ಹಿರಿಯ ಪ್ರಚಾರಕ್‌ ಮೈ.ಚ.ಜಯದೇವ ಇನ್ನಿಲ್ಲ


Team Udayavani, Feb 21, 2017, 12:08 PM IST

rss-leadfer.jpg

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹಿರಿಯ ಪ್ರಚಾರಕ ಮೈ.ಚ.ಜಯದೇವ (85) ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ಅವಿವಾಹಿತರಾಗಿದ್ದ ಮೈ.ಚ. ಜಯದೇವ ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗ ಳೂರಿನ ಸಾಗರ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫ‌ಲಕಾರಿಯಾಗದೆ ಸೋಮವಾರ ಬೆಳಗ್ಗೆ 9 ಗಂಟೆಯಲ್ಲಿ ವಿಧಿವಶರಾದರು.

ಜಯದೇವ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಚಾಮ ರಾಜಪೇಟೆಯಲ್ಲಿರುವ ಸಂಘದ ಕಚೇರಿಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಸೋಮ ವಾರ ಪಾರ್ಥಿವ ಶರೀರವನ್ನು ಅವರ ಹುಟ್ಟೂರು ಮೈಸೂರಿಗೆ ಕೊಂಡೊಯ್ದು ಅಲ್ಲಿನ ರುದ್ರಭೂಮಿಯಲ್ಲಿ ಸಂಜೆ 3 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ.

ರಾಜ್ಯಪಾಲ. ವಿ.ಆರ್‌.ವಾಲಾ, ಆರೆಸ್ಸೆಸ್‌ ಹಿರಿಯ ಪ್ರಚಾರಕ ಚಂದ್ರ ಶೇಖರ ಭಂಡಾರಿ, ಎನ್‌.ಸಿ. ಶೇಷಾದ್ರಿ (ಶೇಷು), ಪ್ರಾಂತೀಯ ಕಾರ್ಯ ಕಾರಿಣಿ ಮಂಡಳಿ ಸದಸ್ಯ ವೈ.ಕೆ. ರಾಘವೇಂದ್ರರಾವ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂ ರಪ್ಪ, ರಾಷ್ಟ್ರೋತ್ಥಾನ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಹೆಗ್ಡೆ, ಸಂಶೋಧಕ ಡಾ.ಎಂ.ಚಿದಾ ನಂದಮೂರ್ತಿ, ಕ್ಷೇತ್ರ ಸಂಘಚಾಲಕ ವಿ.ನಾಗರಾಜ್‌ ಸೇರಿದಂತೆ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌, ಸರ ಕಾರ್ಯ ವಾಹ ಸುರೇಶ್‌ ಭಯ್ನಾಜಿ ಜೋಷಿ, ಸಹಸರಕಾರ್ಯವಾಹ ಸುರೇಶ್‌ ಸೋನಿ, ದತ್ತಾತ್ರೇಯ ಹೊಸಬಾಳೆ, ಡಾ. ಕೃಷ್ಣಗೋಪಾಲ, ವಿ. ಭಾಗಯ್ಯ ಹಾಗೂ ಆರೆಸ್ಸೆಸ್‌ ಪ್ರಮುಖ ರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್‌, ಮಂಗೇಶ್‌ ಭೇಂಡೆ, ಸಿ.ಆರ್‌. ಮುಕುಂದ್‌, ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್‌ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹೆಜ್ಜೆ ಗುರುತು
* 1950ರ ದಶಕದಲ್ಲಿ ಆರ್‌ಎಸ್‌ಎಸ್‌ ವಿಚಾರ ಧಾರೆಯತ್ತ ಆಕರ್ಷಿತ
* ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕ ರಾಗಿ ಸೇವೆ
* 1960ರಿಂದ 1974ರ ವರೆಗೆ ಬೆಂಗಳೂರು ಕಾರ್ಯವಾಹ ಜವಾಬ್ದಾರಿ 
* 2002ರಿಂದ ಸಹ ಕ್ಷೇತ್ರೀಯ ಪ್ರಚಾರಕ ರಾಗಿ ನಿಯುಕ್ತಿ
* 2004ರಲ್ಲಿ ಕ್ಷೇತ್ರೀಯ ಪ್ರಚಾರಕ
* 2009ರಿಂದ ಅಖೀಲ ಭಾರತೀಯ ಕಾರ್ಯ ಕಾರಿಣಿ ಸದಸ್ಯರಾಗಿ ಜವಾಬ್ದಾರಿ
* 2012ರಲ್ಲಿ ಅಖೀಲ ಭಾರತೀಯ ಕಾರ್ಯ ಕಾರಿಣಿಯ ಆಮಂತ್ರಿತ ಸದಸ್ಯರಾಗಿ ನಿಯುಕ್ತಿ
* 2015ರ ಮಾರ್ಚ್‌ ಬಳಿಕ ಹಿರಿಯ ಪ್ರಚಾರಕರಾಗಿ ಮಾರ್ಗದರ್ಶನ

