ಹೊಸ ವಿನ್ಯಾಸದಲ್ಲಿ ಮೆಮು ರೈಲು
Team Udayavani, Mar 11, 2019, 6:30 AM IST
ಬೆಂಗಳೂರು: ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಅವತಾರದ ಏಳು ಮೆಮು (ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್) ರೈಲುಗಳನ್ನು ರೈಲ್ವೆ ಇಲಾಖೆಯು ಪರಿಚಯಿಸುತ್ತಿದ್ದು, ಈ ಪೈಕಿ ಒಂದು ರೈಲು ಬೆಂಗಳೂರಿಗೂ ಬಂದಿದೆ. ತಿಂಗಳಲ್ಲಿ ಇದು ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.
ಇದರಲ್ಲಿ ಥೇಟ್ ಮೆಟ್ರೋ ಪ್ರಯಾಣದಲ್ಲಿ ಸಿಗುವ ಹೈಟೆಕ್ ಅನುಭವ ಪ್ರಯಾಣಿಕರಿಗೆ ಸಿಗಲಿದೆ. ಅಂದರೆ, ಈ ಹೊಸ ರೂಪದ ಮೆಮು ರೈಲು ಪ್ರಸ್ತುತ ಇರುವ ಸಾಮಾನ್ಯ “ಮೆಮು’ಗಿಂತ ವೇಗವಾಗಿ ಚಲಿಸುತ್ತದೆ. ಪ್ರಯಾಣಿಕರಿಗೆ ಮುಂದಿನ ನಿಲ್ದಾಣದ ಬಗ್ಗೆ ಧ್ವನಿ ವರ್ಧಕದ ಮೂಲಕ ಮಾಹಿತಿ ನೀಡುತ್ತದೆ. ಬಂದು-ಹೋಗುವವರ ಮೇಲೆ ಸಿಸಿಟಿವಿ ಕಣ್ಗಾವಲಿಡುತ್ತದೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ನೇರವಾಗಿ ಚಾಲಕರೊಂದಿಗೆ ಕೂಡ ಮಾತನಾಡಬಹುದು!
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಿರ್ಮಿಸಿರುವ ಈ ಮೆಮು ರೈಲು ಈಗಾಗಲೇ ನಗರದ ಬಂಗಾರಪೇಟೆ-ಬೆಂಗಳೂರು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸಿದ್ದು, ವೇಗದ ಪರೀಕ್ಷೆಯಲ್ಲಿ ಪಾಸಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿಗಾಗಿ ಕಾಯುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ತಿಂಗಳಲ್ಲಿ ವಾಣಿಜ್ಯ ಸೇವೆ ಶುರುವಾಗಲಿದೆ. ಮೂಲಗಳ ಪ್ರಕಾರ ಬೆಂಗಳೂರು- ಬಂಗಾರಪೇಟೆ- ಮಾರಿಕುಪ್ಪಂ- ಕುಪ್ಪಂ ಮಾರ್ಗದಲ್ಲಿ ಇದನ್ನು ಪರಿಚಯಿಸುವ ಚಿಂತನೆ ಇದೆ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ವಿಶೇಷತೆ ಏನು?: ಪ್ರಸ್ತುತ ಇರುವ ಸಾಮಾನ್ಯ ಮೆಮು ರೈಲು ಡಿಸಿ ಟ್ರ್ಯಾಕ್ಷನ್ ಮೋಟಾರು ಹೊಂದಿದ್ದು, ಗಂಟೆಗೆ ಗರಿಷ್ಠ 105 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಇದರ ಉದ್ದ 21.3 ಮೀ. ಇದ್ದು, 2,402 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ, ಹೊಸ ವಿನ್ಯಾಸದಲ್ಲಿ ನಿರ್ಮಿಸಲಾದ ಮೆಮು ರೈಲು ಸ್ಟೇನ್‌ಲೆಸ್ ಸ್ಟೀಲ್ ಕವಚ ಒಳಗೊಂಡಿದೆ. ಎರಡು ಡ್ರೈವರ್ ಮೋಟರ್ ಕೋಚ್‌ಗಳು ಸೇರಿ ಎಂಟು ಬೋಗಿಗಳನ್ನು ಹೊಂದಿದ್ದು, ಎಸಿ ಟ್ರ್ಯಾಕ್ಷನ್ ಮೋಟಾರು ವ್ಯವಸ್ಥೆ ಒಳಗೊಂಡಿದೆ.
