ಮೆಟ್ರೋ ಬೋಗಿಗಳಿಗೆ ವಿದ್ಯುತ್ ತಗುಲಿ ಭಸ್ಮ
Team Udayavani, Jun 5, 2017, 12:22 PM IST
ಬೆಂಗಳೂರು: ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ ಮೆಟ್ರೋ ಬೋಗಿಗೆ ಹೈಟೆನÒನ್ ವಿದ್ಯುತ್ ತಗುಲಿ ಬೆಂಕಿ ಹೊತ್ತಿಕೊಂಡು ಇಡೀ ಬೋಗಿ ಸುಟ್ಟು ಹೋಗಿದೆ. ಘಟನೆ ಭಾನುವಾರ ಮುಂಜಾನೆ ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರ ಜಂಕ್ಷನ್ ಸಮೀಪ ನಡೆದಿದೆ. ಇದೇ ಘಟನೆಯಲ್ಲಿ, ಕಂಟೈನರ್ ಹಿಂದೆ ಬರುತ್ತಿದ್ದ ಕ್ಯಾಬ್ ಚಾಲಕನಿಗೂ ಬೆಂಕಿ ತಗುಲಿದ್ದು, ಸುಟ್ಟಗಾಯಗಳಾಗಿವೆ.
ತೀವ್ರವಾಗಿ ಗಾಯಗೊಂಡಿರುವ ಓಲಾ ಕ್ಯಾಬ್ ಚಾಲಕ ಬಾಲಕೃಷ್ಣ (25)ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ವಿದ್ಯುತ್ ಸ್ಪರ್ಷವಾಗಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೇ ಕಂಟೈನರ್ ಚಾಲಕ ಕೆಳಗಿಳಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಬೆಮೆಲ್ ಕಂಪನಿಯಲ್ಲಿ ಸಿದ್ದಗೊಂಡ ಬೋಗಿಯನ್ನು ದೆಹಲಿಗೆ ಕಂಟೈನರ್ ಮೂಲಕ ಸಾಗಿಸಲಾಗುತ್ತಿತ್ತು. ಹೊಸೂರು ಮುಖ್ಯರಸ್ತೆಯಲ್ಲಿರುವ ಎಚ್‌ಬಿ ಗೇಟ್ ಬಳಿ ಕಂಟೇನರ್ ಚಾಲಕ ರಸ್ತೆ ತಿರುವು ಪಡೆಯುವಾಗ ಮೆಟ್ರೋ ಬೋಗಿಗೆ ವಿದ್ಯುತ್ ತಗುಲಿದೆ. ಈ ವೇಳೆ ಬೋಗಿಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟು ಹೋಗಿದೆ. ಕಂಟೇನರ್‌ನ ಹಿಂದೆಯೇ ಕಾರು ಬಂದಿದ್ದು, ಕಾರಿನ ಚಾಲಕ ಕೆಳಗೆ ಇಳಿದಿದ್ದಾನೆ.
ಈ ವೇಳೆ ಆತನ ಕಾಲಿಗೆ ಬೆಂಕಿ ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಅಗ್ನಿಶಾಮಕದಳವದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಜೀವನಭೀಮನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ
Deepawali; ಸರಣಿ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!
Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ
Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ
Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.