ಹಸುಗಳ ಒಡಲು ಸೇರುತ್ತಿವೆ ಮಾಸ್ಕ್


Team Udayavani, Apr 19, 2020, 11:04 AM IST

ಹಸುಗಳ ಒಡಲು ಸೇರುತ್ತಿವೆ ಮಾಸ್ಕ್

ಬೆಂಗಳೂರು: ವೈದ್ಯರು, ವೈದ್ಯಕೀಯ ಸಿಬ್ಬಂದಿ, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರು ಬಳಸಬೇಕಿರುವ ಮಾಸ್ಕ್ಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಧರಿಸಿ, ಎಲ್ಲೆಂದರಲ್ಲಿ ಎಸೆಯುತ್ತಿರುವುದು ಬಿಡಾಡಿ ಹಸು, ಬೀದಿನಾಯಿ ಹಾಗೂ ಕಸದ ರಾಶಿ ಹೆಕ್ಕುವ ಪಕ್ಷಿಗಳಿಗೂ ಕಂಟಕವಾಗುತ್ತಿದೆ.

ಪ್ರಧಾನಿ ಮೋದಿಯವರು ಇತ್ತೀಚೆಗೆ ಕರೆ ನೀಡಿ ಎಲ್ಲರೂ ಮಾಸ್ಕ್ ಧರಿಸಲು ಮನವಿ ಮಾಡಿದ್ದರು. ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಲು ಪ್ರಧಾನಿಯವರು ಪ್ರೋತ್ಸಾಹಿಸಿದ್ದರು. ಆದರೆ, ಅನೇಕರು ಇಂದಿಗೂ ಅಂಗಡಿಯಿಂದಲೇ ದುಬಾರಿ ಬೆಲೆ ಕೊಟ್ಟು ಮಾಸ್ಕ್ ಖರೀದಿಸಿ, ಧರಿಸಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಎನ್‌-95 ಸಹಿತವಾಗಿ ವೈರಸ್‌ ತಡೆಯುವ ಕೆಲವು ಬಗೆಯ ಮಾಸ್ಕಗ ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಜನ ಸಾಮಾನ್ಯರಲ್ಲಿ ಬಹುತೇಕರು ನಿತ್ಯದ ಓಡಾಟಕ್ಕೂ ಇದೇ ಮಾಸ್ಕ್ ಬಳಸುತ್ತಿದ್ದಾರೆ.

ಕೋವಿಡ್ 19 ಹಬ್ಬುವ ಆತಂಕ: ಜನ ಉಪಯೋಗಿಸಿದ ಮಾಸ್ಕ್ಗಳನ್ನು ಕಸದ ಬುಟ್ಟಿ, ರಸ್ತೆ ಬದಿಯ ಗುಂಡಿಗಳಿಗೆ ಎಸೆಯುತ್ತಿದ್ದಾರೆ. ಹೀಗಾಗಿ ಈ ಮಾಸ್ಕ್ಗಳು ನೇರವಾಗಿ ಬಿಡಾಡಿ ಹಸುಗಳ ಹೊಟ್ಟೆ ಸೇರುತ್ತಿವೆ. ಬೀದಿನಾಯಿಗಳು ಹಿಡಿದು ಎಳೆದಾಡುತ್ತಿವೆ, ಪಕ್ಷಿಗಳನ್ನು ಅದನ್ನೇ ಕುಕ್ಕುತ್ತಿವೆ. ಇದರಿಂದ ಪಾಣಿ, ಪಕ್ಷಿಗಳಿಗೆ ಕೋವಿಡ್ 19 ಹಬ್ಬಬಹುದು ಎಂಬ ಆತಂಕವೂ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಕಸದ ರಾಶಿಗಳಲ್ಲಿ ಮಾಸ್ಕ್ ಪ್ರಮಾಣವೇ ಹೆಚ್ಚಾಗುತ್ತಿದೆ. ವೈದ್ಯಕೀಯ ತಾಜ್ಯವನ್ನು ಯಾವ ರೀತಿ ವಿಂಗಡಿಸಬೇಕು ಎಂಬುದರ ಬಗ್ಗೆ ಸರ್ಕಾರ ಸೂಕ್ತ ನಿರ್ದೇಶನ ನೀಡಿದ್ದರೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ.

ಆರೋಗ್ಯದ ಮೇಲೆ ಪರಿಣಾಮ: ಕಸದ ರಾಶಿಯಲ್ಲಿ ಬಿದ್ದಿರುವ ಮಾಸ್ಕ್ಗಳನ್ನು ಹಸುಗಳು ತಿನ್ನುತ್ತಿರುವ ಮತ್ತು ಬೀದಿ ನಾಯಿಗಳು ಎಳೆದಾಡುತ್ತಿರುವ ದೃಶ್ಯ ಸಾಮಾನ್ಯವಾಗಿವೆ. ಮಾಸ್ಕ್ಗಳು ಸಮರ್ಪಕ ರೀತಿಯಲ್ಲಿ ವಿಲೇವಾರಿಯಾಗದೇ ರಸ್ತೆ ಬದಿಯ ಕಸದ ರಾಶಿ ಸೇರಿದರೆ ಪಶುಗಳ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಪಶು ವೈದ್ಯರೊಬ್ಬರು ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈದ್ಯಕೀಯ ತಾಜ್ಯ ವಿಲೇವಾರಿಯನ್ನು ಖಾಸಗಿ ಸಂಸ್ಥೆಗಳಿಗವಹಿಸಲಾಗಿದೆ. ಕ್ವಾರಂಟೈನ್‌ ಆದ ಮನೆಗಳಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತಾಜ್ಯವನ್ನು ಸಂಗ್ರಹಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರುವ ಏಜೆನ್ಸಿಗಳಿಗೆ ವಲಯ ವಾರು ನೀಡಲಾಗಿದೆ. ಈ ತ್ಯಾಜ್ಯವಿಲೇವಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ಕಡ್ಡಾಯ ಕ್ರಮದ ಬಗ್ಗೆಯೂ ನಿರ್ದೇಶನ ನೀಡಿದೆ.

