ವೈದ್ಯಕೀಯ ಸೀಟು ಆಮಿಷ: ವಂಚಿಸಿದ ಆರೋಪಿ ಬಂಧನ
Team Udayavani, Aug 3, 2023, 11:01 AM IST
ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ ನಿವಾಸಿ ಸೈಯದ್ ಯೂನಸ್(32) ಬಂಧಿತ.
ಆರೋಪಿಯ ವಿರುದ್ಧ ಮಾರಸಂದ್ರ ನಿವಾಸಿ ಲೋಕನಾಯಕಿ (42) ಎಂಬುವರು ದೂರು ನೀಡಿದ್ದರು.
ದೂರುದಾರ ಮಹಿಳೆ ಯಲಹಂಕದಲ್ಲಿ ಯುನಿವರ್ಸಲ್ ಎಜುಕೇಶನ್ ಸರ್ವಿಸ್ ಎಂಬ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಆರೋಪಿ, ತಾನೂ ಕೇಂದ್ರ ಸರ್ಕಾರದ ನೌಕರನಾಗಿದ್ದಾನೆ. ತನಗೆ ಕೇಂದ್ರ ಸರ್ಕಾರದ ಮಂತ್ರಿಗಳು, ಕರ್ನಾಟಕ ವೈದ್ಯಕೀಯ ಶಿಕ್ಷಣ ಪ್ರಾಧಿಕಾರದ ಅಧಿಕಾರಿಗಳ ಪರಿಚಯವಿದೆ. 18ರಿಂದ 76 ಲಕ್ಷ ರೂ. ವರೆಗೆ ಕರ್ನಾಟಕ, ದೆಹಲಿ, ಹರಿಯಾಣ, ರಾಜಸ್ಥಾನದಲ್ಲಿ ಎಂಬಿಬಿಎಸ್ ಕಾಲೇಜುಗಳಲ್ಲಿ ಸೀಟುಗಳನ್ನು ಕೊಡಿಸುತ್ತೇನೆ ಎಂದು ಕಾಲೇಜುಗಳ ಪಟ್ಟಿ ಕಳುಹಿಸಿದ್ದ. ಅದನ್ನು ನಂಬಿದ ಮಹಿಳೆ, ತಮ್ಮ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳನ್ನು ಪರಿಚಯಿಸಿಕೊಟ್ಟಿದ್ದು, ಅದನ್ನೇ ನಂಬಿ ವಿದ್ಯಾರ್ಥಿಗಳಿಂದ ಹಂತ-ಹಂತವಾಗಿ ಹಣ ಹಾಕಿಸಿದ್ದೆ. ಆನ್‌ಲೈನ್ ರೂಪದಲ್ಲಿ 20.5 ಲಕ್ಷ ರೂ. ಹಾಗೂ ನಗದು ರೂಪದಲ್ಲಿ 34.75 ಲಕ್ಷ ರೂ. ನೀಡಲಾಗಿತ್ತು. ಮತ್ತೆ ಹಣ ಕೇಳಿದಾಗ ಆತನ ಮೇಲೆ ಅನುಮಾನ ಬಂದಿತ್ತು. ಹಣ ವಾಪಸ್ ನೀಡುವಂತೆ ಕೇಳಿದಾಗ 15.8 ಲಕ್ಷ ರೂ. ವಾಪಸ್ ನೀಡಿದ್ದಾನೆ.
ಇನ್ನೂ ಬಾಕಿಯಿರುವ 40.17 ಲಕ್ಷ ಕೊಡಬೇಕಿದೆ. ಒಟ್ಟು 55.25 ಲಕ್ಷ ರೂ.ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು. ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Chamarajapete: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿನ ಕ್ರಮ: ಸಿಎಂ ಸಿದ್ದರಾಮಯ್ಯ
ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್.ಅಶೋಕ್
Bengaluru: ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು!; ಭುಗಿಲೆದ್ದ ಆಕ್ರೋಶ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.