ಕುಶಲ ಸಂಘಟಕರೆಂದೇ ಖ್ಯಾತಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಓರ್ವ ಕುಶಲ ಸಂಘಟಕ ಎಂದೇ ಜನಪ್ರಿಯರಾಗಿದ್ದ ಮೈಸೂರು ಚನ್ನಬಸಪ್ಪ ಜಯದೇವ (ಮೈ.ಚ.ಜಯದೇವ) ಅವರು 1932 ರ ಫೆ. 18 ರಂದು ಮೈಸೂರಿನಲ್ಲಿ ಜನಿಸಿದರು. ಚನ್ನಬಸಪ್ಪ-ಭದ್ರಮ್ಮ ದಂಪತಿಯ ನಾಲ್ವರು ಮಕ್ಕಳ ಪೈಕಿ ಕೊನೆಯವರು ಜಯದೇವ. 

ಮೈಸೂರಿನಲ್ಲಿ ಬಿಎಸ್ಸಿ ಪದವಿ ಪೂರೈಸಿದ ನಂತರ ಕಾನೂನು ವ್ಯಾಸಂಗ ಮಾಡಿದ ಅವರು 1950ರ ದಶಕದಲ್ಲಿ ಆರ್‌ಎಸ್‌ಎಸ್‌ ವಿಚಾರಧಾರೆಯತ್ತ ಆಕರ್ಷಿತರಾಗಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡರು. ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬೆಂಗಳೂರಿನ ಪ್ರತಿಷ್ಠಿತ ಎಚ್‌ಎಂಟಿ ಮತ್ತು ಹಿಂದುಸ್ತಾನ್‌ ಗ್ಯಾರೇಜ್‌ ಮೋಟಾರ್ನಲ್ಲಿ ವ್ಯವಸ್ಥಾಪಕರಾಗಿಯೂ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.

1960ರಲ್ಲಿ ಆರ್‌ಎಸ್‌ಎಸ್‌ ಬೆಂಗಳೂರು ಮಹಾನಗರ ಕಾರ್ಯವಾಹ ಜವಾಬ್ದಾರಿ ಸ್ವೀಕರಿಸಿ 1974ರ ತನಕ ಸುದೀರ್ಘ‌ ಸೇವೆ ಸಲ್ಲಿಸಿದ್ದರು.1965ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ ಸ್ಥಾಪನೆಯಲ್ಲಿ ಮೈ.ಚ.ಜಯದೇವ ಮಹತ್ವದ ಪಾತ್ರ ವಹಿಸಿದ್ದರು. 1965ರಿಂದ 1995ರವರೆಗೆ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ವ್ಯವಸ್ಥಾಪಕರಾಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಸೇವೆಯ ಮೂಲಕ ಪರಿಷತ್‌ ರಾಜ್ಯಾದ್ಯಂತ ವ್ಯಾಪಿಸುವಲ್ಲಿ ಶ್ರಮಿಸಿದರು. 

ನೇಪಥ್ಯಕ್ಕೆ ಸರಿಯುತ್ತಿದ್ದ ರಾಷ್ಟ್ರೀಯ ವಿಚಾರಧಾರೆಗಳನ್ನು ರಾಜ್ಯದಲ್ಲಿ ಪಸರಿಸುವ ಉದ್ದೇಶದಿಂದ ರಾಷ್ಟ್ರೀಯ ದೃಷ್ಟಿಕೋನದ ಸಾಹಿತ್ಯ ರಚನೆ ಕಾರ್ಯವನ್ನು ಪ್ರಾರಂಭಿಸಿ, ಅದಕ್ಕಾಗಿ ನೂರಾರು ಯುವ ಲೇಖಕರನ್ನು ರೂಪಿಸಿದ್ದರು. ಇದಕ್ಕಾಗಿ ಭಾರತ-ಭಾರತಿ ಪುಸ್ತಕ ಮಾಲಿಕೆ ಎಂಬ ನೂತನ ಯೋಜನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ನಡೆಸಿದರು. 

