ಹಾಲಿನ ಪ್ಯಾಕೆಟ್ ಮೇಲೂ ಸಂದೇಶ
Team Udayavani, May 12, 2018, 1:41 PM IST
ಬೆಂಗಳೂರು: ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳು ಹಾಗೂ ಸರ್ಕಾರಿ ಬಸ್‌ಗಳ ಟಿಕೆಟ್‌ಗಳು ಈಗ ರಾಜ್ಯದಲ್ಲಿ ಮತದಾನ ಜಾಗೃತಿ ಮೂಡಿಸುವ ಪ್ರಮುಖ ಮಾಧ್ಯಮಗಳಾಗಿವೆ.
ನಂದಿನಿ ಹಾಲಿನ ಪ್ಯಾಕೆಟ್ ಮತ್ತು ಬಸ್ ಟಿಕೆಟ್‌ಗಳು ಅತ್ಯಲ್ಪ ಅವಧಿಯಲ್ಲಿ ನಿತ್ಯ ಲಕ್ಷಾಂತರ ಮತದಾರರನ್ನು ತಲುಪುತ್ತಿವೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ನಂದಿನಿ ಹಾಲು ಹಾಗೂ ಮೊಸರಿನ ಪ್ಯಾಕೆಟ್‌ಗಳ ಮುಂಭಾಗದಲ್ಲಿ ಗ್ರಾಹಕರಿಗೆ ಎದ್ದುಕಾಣುವಂತೆ “ಮೇ-12 ತಪ್ಪದೆ ಮತ ಹಾಕಿ’ ಎಂದು ಮುದ್ರಿಸಲಾಗಿದೆ.
ಪ್ರತಿ ದಿನ ರಾಜ್ಯದಲ್ಲಿ 36 ಲಕ್ಷ ಲೀ. ವಿವಿಧ ಪ್ರಕಾರಗಳ ಹಾಲು ಮತ್ತು 12 ಲಕ್ಷ ಲೀ. ಮೊಸರು ಮಾರಾಟ ಆಗುತ್ತಿದೆ. ಇವುಗಳು ದಿನಬಳಕೆಯ ಅಗತ್ಯ ವಸ್ತುಗಳಲ್ಲಿ ಬರುವುದರಿಂದ ಲಕ್ಷಾಂತರ ಜನ ಖರೀದಿಸುತ್ತಾರೆ. ಇದರೊಂದಿಗೆ ಮತ ದಾನದ ಬಗ್ಗೆ ಜಾಗೃತಿಯೂ ಮೂಡಿಸಿದಂತಾಗುತ್ತಿದೆ.
ಬಸ್ ಟಿಕೆಟ್‌ನಲ್ಲೂ ಜಾಗೃತಿ: ಅದೇ ರೀತಿ, ಕೆಎಸ್ ಆರ್‌ಟಿಸಿ 8,800 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ಅದರಲ್ಲಿ 28 ಲಕ್ಷ ಜನ ಪ್ರಯಾಣಿಸುತ್ತಾರೆ. ಈ ಪೈಕಿ ಶೇ. 20ರಷ್ಟು ಇ-ಬುಕಿಂಗ್ ಮೂಲಕ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಉಳಿದ 22 ಲಕ್ಷ ಪ್ರಯಾಣಿಕರು ನೇರವಾಗಿ ನಿರ್ವಾಹಕರಿಂದ ಟಿಕೆಟ್ ಪಡೆದು ಪ್ರಯಾಣಿಸುತ್ತಾರೆ. ಅವರೆಲ್ಲರಿಗೂ ಈ ಜಾಗೃತಿ ಸಂದೇಶ ಮುದ್ರಿತ ರೂಪದಲ್ಲಿ ತಲುಪಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ ಕೂಡ ಮತದಾನದ ಅರಿವು ಮೂಡಿಸಲಾಗುತ್ತಿದೆ. ಬಸ್‌ಗಳಲ್ಲಿರುವ ಡಿಜಿಟಲ್ ಫಲಕಗಳ ಮೇಲೆ ಮತದಾನ ಮಾಡುವ ಬಗ್ಗೆ ಸಂದೇಶ ಬಿತ್ತರಿಸುವ ಮೂಲಕ ಪ್ರಯಾಣಿಕರಿಗೆ ಮತದಾನ ಮಾಡುವಂತೆ ಮನವಿ ಮಾಡಲಾಗುತ್ತಿದೆ. ಬಸ್‌ಗಳಲ್ಲಿ ಮತದಾನದ ಮಹತ್ವ, ಚುನಾವಣೆ ದಿನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುವಂತೆ ಮನವಿ ಮಾಡುವ ಸಂದೇಶಗಳನ್ನು ನಿರಂತರವಾಗಿ ಬಿತ್ತರಿಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.