ಮೀ ಟೂ ಸಂತ್ರಸ್ತರಿಗೆ ಧೈರ್ಯ ತುಂಬಿ
Team Udayavani, Nov 12, 2018, 11:55 AM IST
ಬೆಂಗಳೂರು: ಸಂತ್ರಸ್ತ ಯುವತಿಯರು ಧೈರ್ಯವಾಗಿ ಮೀ ಟೂ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯವಾಗಿದ್ದು, ಅಂತವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕೇ ಹೊರತು, ಅವಮಾನಿಸುವ ಪ್ರಸಂಗಗಳು ನಡೆಯಬಾರದು ಎಂದು ಲೇಖಕಿ ಡಾ.ವಿಜಯಾ ಹೇಳಿದ್ದಾರೆ.
ರಾಜಾಜಿನಗರದ ಆಕೃತಿ ಪುಸ್ತಕಾಲಯ ಆಯೋಜಿಸಿದ್ದ ಕನ್ನಡ ಮತ್ತು ಭಾರತೀಯ ಸಿನಿಮಾಗಳಲ್ಲಿ ಮಹಿಳೆಯ ಚಿತ್ರಣ, ಸ್ತ್ರೀ ಶೋಷಣೆ, ಸಮಾನತೆ ಹಾಗೂ ಮೀ ಟೂ ಅಭಿಯಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀ ಟೂ ಅಭಿಯಾನವು ಮಹಿಳೆಯ ಅನುಭವಿಸಿರುವ ಶೋಷಣೆ, ದೌರ್ಜನ್ಯಗಳನ್ನು ಹೇಳಿಕೊಳ್ಳಲು ಇದೊಂದು ಸೂಕ್ತ ವೇದಿಕೆಯಾಗಿದೆ.
ಈ ವೇದಿಕೆಯನ್ನು ನಟಿಯರು ಬಳಸಿಕೊಳ್ಳುತ್ತಿರುವುದು ಸಂತಸ ವಿಚಾರ. ಆದರೆ, ಅವರಿಗೆ ಧೈರ್ಯ ತುಂಬಿ ಬೆಂಬಲ ನೀಡುವ ಕೆಲಸವಾಗುತ್ತಿಲ್ಲ. ಬದಲಾಗಿ ಅನುಮಾನದಿಂದ ನೋಡುವ, ಹೀಯಾಳಿಸುವ, ಬೆದರಿಸುವ ಕೆಲಸಗಳಾಗುತ್ತಿವೆ ಎಂದು ಬೇಸರವ್ಯಕ್ತಪಡಿಸಿದರು.
ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯು ಮೇಕಪ್ ಮ್ಯಾನ್‌ನಿಂದ ನಿರ್ದೇಶಕ, ನಿರ್ಮಾಪಕರವರೆಗೂ ಭೋಗದ ವಸ್ತುವಾಗುತ್ತಿದ್ದಾಳೆ. ಕೆಲವು ಹೆಣ್ಣು ಮಕ್ಕಳಿಗೆ ಸಿನಿಮಾ ರಂಗ ಇಷ್ಟ ಇದ್ದರೂ ಬರೋಕೆ ಹೆದರುತ್ತಾರೆ. ಇದು ಈಗಿನ ಸಮಸ್ಯೆ ಅಲ್ಲ, ಹಿಂದಿನಿಂದ ಬಂದಂತಹದ್ದು, ಯಾರಿಂದ ದೌರ್ಜನ್ಯ ದಬ್ಟಾಳಿಕೆ ನಡೆಯುತ್ತಿದೆಯೋ ಅವರ ಹತ್ತಿರ ನ್ಯಾಯಕ್ಕಾಗಿ ಹೋಗುತ್ತೇವೆ. ಹೀಗಾಗಿ ನ್ಯಾಯ ಸಿಗುತ್ತಿಲ್ಲ. ಹೀಗಾಗಿಯೇ ಮೀಟೂ ಅಭಿಯಾನ ಈಗಿನ ಸಂದರ್ಭದಲ್ಲಿ ಅನಿವಾರ್ಯವಾಗಿದೆ ಎಂದರು.
ಕಾನೂನು ರೂಪುಗೊಳ್ಳಲಿ: ಕನ್ನಡ ಚಿತ್ರರಂಗದಲ್ಲಿ ತಪ್ಪು ಮಾಡಿದವರನ್ನು ಸಿನಿಮಾ ರಂಗದಿಂದಲೇ ಬಹಿಷ್ಕಾರ ಹಾಕುವಂತಾಗಬೇಕು. ಅವರು ಎಂತಹ ಪ್ರಭಾವಿ ನಟಿ, ನಟ ಯಾರೇ ಆಗಿರಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತಹ ಕಾನೂನು ವಾಣಿಜ್ಯ ಮಂಡಳಿಯಲ್ಲಿ ರೂಪುಗೊಳ್ಳಬೇಕು. ಜತೆಗೆ ದೌರ್ಜನ್ಯ ನಡೆದ ತಕ್ಷಣ ಪ್ರತಿಕ್ರಿಯಿಸುವ ಮನೋಭಾವವನ್ನು ಮಹಿಳೆಯರು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಪತ್ರಕರ್ತೆ ಅರ್ಚನಾ ನಾಥನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.