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ತಂಡದಲ್ಲಿ ಸತ್ಯಾಗ್ರಹ ಮಾಡಿ 1975ರ ನವೆಂಬರ್‌ನಲ್ಲಿ ಜೈಲುವಾಸ ಅನುಭವಿಸಿದ ಜಯದೇವ ಅವರು, 1977ರ ಮಾ. 22ರಂದು ಯಾದವರಾವ್‌ ಜೋಶಿ ಅವರೊಂದಿಗೆ ಬಿಡುಗಡೆಯಾದರು. ಬಾಳಾ ಸಾಹೇಬ ದೇವರಸ್‌, ಕು.ಸೀ. ಸುದರ್ಶನ್‌, ದತ್ತೋಪಂತ್‌ ಟೆಂಗಡಿ, ಅಟಲ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು, ಎಲ್ಲಾ ಪಕ್ಷಗಳ ಮುಖಂಡರು, ಸಂತರು, ಸ್ವಾಮೀಜಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಅತ್ಯುತ್ತಮ ಮಾರ್ಗದರ್ಶಕ: ಮಿಥಿಕ್‌ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅನಾಥ ಶಿಶುನಿವಾಸ, ಅಬಲಾಶ್ರಮ..  ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗೆ ಜಯದೇವ ಅವರು ಮಾರ್ಗದರ್ಶಕರಾಗಿದ್ದರು. ಈ ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ತನ್ನ ಮೂಲ ಉದ್ದೇಶದಂತೆ ಕೆಲಸ ಮಾಡಲು ಪ್ರೇರೇಪಣೆ ನೀಡಿದರು. 

ಆರ್‌ಎಸ್‌ಎಸ್‌ ಪ್ರೇರಿತ ಸಂಸ್ಥೆ ವನವಾಸಿ ಕಲ್ಯಾಣ ಆಶ್ರಮವು ಕರ್ನಾಟಕದಲ್ಲಿ ರೂಪುಗೊಂಡ ಪ್ರಾರಂಭದ ದಿನದಿಂದಲೂ ಅದರ ಸಂಘಟನಾತ್ಮಕ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿದರು. ಅವಿವಾಹಿತರಾಗಿಯೇ ಉಳಿದು 4 ದಶಕಗಳ ಕಾಲ ಸುದೀರ್ಘ‌ ಸಾಮಾಜಿಕ ಜೀವನ ನಡೆಸಿದ ನಂತರ 1995ರಲ್ಲಿ ಸಂಘದ ಪ್ರಚಾರಕರಾಗಿ ನಿಯುಕ್ತರಾದರು. ಬಳಿಕ ಕೇಶವಕೃಪಾವನ್ನು ಕೇಂದ್ರವಾಗಿಸಿಕೊಂಡು ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದರು.

ನನ್ನ ಗುರುಗಳ ಸ್ಥಾನದಲ್ಲಿದ್ದ ಮೈ.ಚ.ಜಯದೇವ ಅವರು ಆರ್‌ಎಸ್‌ಎಸ್‌ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದರು. ತಮ್ಮ ಅಗಾಧ ವಿದ್ವತ್ತನ್ನು ಕಾರ್ಯಕರ್ತರಿಗೆ, ಸ್ವಯಂ ಸೇವಕರಿಗೆ ಧಾರೆ ಎರೆಯುವ ಮೂಲಕ ತಮ್ಮ ಜೀವನವನ್ನೇ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಸಮರ್ಪಿಸಿದ ಹಿರಿಯ ಚೇತನ. 
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ರಾಜ್ಯದಲ್ಲಿ ಆರ್‌ಎಸ್‌ಎಸ್‌ ಕಟ್ಟಿ ಬೆಳೆಸುವಲ್ಲಿ ಮೈ.ಚ.ಜಯದೇವ ಅವರ ಪಾತ್ರ ದೊಡ್ಡದು. ಅವರ ಹಠಾತ್‌ ನಿಧನ ಸಂಘಟನೆ ಹಾಗೂ ಬಿಜೆಪಿಗೆ ತುಂಬಲಾರದ ನಷ್ಟ. ವಿದ್ಯಾರ್ಥಿ ದಿಸೆಯಿಂದಲೇ ಆರ್‌ಎಸ್‌ಎಸ್‌ ಸಿದ್ಧಾಂತ ಮೈಗೂಡಿಸಿಕೊಂಡಿದ್ದ ಅವರು, ಎಂದಿಗೂ ನಂಬಿದ ತತ್ವ-ಸಿದ್ಧಾಂತಗಳೊಂದಿಗೆ ರಾಜಿಯಾದವರಲ್ಲ. 
-ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

ಟಾಪ್ ನ್ಯೂಸ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.