ಇಷ್ಟೆಲ್ಲದರ ನಡುವೆಯೂ ನಗರದ ಕಸದ ರಾಶಿಯಲ್ಲಿ ಮಾಸ್ಕ್ಗಳು ರಾರಾಜಿಸುತ್ತಿವೆ. ನಿತ್ಯವು ಬಿಡಾಡಿ ಹಸುಗಳು ಕಸದ ರಾಶಿಯಲ್ಲಿರುವ ಮಾಸ್ಕ್ಗಳನ್ನು ತಿನ್ನುತ್ತಿವೆ. ಈ ವಾತಾವರಣವು ಹಸುಗಳ ಆರೋಗ್ಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕೂಲ ಪರಿಣಾಮ ಬೀರಲಾಗುತ್ತಿದೆ ಎಂದು ಹೇಳಾಗುತ್ತಿದೆ.

ಸಾರ್ವಜನಿಕರಿಗೆ ಜಾಗೃತಿ ಅಗತ್ಯ :  ವೈದ್ಯರು, ವೈದ್ಯಕೀಯ ಸಿಬ್ಬಂದಿ, ದಾದಿಯರು ಅಥವಾ ಆಶಾ ಕಾರ್ಯಕರ್ತೆಯರು ಬಳಸುವ ಮಾಸ್ಕ್ಗಳು ವ್ಯವಸ್ಥಿತ ವಿಲೇವಾರಿ ಯಾಗುತ್ತಿದೆ. ಆದರೆ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಬೇಕಿರುವ ಮಾಸ್ಕ್ಗಳನ್ನು ಜನ ಸಾಮಾನ್ಯರು ಉಪ ಯೋಗಿಸಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದು ನಿಲ್ಲಬೇಕು. ಕೋವಿಡ್ 19  ಸೋಂಕಿತರನ್ನು ಉಪಚರಿಸುವ, ಚಿಕಿತ್ಸೆ ನೀಡು ವ ವರ್ಯಾರು ಕೂಡ ಮಾಸ್ಕ್ ಅಥವಾ ಪಿಪಿಇ ಕಿಟ್‌ಗಳನ್ನು ಎಲ್ಲಿ ಯಂದರಲ್ಲಿ ಎಸೆಯುವುದಿಲ್ಲ. ಅದಕ್ಕಿರುವ ನಿಯಮಗಳನ್ನು ಸಮರ್ಪ ಕವಾಗಿ ಪಾಲನೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸಾರ್ವ ಜನಿಕರೇ ಇನ್ನಷ್ಟು ಜಾಗೃತರಾಗುವ ಅಗತ್ಯವಿದೆ ಎಂದು ವಿವರಿಸಿದರು.

ಬಿಡಾಡಿ ಪಶುಗಳ ರಕ್ಷಣೆ : ರಾಜ್ಯದಲ್ಲಿ ಹಸು ಸಹಿತವಾಗಿ ಯಾವುದೇ ಪ್ರಾಣಿಗೆ ಕೊರೊನಾ ಬಂದಿರುವ ಬಗ್ಗೆ ವರದಿಯಾಗಿಲ್ಲ. ಮಾಸ್ಕ್ಗಳನ್ನು ಬಿಡಾಡಿ ಹಸುಗಳು ತಿನ್ನುತ್ತಿರುವ ಬಗ್ಗೆ ಮಾಹಿತಿಯಿದೆ.ಆದರೆ, ಸಾರ್ವಜನಿಕರು ಕೂಡ ಉಪಯೋಗಿಸಿದ ಮಾಸ್ಕ್ಗಳನ್ನು ಎಲ್ಲಿಯಂದರಲ್ಲಿ ಎಸೆಯದೇ ಸಮರ್ಪಕ ವಿಲೇವಾರಿ ಮಾಡಬೇಕು. ಪ್ರಾಣಿಗಳ ಆರೋಗ್ಯದ ಹಿತ ರಕ್ಷಣೆಗಾಗಿ ಹೊರಡಿಸಿರುವ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಿಡಾಡಿ ಹಸುಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುತ್ತಿದ್ದೇವೆ ಎಂದು ಪಶುಸಂಗೋಪಾನ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Cong-sabhe

Congress Session: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಜ.21ಕ್ಕೆ ಮರುನಿಗದಿ

sunil-karkala

ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್‌ ಕುಮಾರ್‌

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Minister-CR-patil

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Cong-sabhe

Congress Session: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಜ.21ಕ್ಕೆ ಮರುನಿಗದಿ

sunil-karkala

ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್‌ ಕುಮಾರ್‌

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Minister-CR-patil

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.