ಮಿಥನೈಸೇಷನ್ ಘಟಕ ನಿರ್ವಹಣೆ ನಿರ್ಧಾರ
Team Udayavani, Jul 5, 2018, 12:13 PM IST
ಬೆಂಗಳೂರು: ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೆಲ ವರ್ಷಗಳಿಂದ ಸ್ಥಗಿತಗೊಂಡಿರುವ ಬಯೋ ಮಿಥನೈ ಸೇಷನ್ ಘಟಕಗಳನ್ನು ಪುನಾರಂಭಿಸಿ ಪಾಲಿಕೆಯಿಂದಲೇ ನಿರ್ವಹಿಸಲು ನಿರ್ಧರಿಸಲಾಗಿದೆ.
ಹಸಿ ತ್ಯಾಜ್ಯ ಸಂಸ್ಕರಣೆಯಿಂದ ವಿದ್ಯುತ್ ಉತ್ಪಾದಿಸಿ ಬೀದಿ ದೀಪಗಳಿಗೆ ಬಳಸುವ ಉದ್ದೇಶದಿಂದ ನಗರದ 13 ಕಡೆಗಳಲ್ಲಿ ನಿರ್ಮಿಸಿದ್ದ ಬಯೋ ಮಿಥನೈಸೇಷನ್ ಘಟಕಗಳ ಪೈಕಿ 3 ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿವೆ. ಮೂರ್ನಾಲ್ಕು ವರ್ಷದಿಂದ 10 ಘಟಕಗಳು ಸ್ಥಗಿತಗೊಂಡಿವೆ.
ಮತ್ತೀಕೆರೆ ಹಾಗೂ ಯಲಹಂಕ ಸಮೀಪದ ಸಿಂಗಾಪುರದಲ್ಲಿನ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಿಂದ ಉತ್ಪಾದಿಸಲಾಗುತ್ತಿರುವ ವಿದ್ಯುತ್ತನ್ನು ಸಮೀಪದ ಬೀದಿ ದೀಪಗಳಿಗೆ ಬಳಸಲಾಗುತ್ತಿದೆ. ಒಂದೂವರೆ ವರ್ಷ ಹಿಂದೆ ಸ್ಥಗಿತ ಗೊಂಡಿದ್ದ ಯಡಿಯೂರು ವಾರ್ಡ್‌ನಲ್ಲಿರುವ ಘಟಕ ಇತ್ತೀಚೆಗೆ ಪುನಾರಂಭವಾಗಿದ್ದು, ಗೋ ಗ್ರೀನ್ ಸಂಸ್ಥೆ ಈ ಘಟಕವನ್ನು ನಿರ್ವಹಣೆ ಮಾಡುತ್ತಿದೆ. ಅದಕ್ಕಾಗಿ ಪಾಲಿಕೆ ತಿಂಗಳಿಗೆ 64 ಸಾವಿರ ರೂ. ಪಾವತಿಸುತ್ತಿದೆ.
ಎಲ್ಲೆಲ್ಲಿ ಘಟಕ: ಅದೇ ರೀತಿ ಸ್ವಾತಂತ್ರ್ಯ ಉದ್ಯಾನ, ಕೆ.ಆರ್. ಮಾರುಕಟ್ಟೆ, ನಾಗಪುರ, ಕೋರಮಂಗಲ, ಸೌತ್ ಎಂಡ್ ವೃತ್ತದ ಲಕ್ಷ್ಮಣರಾವ್ ಬುಲೇವಾರ್ಡ್, ಕೂಡ್ಲು ಬಳಿಯ ಕೆಸಿಡಿಸಿ ಘಟಕ, ದೊಮ್ಮಲೂರು, ಬೇಗೂರು ಸೇರಿ ಒಟ್ಟು 10 ಕಡೆ ಘಟಕ ನಿರ್ಮಿಸಲಾಗಿದೆ. ಪ್ರತಿ ಘಟಕ ನಿರ್ಮಾಣಕ್ಕೆ 79 ಲಕ್ಷ ರೂ. ಹಾಗೂ 3 ವರ್ಷದ ನಿರ್ವಹಣೆಗೆ 24.25 ಲಕ್ಷ ರೂ. ವ್ಯಯ ಮಾಡಲಾಗಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಂತ್ರೋಪಕರಣಗಳು ತಕ್ಕು ಹಿಡಿದು ಹಾಳಾಗುತ್ತಿವೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.
