Manipal Hospitals; ‘ವಾಯ್ಸಸ್ ಆಫ್ ವಿಕ್ಟರಿ’ ಮೂಲಕ ವಿಶ್ವ ಕ್ಯಾನ್ಸರ್ ದಿನ ಆಚರಣೆ
Team Udayavani, Feb 4, 2024, 10:27 AM IST
ಬೆಂಗಳೂರು: ಓಲ್ಡ್ ಏರ್‌ಪೋರ್ಟ್ ರೋಡ್ (ಓಎಆರ್)ನಲ್ಲಿರುವ ಮಣಿಪಾಲ್ ಹಾಸ್ಪಿಟಲ್ಸ್, ಕ್ಯಾನ್ಸರ್ ನಲ್ಲಿ ಬದುಕುಳಿದವರನ್ನು ಗೌರವಿಸುವ ಮೂಲಕ ಮತ್ತು ಅವರ ವಿಜಯಗಳನ್ನು ಎತ್ತಿ ಹಿಡಿಯುವ ಮೂಲಕ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಿದೆ. ‘ವಾಯ್ಸ್ ಆಫ್ ವಿಕ್ಟರಿ: ಸೆಲೆಬ್ರೇಟಿಂಗ್ ದಿ ಜರ್ನೀಸ್ ಆಫ್ ಕ್ಯಾನ್ಸರ್ ವಾರಿಯರ್ಸ್’ ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವು, ಕ್ಯಾನ್ಸರ್ ನಲ್ಲಿ ಬದುಕುಳಿದವರನ್ನು ಗೌರವಿಸುವ ಮೂಲಕ ಮತ್ತು ಮಾರಣಾಂತಿಕ ಕಾಯಿಲೆಯಿಂದ ಹೊರಬಂದ ಅವರ ಕಥೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವ ಮೂಲಕ ಕ್ಯಾನ್ಸರ್ ವಿರುದ್ಧ ಹೋರಾಡುವವರಿಗೆ ಭರವಸೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ತಂತ್ರಜ್ಞಾನವು ಕ್ಯಾನ್ಸರ್ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ (ಮಶಿನ್ ಲರ್ನಿಂಗ್) ಮತ್ತು ಇತ್ಯಾದಿಗಳಂತಹ ಮುಂದುವರಿದ ತಂತ್ರಜ್ಞಾನಗಳ ಶಕ್ತಿಯನ್ನು ವೈದ್ಯರು ಮತ್ತು ಸಂಶೋಧಕರು ಬಳಕೆಗೆ ತರುತ್ತಾರೆ. ತಂತ್ರಜ್ಞಾನದ ಆವಿಷ್ಕಾರವು ಆರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡಲು ಆರೋಗ್ಯ ಕ್ಷೇತ್ರಕ್ಕೆ ಸಹಾಯ ಮಾಡಿದೆ. ರೋಗಿಗಳ ರೋಗನಿರ್ಣಯಕ್ಕೆ ಅನುಗುಣವಾಗಿ ಸುಧಾರಿತ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಶಸ್ತ್ರಚಿಕಿತ್ಸೆಗಳ ಅಗತ್ಯವನ್ನು ಕಡಿಮೆ ಮಾಡಿದೆ. ಅಂತಹ ಒಂದು ಮಹತ್ವದ ಆವಿಷ್ಕಾರವೆಂದರೆ, ಅದು ಇಮ್ಯುನೊಥೆರಪಿ.
