ ಸ್ಥಳಗಳು. ಮೊಬೈಲ್‌ ಟವರ್‌ ನಿರ್ವಹಣೆ, ಟಿ.ವಿ. ಕೇಬಲ್‌ ಜಾಲ, ವಾಣಿಜ್ಯ ಮೋಟಾರು ದೋಣಿ, ಲಾಂಚ್‌ಗಳು, ಸಾಂಪ್ರದಾಯಿಕ ದೋಣಿಗಳು, ಮೀನುಗಾರಿಕಾ ದೋಣಿಗಳು. ವೃದ್ಧಾಶ್ರಮ, ಅನಾಥಾಶ್ರಮ, ನಿರ್ಗತಿಕ ಮಕ್ಕಳ ಮತ್ತು ಮಹಿಳಾ ಪಾಲನಾ ಕೇಂದ್ರಗಳು, ಚಿಕ್ಕ ಮಕ್ಕಳ ಪಾಲನಾ ಕೇಂದ್ರ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕನಿಷ್ಠ ವೇತನ ಕಾಯ್ದೆ-1948ರ ಅನುಸೂಚಿಗೆ ಸೇರಿಸಲಾಗಿದೆ.

ಅದೇ ರೀತಿ ಸರ್ಕಾರೇತರ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ನೋಂದಾಯಿತ ಸೊಸೈಟಿಗಳು, ಟ್ರಸ್ಟ್‌, ಪ್ರತಿಷ್ಠಾನಗಳಿಗೆ ಹೊಂದಿಕೊಂಡಿರುವ ಕಚೇರಿಗಳು. ಅಲ್ಯೂಮಿನಿಯಂ ಹಾಗೂ ಟಿನ್‌ ಉತ್ಪಾದನಾ ಘಟಕಗಳು, ಬೆತ್ತ, ಬಿದಿರು ಉದ್ದಿಮೆ, ತೆಂಗಿನಕಾಯಿ, ನಾರು ಉತ್ಪನ್ನ ಘಟಕಗಳು, ಕಂಪ್ಯೂಟರ್‌, ಸೈಬರ್‌, ಇಂಟರ್‌ನೆಟ್‌ ಕೇಂದ್ರಗಳು, ಕರಕುಶಲ ಸಂಸ್ಥೆ, ಖಾದಿ ಮತ್ತು ಗ್ರಾಮೀಣ ಉದ್ದಿಮೆ, ಎಲ್‌ಪಿಜಿ ಸಂಗ್ರಹ ಮತ್ತು ವಿತರಣಾ ಉದ್ದಿಮೆ, ನದಿ, ಹೊಳೆಯಿಂದ ಮರಳು ಸಂಗ್ರಹ ಮತ್ತು ವಿತರಣಾ ಉದ್ದಿಮೆ, ಕೊಳವೆ ಬಾವಿ ಕೊರೆಯುವ ಮತ್ತು ನಿರ್ವಹಣೆಯ ಉದ್ದಿಮೆ, ಗುಜರಿ ವ್ಯಾಪಾರ, ಅಡುಗೆ ಉಪ್ಪು ತಯಾರಿಕಾ ಪ್ರಕ್ರಿಯೆ, ಶಾಮಿಯಾನ, ಚಪ್ಪರ, ಪೆಂಡಾಲ್‌ ನಿರ್ಮಾಣ, ಹೂವಿನ ಅಲಂಕಾರ, ಪಿಠೊಪಕರಣ ಜೋಡಣೆ, ಎಂ-ಸ್ಯಾಂಡ್‌ ಘಟಕಗಳು ಹೊಸದಾಗಿ ಕನಿಷ್ಠ ವೇತನ ಕಾಯ್ದೆಗೆ ಸೇರಿದ ಉದ್ದಿಮೆಗಳಾಗಿವೆ.

