ಬೌರಿಂಗ್ ವಿದ್ಯಾಲಯಕ್ಕೆ ಮೆಟ್ರೋ ಸಂಪರ್ಕಕ್ಕೆ ಚಿಂತನೆ
Team Udayavani, Nov 9, 2017, 1:06 PM IST
ಬೆಂಗಳೂರು: ಶಿವಾಜಿನಗರದಲ್ಲಿ ಬುಧವಾರವಷ್ಟೇ ಶಂಕುಸ್ಥಾಪನೆ ನೆರವೇರಿಸಲಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. “ನಮ್ಮ ಮೆಟ್ರೋ’ 2ನೇ ಹಂತದಲ್ಲಿ ಶಿವಾಜಿನಗರದ ಮೂಲ ಕವೇ ಸುರಂಗ ಮಾರ್ಗದಲ್ಲಿ ಮೆಟ್ರೋ ಹಾದು ಹೋಗಲಿದ್ದು ಅದನ್ನು ಹತ್ತಿರದಲ್ಲೇ ಇರುವ ಬೌರಿಂಗ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಚರ್ಚೆ ನಡೆದಿದೆ.
ಇದಕ್ಕಾಗಿ ಮೆಟ್ರೋ ರೈಲು ಮಾರ್ಗ ನಿರ್ಮಿಸುವುದಿಲ್ಲ ವಾದರೂ ಸುರಂಗದಲ್ಲೇ ಶಿವಾಜಿನಗರ- ವೈದ್ಯಕೀಯ ಕಾಲೇಜು ನಡುವೆ ಪ್ರತ್ಯೇಕ ಪಾದಚಾರಿ ಪಥ ರೂಪಿಸಲಾಗುವುದು. ಆಗ, ಕಾಲೇಜು ಬಾಗಿಲಿಗೆ ಮೆಟ್ರೋ ಮಾರ್ಗ ಬರುವುದರಿಂದ ಕಲ್ಪಿಸುವುದರಿಂದ ಅಲ್ಲಿ ಬರುವ ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಅನುಕೂಲ ಆಗುತ್ತದೆ ಎಂಬುದು ಲೆಕ್ಕಾಚಾರ. ಈ ಸಂಬಂಧ ಸಾಧಕ-ಬಾಧಕಗಳ ಅಧ್ಯಯನಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಮುಂದಾಗಿದೆ.
ಎರಡನೇ ಹಂತದ “ನಮ್ಮ ಮೆಟ್ರೋ’ ಯೋಜನೆಯಲ್ಲಿ ವಿಸ್ತರಿಸಿದ ಮಾರ್ಗಗಳ ಜತೆಗೆ 2 ಪ್ರತ್ಯೇಕ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆ ಪೈಕಿ ಒಂದು ಮಾರ್ಗ ಗೊಟ್ಟಿಗೆರೆ (ಐಐಎಂಬಿ) -ನಾಗವಾರ ನಡುವೆ ಸಂಪರ್ಕ ಕಲ್ಪಿಸಲಿದೆ. 13.79 ಕಿ.ಮೀ. ಉದ್ದದ ಈ ಸುರಂಗ ಮಾರ್ಗವು ಶಿವಾಜಿನಗರದ ಮೂಲಕವೇ ಹಾದುಹೋಗಲಿದ್ದು, ಅಲ್ಲೊಂದು ನಿಲ್ದಾಣವನ್ನೂ ನಿರ್ಮಿಸುತ್ತಿದೆ. ಹಾಗಾಗಿ, ಪಕ್ಕದಲ್ಲೇ ಇರುವ ಬೌರಿಂಗ್ ಆಸ್ಪತ್ರೆಗೆ
ಸಂಪರ್ಕ ಕಲ್ಪಿಸಬಹುದು ಇದರಿಂದ ಅನುಕೂಲ ವಾಗಲಿದೆ ಎಂಬುದು ಸರ್ಕಾರದ ನಿರ್ಧಾರ .ಶಿವಾಜಿನಗರ ಬಸ್
ನಿಲ್ದಾಣದ ಹಿಂಭಾಗದಲ್ಲೇ ಮೆಟ್ರೋ ನಿಲ್ದಾಣ ರೂಪಿಸಲಾಗುತ್ತಿದೆ. ಅಲ್ಲಿಂದ ಕೇವಲ ಸುಮಾರು 200 ಮೀಟರ್ ಅಂತರದಲ್ಲೇ ಬೌರಿಂಗ್ ಆಸ್ಪತ್ರೆ ಇದ್ದು, ಆವರಣದಲ್ಲೇ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೆನ್ನಲ್ಲೇ ಇವೆರಡರ ನಡುವೆ ಸಂಪರ್ಕ ಕಲ್ಪಿಸುವ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳಿಂದ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಂಆರ್‌ಸಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
ನೋಟಿಸ್ ಜಾರಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮೆಟ್ರೋ ನಿಲ್ದಾಣಗಳಲ್ಲಿ ನೀರು ನುಗ್ಗು ತ್ತಿದ್ದು, ಈ ಸಂಬಂಧ
ಲೋಕಾಯುಕ್ತರು ಬಿಎಂಆರ್‌ಸಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿ ಸಿಕೊಂಡಿದ್ದಾರೆ. ಈ ಸಂಬಂಧ ನಿಗಮಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಮುಖ್ಯವಾಗಿ ನಾಯಂಡ ಹಳ್ಳಿಯ ಮೆಟ್ರೋ ನಿಲ್ದಾಣದ ಎದುರು ವೃಷಭಾವತಿ ನದಿ ಹಾದುಹೋಗಿದೆ. ಆ ನೀರು ನಿಲ್ದಾಣದಲ್ಲಿ ನುಗ್ಗುತ್ತಿದೆ. ಇದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ? ಎಂದು ನೋಟಿಸಿನಲ್ಲಿ ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿವೆ.
ಶಿವಾಜಿನಗರದ ಮೂಲಕ ಹಾದುಹೋಗುವ ಮೆಟ್ರೋ ಅನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜಿಗೆ
ಸಂಪರ್ಕ ಕಲ್ಪಿಸುವ ಆಲೋಚನೆ ಇದೆ. ಹೇಗೆ ವ್ಯವಸ್ಥೆ ಕಲ್ಪಿಸಬೇಕು ಎಂಬುದರ ಬಗ್ಗೆ ವ್ಯವಸ್ಥಾಪಕ
ನಿರ್ದೇಶಕರು ನಿರ್ಧರಿಸುವರು.
ಯು.ಎ. ವಸಂತರಾವ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಎಂಆರ್‌ಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.