ಮೆಟ್ರೋ ಹೆಚ್ಚುವರಿ ಸೇವೆ
Team Udayavani, Oct 24, 2017, 12:17 PM IST
ಬೆಂಗಳೂರು: ದೀಪಾವಳಿ ಹಾಗೂ ವಾರಾಂತ್ಯದ ರಜೆ ಮುಗಿಸಿಕೊಂಡು ಸೋಮವಾರ ಬೆಳಗ್ಗೆ ನಗರಕ್ಕೆ ಹಿಂತಿರುಗಿದ ಜನರ ಅನುಕೂಲಕ್ಕಾಗಿ “ನಮ್ಮ ಮೆಟ್ರೋ’ ಹೆಚ್ಚುವರಿ ಸೇವೆ ಕಲ್ಪಿಸಿತ್ತು. ಬೆಳಗ್ಗೆ 7ರಿಂದ 11ರವರೆಗೆ ಯಶವಂತಪುರದಿಂದ ಜಯನಗರ ಹಾಗೂ ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ತಲಾ 12 ಟ್ರಿಪ್ ಹೆಚ್ಚುವರಿ ಮೆಟ್ರೋ ಸೇವೆ ಕಲ್ಪಿಸಲಾಗಿತ್ತು.
ಇದರಿಂದ ನಗರದ ಹೊರವಲಯದಿಂದ ಹೃದಯಭಾಗಕ್ಕೆ ತೆರಳಲು ಅನುಕೂಲವಾಯಿತು. ಹಬ್ಬದ ಜತೆಗೆ ಸಾಲು-ಸಾಲು ರಜೆ ಇದ್ದುದರಿಂದ ಲಕ್ಷಾಂತರ ಜನ ತಮ್ಮ ಊರುಗಳಿಗೆ ತೆರಳಿದ್ದರು. ಅವರೆಲ್ಲಾ ಬೆಳಿಗ್ಗೆ ಒಮ್ಮೆಲೆ ನಗರ ಪ್ರವೇಶಿಸಿದ್ದರಿಂದ ತುಮಕೂರು ರಸ್ತೆ, ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅತ್ಯಧಿಕ ಜನದಟ್ಟಣೆ ಉಂಟಾಗಿತ್ತು.
ಈ ಮಧ್ಯೆ “ಶಾರ್ಟ್ ಲೂಪ್’ ಮೆಟ್ರೋ ಸೇವೆ ಕಲ್ಪಿಸಿದ್ದರಿಂದ ಜನರಿಗೆ ಅನುಕೂಲವಾಯಿತು. ಈ “ಶಾರ್ಟ್ ಲೂಪ್’ ಸೇವೆಗಳಲ್ಲಿ ಸುಮಾರು 8ರಿಂದ 10 ಸಾವಿರ ಜನ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.