ಗಂಟೆಗೆ 110ರಿಂದ 130 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಇದು 23.1 ಮೀ. ಉದ್ದ ಇರುವುದರಿಂದ 2,618 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಕಂಪ್ಯೂಟರ್ ಆಧಾರಿತ ಮೈಕ್ರೋ ಪ್ರೊಸೆಸರ್ ಕಂಟ್ರೋಲ್ಡ್ ಟೆಕ್ನಾಲಜಿ ನಿರ್ವಹಣಾ ವ್ಯವಸ್ಥೆ ಒಳಗೊಂಡಿದೆ (ಉದಾಹರಣೆಗೆ ನಮ್ಮ ಮೆಟ್ರೋ). ಆದರೆ, ಹವಾನಿಯಂತ್ರಿತ ವ್ಯವಸ್ಥೆ ಮಾತ್ರ ಇದರಲ್ಲಿ ಇರುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮತ್ತೂಂದು ವಿಶೇಷವೆಂದರೆ ಪ್ರಯಾಣಿಕರ ಸಾಂದ್ರತೆ ಆಧಾರಿತ ಬ್ರೇಕ್ ವ್ಯವಸ್ಥೆ ಒಳಗೊಂಡಿದೆ. ಅಂದರೆ ರೈಲಿನಲ್ಲಿ ನೂರು ಜನರಿದ್ದರೆ, ಅದಕ್ಕೆ ಅನುಗುಣವಾದ ಒತ್ತಡದಲ್ಲಿ ಬ್ರೇಕ್ ಹಾಕುತ್ತದೆ. ಅದೇ ರೀತಿ, ಜನರಿಂದ ತುಂಬಿತುಳುಕುತ್ತಿದ್ದರೆ ಅದಕ್ಕೆ ತಕ್ಕ ಒತ್ತಡದಲ್ಲಿ ಬ್ರೇಕ್ ಬೀಳುತ್ತದೆ. ಅಂದಹಾಗೆ, ಬ್ರೇಕಿಂಗ್ ವ್ಯವಸ್ಥೆಯಿಂದ ಶೇ. 35ರಷ್ಟು ವಿದ್ಯುತ್ ಉಳಿತಾಯ ಆಗಲಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದರು.
ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಬಾಕಿ: ಹೊಸ ವಿನ್ಯಾಸದ ಮೊದಲ ಮೆಮು ರೈಲನ್ನು 2018ರ ಜೂನ್‌ನಲ್ಲಿ ಪರಿಚಯಿಸಲಾಗಿತ್ತು. ಇದುವರೆಗೆ ಈ ಮಾದರಿಯ ಒಟ್ಟಾರೆ ಏಳು ಮೆಮು ರೈಲುಗಳನ್ನು ನಿರ್ಮಿಸಲಾಗಿದ್ದು, ಈ ಪೈಕಿ ಒಂದು ರೈಲು ನೈರುತ್ಯ ರೈಲ್ವೆಗೆ ನೀಡಲಾಗಿದೆ. ಮೂರು ದಕ್ಷಿಣ ರೈಲ್ವೆಗೆ ಹಾಗೂ ಉಳಿದವುಗಳನ್ನು ಉತ್ತರ ಭಾಗದಲ್ಲಿ ನಿಯೋಜಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ ಇದರ ಪರೀಕ್ಷಾರ್ಥ ಸಂಚಾರ ಕೆಲವು ದಿನಗಳಿಂದ ನಡೆದಿದ್ದು, “ವೇಗ ಪ್ರಮಾಣಪತ್ರ’ ದೊರಕಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಬಾಕಿ ಇದ್ದು, ಒಂದು ಅಥವಾ ಎರಡು ತಿಂಗಳಲ್ಲಿ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.