Bengaluru: 1 ಕೆಜಿ ಮಾವಿನ ಬೆಲೆ ರೂ. 2.75ಲಕ್ಷ!
Team Udayavani, Jun 1, 2024, 10:41 AM IST
ಬೆಂಗಳೂರು: ಉತ್ತಮ ರುಚಿ, ತೂಕ, ಹಣ್ಣಿನ ಹೊರಗೆ ಹಾಗೂ ಒಳಗಿನ ಆಕರ್ಷಕ ಬಣ್ಣ ಹೊಂದಿರುವ ವಿದೇಶಿ ಮಾವಿನ ತಳಿಗಳು ಐಐಎಚ್ ಆರ್ ಜನರ ಗಮನ ಸೆಳೆಯಿತು.
ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು(ಐಐಎಚ್‌ಆರ್) ತಿರುಚ್ಚಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ತ್ರಿಫಲ ಮೇಳದಲ್ಲಿ ಜಪಾನ್, ಥಯ್ಲೆಂಡ್, ವಿಯೇಟ್ನಾಂ ಸೇರಿದಂತೆ ವಿವಿಧ ದೇಶಗಳ ವಿಶೇಷ ಮಾವಿನ ತಳಿಗಳನ್ನು ಹೆಚ್ಚಿನ ಗಮನ ಸಳೆದಿದೆ. ಸಾಮಾನ್ಯವಾಗಿ ದೇಸಿ ತಳಿಗಿಂತ ಅಧಿಕವಾಗಿ ವಿದೇಶಿ ತಳಿಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಜನರು ಮುಂದಾಗಿದ್ದಾರೆ.
ದುಬಾರಿ ಬೆಲೆ: ಜಗತ್ತಿನ ದುಬಾರಿ ಮಾವಿನ ತಳಿಗಳಲ್ಲಿ ಒಂದಾದ “ಮೀಯಾ ಜಾಕಿ’ ಮಾವು ಕೃಷಿ ಆಸಕ್ತರ ಗಮನ ಸೆಳೆಯಿತು. ಇದು ಅಸಾಧಾರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದ ಹೆಸರುವಾಸಿಯಾಗಿದೆ. ಒಂದು ಕೆ.ಜಿ. ಹಣ್ಣಿನ ಬೆಲೆ ಬರೋಬ್ಬರಿ 2.75 ಲಕ್ಷ ರೂ. ಇದೆ. ಒಂದು ಸಸಿ ಬೆಲೆಯು ಸಾಮಾನ್ಯ ಸಸಿಗಳ ಬೆಲೆಗಿಂತ 200 ಪಟ್ಟು ಹೆಚ್ಚಿದೆ. ಒಂದು ಸಸಿ ಬೆಲೆ 2,500 ರೂ. ಇದೆ. ಪ್ರಸ್ತುತ ಶಿವಮೊಗ್ಗದ ಅನ್ನಪೂರ್ಣೇಶ್ವರಿ ನರ್ಸರಿ ಮೀಯಾ ಜಾಕಿ ಮರದಿಂದ ಫಲ ಬಿಟ್ಟರುವ ಮಾವು ಪ್ರದರ್ಶಕ್ಕೆ ಇಟ್ಟಿದ್ದು, ಮೇಳಕ್ಕೆ ಬಂದವರು ಜನರು ಮಾವಿನ ಗಾತ್ರ ಹಾಗೂ ಬೆಲೆ ಕೇಳಿ ನಿಬ್ಬೆರಗಾಗಿ, ಲಕ್ಷ ಬೆಲೆಬಾಳುವ ಹಣ್ಣಿನ ಜತೆಗೆ ಸೆಲ್ಫಿ ತೆಗೆದುಕೊಂಡರು.
ವಿದೇಶಿ ರಫ್ತಿಗೆ ಸೂಕ್ತ: ಮೀಯಾ ಜಾಕಿ ಹಣ್ಣು ಸಾಮಾನ್ಯ ಹಣ್ಣುಗಳಿಗಿಂತ ವಿಶೇಷವಾದ ಗುಣ ಲಕ್ಷಣಗಳಿವೆ. ಒಂದು ಹಣ್ಣು ಸರಿಸುಮಾರು ಒಂದೂವರೆ ಕೆ.ಜಿ. ತೂಕ ಇರಲಿದೆ. ಮಿಯಾ ಜಾಕಿ ಹಣ್ಣುಗಳು ಹಣ್ಣಾದ ಮೇಲೆ ಕೆಡದಂತೆ ಸುಮಾರು 15 ದಿನಗಳ ಕಾಲ ಸಂರಕ್ಷಿಸಬಹುದು. ಹಾಗಾಗಿ ವಿದೇಶಗಳಿಗೆ ರಫ್ತು ಮಾಡಲು ಕೂಡ ಸೂಕ್ತವಾದಂತ ಮಾವಿನ ಹಣ್ಣಿನ ತಳಿಯಾಗಿದೆ.
ವಿಶೇಷ ಆರೈಕೆ ಬೇಕಿಲ್ಲ: ಮೀಯಾ ಜಾಕಿ ಮಾವಿನ ಸಸಿಗೆ ವಿಶೇಷ ಆರೈಕೆ ಅಗತ್ಯವಿಲ್ಲ. ಸಸಿ ನೆಟ್ಟ 2 ವರ್ಷಕ್ಕೆ ಫಲ ಸಿಗಲಿದೆ. ಒಂದು ಮರದಲ್ಲಿ ಸುಮಾರು 40ರಿಂದ 60 ಕಾಯಿಗಳ ಇಳುವರಿ ಸಿಗಲಿದೆ. ಒಂದು ಎಕರೆಯಲ್ಲಿ ಸುಮಾರು 180ರಿಂದ 200 ಗಿಡಗಳನ್ನು ನಾಟಿ ಮಾಡಬಹುದಾಗಿದೆ. 3 ವರ್ಷಕ್ಕೆ ಹೇರಳವಾಗಿ ಕಾಯಿಗಳನ್ನು ಬಿಡಲಿದೆ. ಪ್ರಸ್ತುತ ಕರ್ನಾಟಕದಲ್ಲಿ ರೈತರು ಮೀಯಾ ಜಾಕಿ ಮಾವು ಬೆಳೆಸಲು ಮುಂದಾಗಿದ್ದಾರೆ. ಉತ್ತಮ ಬೆಳೆಯ ನೀರಿಕ್ಷೆಯಲ್ಲಿ ಇದೆ. ಇದರಿಂದ ಉತ್ತಮ ಆದಾಯ ರೈತರಿಗೆ ಸಿಗಲಿದೆ ಎಂದು ಕೃಷಿ ವಿಜ್ಞಾನಿಗಳು ಅಭಿಪ್ರಾಯಪಟ್ಟರು.
ನರ್ಸರಿಯಲ್ಲಿ ಮೀಯಾ ಜಾಕಿ ಸಸಿಯನ್ನು ನೆಟ್ಟು ಫಲ ತೆಗೆಯಲಾಗಿದೆ. ರೈತರು ವಿಶೇಷವಾಗಿ ಮೀಯಾ ಜಾಕಿ ಸಸಿಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ●ಇಸ್ಮಾಯಿಲ್, ಅನ್ನಪೂರ್ಣೇಶ್ವರಿ ನರ್ಸರಿ ಶಿವಮೊಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.