ಮಾರುತಿ ಶೋ ರೂಂಗೆ ಚಾಲನೆ
Team Udayavani, Mar 20, 2019, 6:35 AM IST
ಬೆಂಗಳೂರು: ದೇಶದ ನಂ.1 ಮಾರುತಿ ಸುಜುಕಿ ಕಾರ್ ಡೀಲರ್ ವರುಣ್ ಮೋಟಾರ್ ಪ್ರೈ.ಲಿ., ನಗರದ ಹೆಬ್ಟಾಳ ರಿಂಗ್ ರೋಡ್‌ನಲ್ಲಿ ಆರಂಭಿಸಿರುವ ಮೊದಲ ಹೊಸ ಮಾರುತಿ ಸುಜುಕಿ ಅರಿನಾ ಶೋ ರೂಂಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಬೆಂಗಳೂರು ಮಹಾನಗರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಇಲ್ಲಿ ಸ್ಟಾರ್ಟ್‌ಅಪ್ ಕಂಪನಿಗಳನ್ನು ಆರಂಭಿಸುವವರಿಗೆ ಉತ್ತಮ ವಾತಾವರಣ ಹಾಗೂ ಬಹಳಷ್ಟು ಅವಕಾಶಗಳಿವೆ. ಹೊಸದಾಗಿ ಕಂಪನಿಗಳನ್ನು ಆರಂಭಿಸಲು ಇಚ್ಛಿಸುವ ಉದ್ದಿಮೆದಾರರಿಗೆ ಸರ್ಕಾರದಿಂದ ನೀಡುವ ಸಹಕಾರ, ಸವಲತ್ತುಗಳನ್ನು ಮುಂದುವರಿಸಲಾಗುವುದು. ಅದೇ ರೀತಿ ಮಾರುತಿ ಸುಜುಕಿ ಇಂಡಿಯಾ ಲಿ., ಕರ್ನಾಟಕದಲ್ಲಿ ಉತ್ಪದನಾ ಘಟಕ ಸ್ಥಾಪಿಸಲು ಇಚ್ಛಿಸಿದ್ದಲ್ಲಿ ಮುಕ್ತ ಅವಕಾಶ ಕಲ್ಪಿಸಿ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಹಾಷಿಮೊಟೊ ಮಾತನಾಡಿ, ವರುಣ್ ಮೋಟಾರ್ ಪ್ರೈ.ಲಿ., ಮಾರುತಿ ಸುಜುಕಿಯ ಅತ್ಯಂತ ಭರವಸೆಯ ಡೀಲರ್ ಆಗಿದೆ. ಅತ್ಯುತ್ತಮ ಗ್ರಾಹಕ ಸೇವೆಗೆ ಸತತವಾಗಿ 13 ಬಾರಿ ಪ್ಲಾಟಿನಂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವುದು ಅದರ ಸೇವೆಗಿಡಿದ ಕೈಗನ್ನಡಿ. 2016ರ ಏಪ್ರಿಲ್‌ನಿಂದ ಕಾರ್ಯಾಚರಣೆ ಆರಂಭಿಸಿದ ವರುಣ್ ಮೋಟಾರ್ ನಗರದ ಜನತೆಗೆ ಉತ್ತಮ ಸೇವೆ ನೀಡುತ್ತಿದೆ. ಗ್ರಾಹಕರಿಂದ ವರುಣ್ ಮೋಟಾರ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತಸ ತಂದಿದೆ ಎಂದರು.
ಮಾರುತಿ ಸುಜುಕಿ ಇಂಡಿಯಾ ಲಿ., ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಎಸ್. ಕಲ್ಸಿ, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪಿ.ಎಸ್. ಜಯಕುಮಾರ್, ವರುಣ್ ಸಮೂಹದ ಅಧ್ಯಕ್ಷ ವಿ. ಪ್ರಭು ಕಿಶೋರ್, ವ್ಯವಸ್ಥಾಪಕ ನಿರ್ದೇಶಕ ವರುಣ್ ದೇವ್, ಕಾರ್ಯ ನಿರ್ವಾಹಕ ನಿರ್ದೇಶಕ ಆರ್.ಸಿ. ರಾಜು, ನಿರ್ದೇಶಕ ಡಿ.ಕೆ. ರಾಜು, ಸಿಇಒ ವಿಜಯ್ ರೆಡ್ಡಿ ಹಾಗೂ ಜನರಲ್ ಮ್ಯಾನೇಜರ್ ಕಲೀಮ್ ಶೇಖ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
US; ಭಾರತ ಜತೆೆ ಅಣುಶಕ್ತಿ ಒಪ್ಪಂದಕ್ಕೆ ಅಡ್ಡಿಯಾಗುವ ನಿಬಂಧನೆ ರದ್ದು
Mangaluru:ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ;ಅಧ್ಯಕ್ಷರಾಗಿ ಡಾ| ಪ್ರಭಾಕರ ಶಿಶಿಲ ಆಯ್ಕೆ
Gold ಬಳಿಕ ಬೆಳ್ಳಿಗೂ ಹಾಲ್‌ಮಾರ್ಕ್ ಚಿಹ್ನೆ ಕಡ್ಡಾಯ ಚಿಂತನೆ:ಜೋಶಿ
VHP; ಸರಕಾರದ ಹಿಡಿತದಿಂದ ದೇಗುಲಗಳ ಮುಕ್ತಿಗೆ ಆಂದೋಲನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.