ಪ್ರತಿ ಘಟಕದಿಂದ 400 ಯೂನಿಟ್ ವಿದ್ಯುತ್: ಬಯೋ ಮಿಥನೈಸೇಷನ್ ಘಟಕಗಳು ಸಮರ್ಪಕವಾಗಿ ಕಾರ್ಯಹಿಸಿದರೆ, 5 ಟನ್ ಹಸಿ ಕಸದಿಂದ ನಿತ್ಯ 400 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ವಿದ್ಯುತನ್ನು ಪಾಲಿಕೆಯ ವ್ಯಾಪ್ತಿಯ ಬೀದಿ ದೀಪಗಳಿಗೆ ಬಳಸುವುದರಿಂದ ಪಾಲಿಕೆಗೆ ಮಾಸಿಕ ಲಕ್ಷಾಂತರ ರೂ. ವಿದ್ಯುತ್ ಶುಲ್ಕ ಉಳಿತಾಯವಾಗುತ್ತದೆ. ಜತೆಗೆ ನಗರದಲ್ಲಿ ಹಸಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ. ಒಂದು ಘಟಕದಲ್ಲಿ ಉತ್ಪಾದನೆ ಯಾಗುವ 400 ಯೂನಿಟ್ ವಿದ್ಯುತ್‌ನಿಂದ 67 ತಾಸುಗಳ ಕಾಲ 25 ಬೀದಿ ದೀಪ ಬೆಳಗಿಸಬಹುದಾಗಿದೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಹೇಗೆ?: ನಗರದಲ್ಲಿ ವಿವಿಧ ಭಾಗಗಳಿಂದ ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ತುಂಡರಿಸಿ, ಇನ್ಸ್ರಟ್ ಚೇಂಬರ್ ಮೂಲಕ ಬಯೋ ಡೈಜೆಸ್ಟರ್‌ನಲ್ಲಿ ಕೊಳೆಸಲಾಗುತ್ತದೆ. ಇದಕ್ಕೆ ಒಂದು ಸಾವಿರ ಲೀಟರ್ ನೀರು ಬೆರೆಸಿ, ಬಯೋಡೈಜೆಸ್ಟರ್‌ನಲ್ಲಿ ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುವ ಜೈವಿಕ ಅನಿಲ ಮಿಥೇನ್ ಅನ್ನು 80 ಕ್ಯೂಬಿಕ್ ಮೀಟರ್ ಸಾಮರ್ಥಯದ ಬೃಹತ್ ಬಲೂನಿನಲ್ಲಿ ಶೇಖರಿಸಲಾಗುತ್ತದೆ. ಬಳಿಕ ಅನಿಲವನ್ನು ಎಲೆಕ್ಟ್ರಿಕಲ್ ಜನರೇಟರ್ ಮೂಲಕ ವಿದ್ಯುತ್ ಅಗಿ ಪರಿವರ್ತಿಸಲಾಗುತ್ತದೆ.
ಘಟಕ ಸ್ಥಗಿತಕ್ಕೆ ಏನು ಕಾರಣ?: ನಗರದ ಕೆ.ಆರ್. ಮಾರುಕಟ್ಟೆ ಸೇರಿದ ಒಟ್ಟು 11 ಕಡೆಗಳಲ್ಲಿ ನಾಸಿಕ್ ಮೂಲಕ ಅಶೋಕ ಬಯೋಗ್ರೀನ್ ಸಂಸ್ಥೆಯು ಘಟಕ ಸ್ಥಾಪಿಸಿ, ಕಾರ್ಯಾರಂಭಿಸಿತ್ತು. ಆದರೆ, ಕೆಲ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸದೆ ವಿದ್ಯುತ್ ಉತ್ಪಾದಿಸದ ಹಿನ್ನೆಲೆಯಲ್ಲಿ ಪಾಲಿಕೆಯು ಸಂಸ್ಥೆಯ ಗುತ್ತಿಗೆಯನ್ನು ರದ್ದುಪಡಿಸಿತ್ತು. ಇದೀಗ ಸ್ಥಗಿತಗೊಂಡಿರುವ ಘಟಕಗಳನ್ನು ಪಾಲಿಕೆಯಿಂದಲೇ ನಿರ್ವಹಿಸುವ ಮೂಲಕ ಹಸಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹರಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 13 ಬಯೋ ಮಿಥನೈಸೇಷನ್ ಘಟಕಗಳ ಪೈಕಿ 3 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 10 ಘಟಕಗಳು ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಅವುಗಳನ್ನು ಪುನಾರಂಭಿಸಿ ಪಾಲಿಕೆಯಿಂದಲೇ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ.
ಸಫ್ರಾರ್ಜ್ ಖಾನ್, ಜಂಟಿ ಆಯುಕ್ತ, ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಭಾಗ
ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.