ಮ್ಯಾಂಗೋ ಪಿಕ್ಕಿಂಗ್‌ಟೂರ್ 27ರಂದು
Team Udayavani, May 24, 2018, 11:17 AM IST
ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮೇ 27ರಂದು ಬೆಂಗಳೂರು ನಗರ ಗ್ರಾಹಕರಿಗಾಗಿ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಆಯೋಜಿಸಿದೆ. ಮಾವು ಬೆಳೆಗಾರರಿಗೆ ತೋಟದಲ್ಲೇ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಮಾವು ಅಭಿವೃದ್ಧಿ ನಿಗಮ ಪ್ರತಿ ವರ್ಷ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಆಯೋಜಿಸುತ್ತದೆ. ಗ್ರಾಹಕರು ತಮಗೆ ಇಷ್ಟವಾದ ಮಾವನ್ನು, ಮಾವು ಬೆಳೆಗಾರರ ತೋಟದಲ್ಲಿರುವ ಮರದಿಂದಲೇ ಕಿತ್ತು ಖರೀದಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಮ್ಯಾಂಗೋ ಪಿಕ್ಕಿಂಗ್ ಟೂರ್‌ನಲ್ಲಿ 220 ಗ್ರಾಹಕರು ಪಾಲ್ಗೊಳ್ಳಲು ಅವಕಾಶ ವಿದ್ದು, ಮೊದಲು ಬಂದವರಿಗೆ ಆದ್ಯತೆ
ನೀಡಲಾಗುತ್ತದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಕಬ್ಬನ್ ಪಾರ್ಕ್‌ನಿಂದ ಗ್ರಾಹಕ ರನ್ನು ಹೊತ್ತು 4 ಬಸ್‌ಗಳು ರಾಮ
ನಗರದ ತೋಟಗಳಿಗೆ ಸಾಗಲಿವೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವೆಂಕಟರಾಯನದೊಡ್ಡಿ ಗ್ರಾಮದ ಮಂಜು ಅವರ ತೋಟಕ್ಕೆ
ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡಮಾಲೂರು ಗ್ರಾಮದ ಕೆ.ಮುನಿರಾಜು ಅವರ ತೋಟಕ್ಕೆ ಬೆಂಗಳೂರು ನಗರ ಗ್ರಾಹಕರನ್ನು ಕರೆದೊಯ್ಯಲಾಗುವುದು ಎಂದು ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ. ನಾಗರಾಜು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಮಾವು ಖರೀದಿ ಸುವಾಗ ರಾಸಾಯಿನಿಕ ದ್ರಾವಣ ಸಿಂಪಡಿಸುತ್ತಾರೆ ಎಂಬ ಭಯ ಗ್ರಾಹಕರಿಗೆ ಇರುತ್ತದೆ. ಅಲ್ಲದೆ, ರಾಸಾಯಿನಿಕ ದ್ರಾವಣ ಸಿಂಪಡಿಸಿದ ಮಾವಿನ ಹಣ್ಣುಗಳ ರುಚಿ ಕೂಡ ಕಡಿಮೆ. ಹೀಗಾಗಿ ಗ್ರಾಹಕರ ಹಿತದ ಜತೆಗೆ, ಮಾವು ಬೆಳೆಗಾರರಿಗೂ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರಾದ ಎಲ್.ಲಲಿತಾ ಹೇಳಿದ್ದಾರೆ
ಅನ್‌ಲೈನ್‌ನಲ್ಲಿ ನೋಂದಣಿ “ಮ್ಯಾಂಗೋ ಪಿಕ್ಕಿಂಗ್ ಟೂರ್’ ಬೆಂಗಳೂರು ನಗರ ಗ್ರಾಹಕರಿಗೆ ಮಾತ್ರ. ಈಗಾಗಲೇ ಮಾವು ಅಭಿವೃದ್ಧಿ ನಿಗಮದ ವೆಬ್‌ಸೈಟ್ www.ksmdmcl.org. ನಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಗ್ರಾಹಕರು Online/RTGS/NEFT ಮೂಲಕ ತಿಳಿಸಿರುವ ಖಾತೆಗೆ 100 ರೂ. ಪಾವತಿ ಸಬೇಕು. ಪಾವತಿ ವಿವರಗಳನ್ನು [email protected] ಗೆ ಕಳುಹಿಸಿಕೊಡಲು ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳು ಕೋರಿದ್ದಾರೆ. ಆಸಕ್ತರು, ಹೆಚ್ಚಿನ ಮಾಹಿತಿಗಾಗಿ 800-22236837 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.