ಮೇಸ್ತ ಮನೆಗೆ ಶಾ ಭೇಟಿ
Team Udayavani, Feb 22, 2018, 11:30 AM IST
ಹೊನ್ನಾವರ: ಹೊನ್ನಾವರದಲ್ಲಿ ನಡೆದ ನಿಗೂಢ ಸಾವಿನ ಪ್ರಕರಣದಲ್ಲಿ ಅಮಾ ನುಷವಾಗಿ ಮೃತಪಟ್ಟ ಪರೇಶ್ ಮೇಸ್ತ
ಹತ್ಯೆ ತನಿಖೆಯನ್ನು ಸಿಬಿಐ ಸಮ ರ್ಪಕವಾಗಿ ನಿರ್ವಹಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಪರೇಶ್ ಮೇಸ್ತ ಮನೆಗೆ ತೆರಳಿ, ಅವರ ತಂದೆ ಕಮಲಾಕರ ಮೇಸ್ತ ಹಾಗೂ ಕುಟುಂಬದವರೊಂದಿಗೆ
ಸುಮಾರು 25 ನಿಮಿಷಗಳ ಕಾಲ ಮಾತನಾಡಿದರು.
ಜೊತೆಯಲ್ಲಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಅಮಿತ್ ಶಾ ಅವರಿಗೆ ಪರಿ ಸ್ಥಿತಿಯ ಬಗ್ಗೆ ಮನವರಿಕೆ
ಮಾಡಿದರು. ಎಲ್ಲ ವಿಷಯಗಳನ್ನು ಆಲಿಸಿದ ಅಮಿತ್ ಶಾ, ಈ ಬಗ್ಗೆ ಅಗತ್ಯ ಕ್ರಮ ವಹಿಸಲಿದ್ದು, ಆತಂಕಪಡುವ
ಅವಶ್ಯಕತೆ ಇಲ್ಲವೆಂದು ಪರೇಶ್ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ಹೇಳಿದರು. ಬೇಡಿಕೆಯ ಅಹವಾಲಿನ
ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಪರೇಶ್ ಮನೆಯಿಂದ ನೇರ ಹೆಲಿಪ್ಯಾಡ್‌ಗೆ ಆಗಮಿಸಿದ ಅಮಿತ್ ಶಾ ಕುಮಟಾದಲ್ಲಿ ಏರ್ಪಡಿಸಿದ್ದ ನವಶಕ್ತಿ ಸಮಾವೇಶದಲ್ಲೂ ಪಾಲ್ಗೊಳ್ಳದೇ ಹೆಲಿಕಾಪ್ಟರ್‌ನಲ್ಲಿ ನೇರ ಹುಬ್ಬಳ್ಳಿಗೆ ತೆರಳಿದರು.
ಶಾ ಮೌನಕ್ಕೆ ನಾಯಕರ ಸ್ಪಷ್ಟನೆ: ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಮಾಧ್ಯಮ ಪ್ರತಿನಿಧಿಗಳ ಜತೆಯೂ
ಮಾತನಾಡಿಲ್ಲ ಎಂದು ಬಿಜೆಪಿ ನಾಯಕರು ಅಮಿತ್ ಶಾ ಮೌನಕ್ಕೆ ಸಮಜಾಯಿಷಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.