ಮೆಟ್ರೋ 2ನೇ ಹಂತದ ಡೆಡ್‌ಲೈನ್ ಮತ್ತೆ ವಿಸ್ತರಣೆ
Team Udayavani, Feb 10, 2019, 6:34 AM IST
ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆ ಗಡುವು ಮತ್ತೆ ವಿಸ್ತರಣೆಯಾಗಿದ್ದು, ನಗರದ ಮೂಲೆ ಮೂಲೆಗೂ ಮೆಟ್ರೋ ಸಂಚರಿಸಲು 2024ರವರೆಗೆ ಕಾಯಲೇಬೇಕು. ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವು 72.09 ಕಿ.ಮೀ. ಉದ್ದದ ಎರಡನೇ ಹಂತದ ಮೆಟ್ರೋ ಕಾಮಗಾರಿಯನ್ನು ಈ ಮೊದಲು 2023ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿತ್ತು.
ಎರಡು ಪ್ರಮುಖ ಮಾರ್ಗಗಳ ಟೆಂಡರ್ ರದ್ದು ಮತ್ತಿತರ ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ಗಡುವನ್ನು 2024ಕ್ಕೆ ವಿಸ್ತರಣೆ ಮಾಡಿದೆ. ಇದರಿಂದ ಒಟ್ಟಾರೆ 128 ಕಿ.ಮೀ. ಮೆಟ್ರೋ ಜಾಲ ಪೂರ್ಣಗೊಳ್ಳಲು ನಗರದ ಪ್ರಯಾಣಿಕರು ಇನ್ನೂ ಕನಿಷ್ಠ ಐದರಿಂದ ಆರು ವರ್ಷ ಕಾಯಬೇಕಾಗಿದೆ. – ಇದನ್ನು ಸ್ವತಃ ಬಿಎಂಆರ್‌ಸಿಯು ರಾಜ್ಯದ ಆರ್ಥಿಕ ಸಮೀಕ್ಷೆ 2018-19ರಲ್ಲಿ ಸ್ಪಷ್ಟಪಡಿಸಿದೆ.
26,405.14 ಕೋಟಿ ರೂ. ವೆಚ್ಚದ ನಾಲ್ಕು ವಿಸ್ತರಿಸಿದ ಹಾಗೂ ಎರಡು ಹೊಸ ಮಾರ್ಗಗಳು ಸೇರಿದಂತೆ 72.095 ಕಿ.ಮೀ. ಉದ್ದದ ಈ ಯೋಜನಾ ಕಾಮಗಾರಿ ಅನುಮೋದನೆಗೊಂಡ ನಂತರದ ಐದು ವರ್ಷಗಳಲ್ಲಿ ಮಾಡಿಮುಗಿಸುವುದಾಗಿ ಬಿಎಂಆರ್‌ಸಿ ಈ ಹಿಂದೆ ಹೇಳಿಕೊಂಡಿತ್ತು. ಮೆಟ್ರೋ ಕಾಮಗಾರಿಗೆ 2014ರ ಫೆಬ್ರವರಿಯಲ್ಲೇ ಕೇಂದ್ರದಿಂದ ಅನುಮೋದನೆ ದೊರಕಿದೆ.
ಅಂದರೆ, 2019-20ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಇನ್ನೂ ಎರಡು ಮಾರ್ಗಗಳಲ್ಲಿ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿಲ್ಲ. ಈ ಮಧ್ಯೆ 2021ರ ಗಡುವು ನಿಗದಿಪಡಿಸಲಾಗಿತ್ತು. ನಂತರ 2023ಕ್ಕೆ ಅದು ವಿಸ್ತರಣೆಗೊಂಡಿತ್ತು. ಈಗ ಮತ್ತೂಂದು ವರ್ಷ ಮುಂದೂಡಲ್ಪಟ್ಟಿದೆ.
ಯಾವುದು ಯಾವಾಗ ಪೂರ್ಣ?: ಮೂಲಗಳ ಪ್ರಕಾರ ಮೈಸೂರು ರಸ್ತೆಯಿಂದ ಕೆಂಗೇರಿ (6.46 ಕಿ.ಮೀ.) ಮಾರ್ಗವನ್ನು 2020ರಲ್ಲಿ ಲೋಕಾರ್ಪಣೆ ಮಾಡುವ ಗುರಿ ಇದೆ. ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ (18.82 ಕಿ.ಮೀ.), ಬೈಯಪ್ಪನಹಳ್ಳಿ- ಐಟಿಪಿಎಲ್- ವೈಟ್‌ಫೀಲ್ಡ್ (15.5 ಕಿ.ಮೀ.), ತುಮಕೂರು ರಸ್ತೆಯ ನಾಗಸಂದ್ರ- ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (3.77 ಕಿ.ಮೀ.),
ಗೊಟ್ಟಿಗೆರೆ- ಡೈರಿ ವೃತ್ತ (7.250 ಕಿ.ಮೀ.)ದ ನಡುವೆ 2021ರ ಅಂತ್ಯದೊಳಗೆ ಮೆಟ್ರೋ ವಾಣಿಜ್ಯ ಸಂಚಾರ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ. ಅಂತಿಮವಾಗಿ ಎರಡನೇ ಹಂತದ ಅತಿದೊಡ್ಡ ಸುರಂಗ ಮಾರ್ಗ ಡೈರಿ ವೃತ್ತದಿಂದ ನಾಗವಾರ (14 ಕಿ.ಮೀ.)ಕ್ಕೆ ಕೈಹಾಕಲು ನಿಗಮ ಉದ್ದೇಶಿಸಿದೆ. ಇವೆಲ್ಲವೂ 2024ರ ಜೂನ್‌ನಲ್ಲಿ ಸಂಪೂರ್ಣವಾಗಿ ಸೇವೆಗೆ ಸಿದ್ಧಗೊಳ್ಳಲಿವೆ.