ಮಣಿಪಾಲ್ ಹಾಸ್ಪಿಟಲ್ಸ್ (ಓಎಆರ್) ಮೆಡಿಕಲ್ ಆಂಕೊಲಾಜಿ ಕನ್ಸಲ್ಟೆಂಟ್ ಡಾ. ಪೂನಂ ಪಾಟೀಲ್, ಉದ್ದೇಶಿತ ಚಿಕಿತ್ಸೆ ಮತ್ತು ಇಮ್ಯುನೊಥೆರಪಿ ಕುರಿತ ಪ್ಯಾನೆಲ್ ಚರ್ಚೆಯ ಸಂದರ್ಭದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇಮ್ಯುನೊಥೆರಪಿಯ ಕ್ರಾಂತಿಕಾರಕ ಪರಿಣಾಮವನ್ನು ಒತ್ತಿಹೇಳಿದರು. ಅವರು, “ಕಳೆದ ಆರರಿಂದ ಏಳು ವರ್ಷಗಳಲ್ಲಿ, ಆರೋಗ್ಯ ರಕ್ಷಣೆ ಉದ್ಯಮವು ಇಮ್ಯುನೊಥೆರಪಿಯಿಂದಾಗಿ ಕ್ಯಾನ್ಸರ್ ಆರೈಕೆಯಲ್ಲಿ ಬದಲಾವಣೆಯನ್ನು ಕಂಡಿದೆ. ಈ ಅತ್ಯಾಧುನಿಕ ಚಿಕಿತ್ಸೆಯು ಸಾಂಪ್ರದಾಯಿಕ ವಿಧಾನಗಳಿಗೆ ಪರ್ಯಾಯವನ್ನು ಒದಗಿಸುವ ಮೂಲಕ ಕ್ಯಾನ್ಸರ್ ಕೋಶಗಳನ್ನು ಎದುರಿಸಲು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ರೋಗಿಯ ಚಿತಿಕ್ಸಾ ಫಲಿತಾಂಶಗಳ ಮೇಲೆ ಇಮ್ಯುನೊಥೆರಪಿಯ ಕ್ರಾಂತಿಕಾರ ಪರಿಣಾಮದ ಆಧಾರ ಮೇಲೆ ಈ ಆವಿಷ್ಕಾರವು 2018ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆಯಿತು” ಎಂದು ಹೇಳಿದರು.
ಮಣಿಪಾಲ್ ಹಾಸ್ಪಿಟಲ್ಸ್ ಸಮಗ್ರ ಕ್ಯಾನ್ಸರ್ ಚಿಕಿತ್ಸೆಗಾಗಿ ಇಮ್ಯುನೊಥೆರಪಿಯ ಬಳಕೆಯನ್ನು ಬಳಸಿಕೊಂಡಿದೆ ಮತ್ತು ಪರಿಷ್ಕರಿಸಿದೆ. ಈ ಕುರಿತು ಪೂನಂ ಪಾಟೀಲ್, “350 ರಿಂದ 400 ಕ್ಕೂ ಹೆಚ್ಚು ರೋಗಿಗಳು ಈ ಅದ್ಭುತ ಚಿಕಿತ್ಸೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಇದು ಕನಿಷ್ಠ ಅಡ್ಡಪರಿಣಾಮಗಳನ್ನು ಹೊಂದಿದೆ ಮತ್ತು ನಮ್ಮ ದೇಹದ ಸ್ವಾಭಾವಿಕ ಪ್ರತಿರಕ್ಷಣ ಗುಣವನ್ನು ಬಳಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ. ಇಮ್ಯುನೊಥೆರಪಿಯು ದೀರ್ಘಾವಧಿಯ ಫಲಿತಾಂಶ ನೀಡುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಹೇಳಿದ್ದಾರೆ.
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ, ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗಳು-ಉದ್ದೇಶಿತ ಚಿಕಿತ್ಸೆಗಳು, ಇಮ್ಯುನೊಥೆರಪಿಗಳು, ನಿಖರವಾದ ಔಷಧ ಮತ್ತು ವೈಯಕ್ತಿಕಗೊಳಿಸಿದ ಯೋಜನೆಗಳು-ಪರಿಣಾಮಕಾರಿ ಫಲಿತಾಂಶ ನೀಡುತ್ತಿದ್ದು, ದೀರ್ಘಕಾಲದವರೆಗಿನ ಬದುಕುಳಿಯುವಿಕೆ ಮತ್ತು ಸುಧಾರಿತ ಜೀವನದ ಗುಣಮಟ್ಟವನ್ನು ಒದಗಿಸುತ್ತವೆ. ಕ್ಯಾನ್ಸರ್ ಹರಡುವ ಮಾರ್ಗಗಳನ್ನು ಅಡ್ಡಿಪಡಿಸುವ ಮೂಲಕ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುವ ಮೂಲಕ, ಈ ವಿಧಾನಗಳು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಪ್ರಗತಿಯನ್ನು ಒದಗಿಸುತ್ತವೆ. ನಡೆಯುತ್ತಿರುವ ಹೊಸ ಸಂಶೋಧನೆಯು ಹೊಸ ಗುರಿಗಳು ಮತ್ತು ಸಂಯೋಜನೆಗಳನ್ನು ಬಹಿರಂಗಪಡಿಸಲಿದ್ದು, ಸುಧಾರಿತ ಫಲಿತಾಂಶದ ಭರವಸೆ ನೀಡುತ್ತದೆ ಮತ್ತು ಈ ಅಸಾಧಾರಣ ಕಾಯಿಲೆಯ ವಿರುದ್ಧ ಹೋರಾಟದಲ್ಲಿ ಗಣನೀಯ ಪ್ರಗತಿಯನ್ನು ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.