ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್
Team Udayavani, Sep 17, 2017, 11:08 AM IST
ಬೆಂಗಳೂರು: ಕೆ.ಆರ್.ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಜಿ.ಪದ್ಮಾವತಿ ಅವರು, ತ್ಯಾಜ್ಯ ವಿಲೇವಾರಿ ಆಗದಿರುವುದ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆಯಲ್ಲೇ ವ್ಯಾಪಾರ ಮಾಡುವುದನ್ನು ಕಂಡು ಗರಂ ಆದ ಮೇಯರ್, “ರಸ್ತೆ ಇರುವುದು ಜನ ಓಡಾಡಲು. ವ್ಯಾಪಾರಿಗಳು ರಸ್ತೆ ನಡುವೆಯೇ ಕುಳಿತು ವ್ಯಾಪಾರ ಮಾಡಿದರೆ ಜನ ಓಡಾಡುವುದೆಲ್ಲಿ? ನೀವು ಏನು ಮಾಡುತ್ತಿದ್ದೀರಾ? ಪ್ರತಿದಿನ ಬಂದು ಅವರನ್ನು ಓಡಿಸೋಕೆ ನಾನೇನು ಮೇಸ್ತ್ರಿನಾ?’ ಎಂದು ಗುಡುಗಿದರು.
ಮಾರುಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಗಳನ್ನು ಅಲ್ಲೇ ಇರಿಸಿರುವುದ ಕಂಡು ಆಕ್ಷೇಪ ವ್ಯಕ್ತಪಡಿಸಿದ ಮೇಯರ್, “ಮೂರ್ತಿ ಇದೆ ಎಂದು ಯಾರಾದರೂ ದೇವಸ್ಥಾನ ಕಟ್ಟಿದರೆ ಯಾರು ಹೊಣೆ? ಮೊದಲು ಗಣೇಶ ಮೂರ್ತಿ ವಿಸರ್ಜಿಸಿ,’ ಎಂದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಹೂವಿನ ಮಾರುಕಟ್ಟೆಯಲ್ಲಿ ತ್ಯಾಜ್ಯ ತೆರವುಗೊಳಿಸದ ಅಧಿಕಾರಿಗೆ ನೋಟಿಸ್ ಜಾರಿಗೊಳಿಸುವಂತೆ ಆರೋಗ್ಯ ವಿಭಾಗದ ಜಂಟಿ ಆಯುಕ್ತ ಸಫ್ರಾìಜ್ ಖಾನ್ ಆದೇಶಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.