ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಕ್ಕೆ ಬೇಸರ
Team Udayavani, Sep 24, 2018, 12:30 PM IST
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿರುವ ಹಿನ್ನೆಲೆಯಲ್ಲಿ, ಬಡವರಿಗೆ ಆರೋಗ್ಯ ಸೌಲಭ್ಯಗಳು ಕೈಗೆಟಕುತ್ತಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ನಡೆದ ಆರೋಗ್ಯ ಚಿಂತನ ಮಾಲಿಕೆಯ 9 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದರಿಂದ, ಜನರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದರು.
ತಂತ್ರಜ್ಞಾನ ಕ್ಷೇತ್ರ ಇಂದು ಬಹಳಷ್ಟು ಮುಂದುವರಿದಿದ್ದು, ಅಂತರ್ಜಾಲವನ್ನು ಬಳಕೆ ಮಾಡಿಕೊಂಡು ಔಷಧಿಗಳನ್ನು ಮನೆಗೆ ಬಾಗಿಲಿಗೆ ತರಿಸಿಕೊಳ್ಳುವ ಪ್ರವೃತ್ತಿ ಪ್ರಚಲಿತದಲ್ಲಿದೆ. ಇಂತಹ ದಿನಮಾನಗಳಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದ್ದು, ಈ ದೃಷ್ಟಿಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸೇರಿದಂತೆ ಇನ್ನಿತರ ಅನುಪಮ ವಿಷಯಗಳನ್ನು ಈ ಪುಸ್ತಕಗಳು ಕಟ್ಟಿಕೊಡಲಿವೆ. ವೈದ್ಯಕೀಯ ಲೋಕ್ಕಕೆ ಸಂಬಂಧಿಸಿದ ಇಂತಹ ಕೃತಿಗಳು ಹೆಚ್ಚು ಬರಲಿ ಎಂದು ಆಶಿಸಿದರು.
ಆಸ್ಪತ್ರೆಗಳಲ್ಲಿ ಗ್ರಂಥಾಲಯ: ಪ್ರತಿಯೊಂದು ಆಸ್ಪತ್ರೆಗಳಲ್ಲಿ ಗ್ರಂಥಾಲಯಗಳು ಇರಬೇಕು ಎಂದು ಹೇಳಿದ ಅವರು, ಗ್ರಂಥಾಲಯದಲ್ಲಿ ವೈದ್ಯಕೀಯ ಲೋಕಕ್ಕೆ ಸಂಬಂಧಿಸಿದ ಪುಸ್ತಕಗಳು ಇದ್ದರೆ, ಆಸ್ಪತ್ರಗೆ ಭೇಟಿ ನೀಡುವವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಪೂರಕ ಮಾಹಿತಿಗಳು ದೊರೆಯಲಿವೆ. ಈ ಹಿಂದೆ ಕನ್ನಡ ವೈದ್ಯಕೀಯ ಸಾಹಿತ್ಯ ಪರಿಷತ್ತು, ಈ ಪ್ರಯತ್ನಕ್ಕೆ ಮುಂದಾಗಿತ್ತು ಎಂದು ವಸುಂಧರಾ ಭೂಪತಿ ತಿಳಿಸಿದರು.
ಕೃತಿಗಳ ಕುರಿತು ಮಾತನಾಡಿದ ಹಿರಿಯ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ವೈದ್ಯಕೀಯ ಸಾಹಿತ್ಯದ ಬಗ್ಗೆಯೂ ವಿಮರ್ಶಕರು ಗಮನ ಹರಿಸುವ ಅಗತ್ಯ ಇದೆ. ಆರೋಗ್ಯದ ಬಗ್ಗೆ ಅನುಭವ ಮತ್ತು ಅರಿವನ್ನು ಈ ಪುಸ್ತಕಗಳು ಕಟ್ಟಿಕೊಡುತ್ತವೆ. ಸರಳ ಭಾಷೆಯಲ್ಲಿ ಸುಲಲಿತವಾಗಿ ಆರೋಗ್ಯ ಕಾಪಾಡಿಕೊಳ್ಳುವುದರ ಕುರಿತು ಲೇಖಕರು ಸೊಗಸಾಗಿ ಹೇಳಿದ್ದಾರೆ.
ಪ್ರತಿ ಕಾಲೇಜಿನ ಗ್ರಂಥಾಲಯದಲ್ಲೂ ಈ ಪುಸ್ತಕಗಳು ದೊರಕು ವಂತಾಗಬೇಕು ಎಂದು ತಿಳಿಸಿದರು. ಹಿರಿಯ ವಿಮರ್ಶಕ ಡಾ.ನರಹಳ್ಳಿ ಬಾಲುಸುಬ್ರಹ್ಮಣ್ಯ, ಲೇಖಕರಾದ ಡಾ.ಸಿ.ಆರ್.ಚಂದ್ರಶೇಖರ್, ಡಾ.ಎಚ್.ಎಸ್.ಪ್ರೇಮಾ, ಡಾ. ವೀಣಾ ಭಟ್, ಡಾ.ಕೆ.ಎಸ್.ಚೈತ್ರಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.