119 ಉದ್ದಿಮೆಗಳು ಕಾಯ್ದೆ ವ್ಯಾಪ್ತಿಗೆ: ಪರಿಸ್ಥಿತಿ ಹಾಗೂ ಬೇಡಿಕೆಗೆ ಅನುಗುಣವಾಗಿ ಆಗಾಗ ರಾಜ್ಯ ಸರ್ಕಾರ ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಸೇರಿಸುತ್ತದೆ. ಅದರಂತೆ 1991ರಿಂದ ಸುಮಾರು 82 ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ-1948ರ ವ್ಯಾಪ್ತಿಗೆ ಸೇರಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಹೊಸ ಉದ್ದಿಮೆಗಳನ್ನು ಕಾಯ್ದೆ ವ್ಯಾಪ್ತಿಗೆ ತಂದಿರಲಿಲ್ಲ. ಹೆಚ್ಚು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಾಗಿ ಈಗ ಹೊಸದಾಗಿ 37 ಉದ್ದಿಮೆಗಳನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಇವುಗಳಿಗೆ ಇನ್ನೂ ಕನಿಷ್ಠ ವೇತನ ನಿಗದಿಪಡಿಸಬೇಕಾಗಿದೆ. ಕಾರ್ಮಿಕ ವರ್ಗ, ಕಾರ್ಮಿಕ ಸಂಘಟನೆಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋರ್ಟ್‌ ವ್ಯಾಜ್ಯಗಳು
ಯಾವುದೇ ಉದ್ದಿಮೆ ಹೊಸದಾಗಿ ಕನಿಷ್ಠ ವೇತನ ಕಾಯ್ದೆಗೆ ಸೇರ್ಪಡೆಗೊಂಡಾಗ ಸಂಬಂಧಪಟ್ಟ ಉದ್ದಿಮೆಯ ಮಾಲೀಕರು ಬೇಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಉದ್ದಿಮೆ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಸರ್ಕಾರ ನಿಗದಿಪಡಿಸಿದಷ್ಟು ಕನಿಷ್ಠ ವೇತನ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಮಾಲೀಕರ ವಾದ. ಹೀಗಾಗಿ, 30ಕ್ಕೂ ಹೆಚ್ಚು ಉದ್ದಿಮೆಗಳ ಮಾಲೀಕರು ಸರ್ಕಾರದ ತೀರ್ಮಾನ ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದಾರೆ, ಈ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕೆಲವೊಂದಕ್ಕೆ ತಡೆಯಾಜ್ಞೆಯೂ ಸಿಕ್ಕಿದೆ. ಹೊಸ ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ತರುವ ಸರ್ಕಾರದ ಪ್ರಯತ್ನಕ್ಕೆ ಒಂದಿಷ್ಟು ಹಿನ್ನಡೆ ಉಂಟು ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುಡಿಯುವ ವರ್ಗಕ್ಕೆ ಅವರ ಶ್ರಮಕ್ಕೆ ತಕ್ಕಂತೆ ಸಂಭಾವನೆ ಒದಗಿಸುವ ಉದ್ದೇಶದಿಂದ ಹೊಸ ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಸೇರಿಸಿರುವುದು ಸ್ವಾಗತಾರ್ಹ. ಇದರಿಂದ ಕಾರ್ಮಿಕರ ವೇತನಕ್ಕೆ ಕಾನೂನಿನ ರಕ್ಷಣೆ ಸಿಕ್ಕಂತಾಗಲಿದೆ. ಕಾರ್ಮಿಕ ಇಲಾಖೆ, ಕಾರ್ಖಾನೆ ಮಾಲೀಕರು ಇದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕಾರ್ಮಿಕ ವರ್ಗ ತಮ್ಮ ಹಕ್ಕು ಪಡೆದುಕೊಳ್ಳಲು ಸಂಘಟಿತ ಪ್ರಯತ್ನ ನಡೆಸಬೇಕು.
– ಕೆ.ಎನ್‌. ಉಮೇಶ್‌, ಕಾರ್ಮಿಕ ಮುಖಂಡ

– ರಫೀಕ್‌ ಅಹ್ಮದ್‌
 

ಟಾಪ್ ನ್ಯೂಸ್

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.