131 ಹೆಕ್ಟೇರ್; 3,011 ಆಸ್ತಿ: ಈ ವಿಳಂಬ ಧೋರಣೆಯು ಯೋಜನಾ ವೆಚ್ಚ ಹೆಚ್ಚಳ ರೂಪದಲ್ಲಿ ಪರಿಣಮಿಸಲಿದೆ. 2012ರಲ್ಲಿ ಮಾಡಿದ ಯೋಜನಾ ವೆಚ್ಚ 26,405 ಕೋಟಿ ರೂ. ಈಗಾಗಲೇ ಅಧಿಕಾರಿಗಳೇ ಹೇಳಿದಂತೆ ಇದು 32 ಸಾವಿರ ಕೋಟಿ ರೂ.ಗೆ ತಲುಪಲಿದೆ. ಈಗ ಮತ್ತೆ ಒಂದು ವರ್ಷ ವಿಸ್ತರಣೆ ಆಗಲಿರುವುದರಿಂದ ವೆಚ್ಚ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.
ಎರಡನೇ ಹಂತದ ಯೋಜನೆಗೆ ಒಟ್ಟಾರೆ 131 ಹೆಕ್ಟೇರ್ ಭೂಮಿ ಹಾಗೂ 3,011 ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗೇ ಹೆಚ್ಚು ಸಮಯ ಹಿಡಿಯಿತು ಎನ್ನಲಾಗಿದೆ. ಈ ಮಧ್ಯೆ ಮತ್ತೂಂದೆಡೆ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಸೆಂಟ್ರಲ್ ಸಿಲ್ಕ್ಬೋರ್ಡ್-ಕೆ.ಆರ್. ಪುರ (17 ಕಿ.ಮೀ.) ಹಾಗೂ ಕೆ.ಆರ್. ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (29.062 ಕಿ.ಮೀ.)ದ ಮಾರ್ಗವನ್ನು 2023ಕ್ಕೆ ಪೂರ್ಣಗೊಳಿಸುವ ಕಾರ್ಯವೂ ನಡೆದಿರುತ್ತದೆ.
2018-19ನೇ ಸಾಲಿನಲ್ಲಿ 105.5 ಕಿ.ಮೀ. ಉದ್ದದ ಮೆಟ್ರೋ ಯೋಜನೆಯ ಪೂರ್ವ ಕಾರ್ಯಸಾಧ್ಯತೆ ಕುರಿತು ಅಧ್ಯಯನವನ್ನು ಕೈಗೆತ್ತಿಕೊಳ್ಳಲು ನಿಗಮ ಉದ್ದೇಶಿಸಿದೆ. ಇನ್ನು ವಿಮಾನ ನಿಲ್ದಾಣಕ್ಕೆ ಹೆಬ್ಟಾಳದ ಮೂಲಕ ಹಾದುಹೋಗಲಿರುವ ಮಾರ್ಗದ ಪರಿಷ್ಕರಣೆ, ಜೋಡಣೆ, ಅಂದಾಜು ವೆಚ್ಚ ಹಾಗೂ ಪರಿಷ್ಕೃತ ಹಣಕಾಸು ಯೋಜನೆಗಳ ಅನುಮೋದನೆ ಕಾರ್ಯ ಪ್ರಗತಿಯಲ್ಲಿದೆ.
ಎರಡನೇ ಹಂತದ ಮೆಟ್ರೋ ಮಾರ್ಗದ ವಿವರ
ಎಲ್ಲಿಂದ-ಎಲ್ಲಿಗೆ ಉದ್ದ (ಕಿ.ಮೀ.ಗಳಲ್ಲಿ) ಅಂದಾಜು ವೆಚ್ಚ (ಕೋಟಿ ರೂ.ಗಳಲ್ಲಿ)
-ಬೈಯಪ್ಪನಹಳ್ಳಿ-ಐಟಿಪಿಎಲ್-ವೈಟ್‌ಫೀಲ್ಡ್ 15.50 4,845
-ಮೈಸೂರು ರಸ್ತೆ-ಕೆಂಗೇರಿ 6.46 1,867.95
-ನಾಗಸಂದ್ರ-ಬಿಐಇಸಿ 3.77 1,168.22
-ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್ 6.29 1,765.88
-ಆರ್.ವಿ. ರಸ್ತೆ-ಬೊಮ್ಮಸಂದ್ರ 18.82 5,774.09
-ಗೊಟ್ಟಿಗೆರೆ-ನಾಗವಾರ 21.25 11,014
-ಒಟ್ಟಾರೆ 72.095 26,405.14
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.