ಮೆಟ್ರೋ ಫ್ಲೈಒವರ್: ಪಾಲಿಕೆಗೆ 170 ಕೋಟಿ ಉಳಿತಾಯ
Team Udayavani, Feb 28, 2023, 12:31 PM IST
ಬೆಂಗಳೂರು: ಸಿಗ್ನಲ್ ಫ್ರೀ ಕಾರಿಡಾರ್‌ನಲ್ಲಿ ನಿರ್ಮಿಸಬೇಕಿದ್ದ 2 ಮೇಲ್ಸೇತುವೆಗಳನ್ನು ಬೆಂಗ ಳೂರು ಮೆಟ್ರೋ ರೈಲು ನಿಗ ಮದಿಂದ (ಬಿಎಂ ಆರ್‌ಸಿಎಲ್) ಕೈಗೊಳ್ಳುತ್ತಿರುವ ಹಿನ್ನೆಲೆ ಯಲ್ಲಿ, ಗ್ರೇಡ್ ಸಪರೇಟರ್‌ಗಳಿಗೆ ನಿಗದಿ ಮಾಡಲಾಗಿದ್ದ ಅನುದಾನ ವನ್ನು ಹೊಸದಾಗಿ ಎರಡು ಮೇಲ್ಸೇತುವೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ನಡೆಸಲಾಗು ತ್ತಿದೆ. ಅದಕ್ಕಾಗಿ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಹಾಗೂ ಕನಕಪುರ ರಸ್ತೆಯ ಸಾರಕ್ಕಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಮಾರ್ಗವೂ ನಿರ್ಮಾಣವಾಗಲಿದೆ. ಹೀಗಾಗಿ ಮೇಲ್ಸೇತುವೆಗಳು ನಿರ್ಮಾಣವಾಗಬೇಕಿದ್ದ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ಹಾಗೂ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಬಿಎಂಆರ್‌ಸಿಎಲ್ ಒಪ್ಪಿಗೆ ಸೂಚಿಸಿದೆ.
ಹೀಗಾಗಿ ಇಟ್ಟಮಡು ಜಂಕ್ಷನ್ -ಕಾಮಾಕ್ಯ ಜಂಕ್ಷನ್ ಹಾಗೂ ಸಾರಕ್ಕಿ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ ಮೀಸಲಿಟ್ಟಿರುವ ಅನುದಾನ ವನ್ನು ಬೇರೆ ಕಾಮಗಾರಿಗೆ ಬಳಸಿಕೊಳ್ಳಲು ಸಿದ್ಧತೆ ನಡೆಸಲಾಗಿದ್ದು, ಈ ಕುರಿತು ಶೀಘ್ರದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ಬಿಎಂಆರ್‌ಸಿಎಲ್‌ಗೆ ಹಣ ನೀಡಬೇಕಿತ್ತು: ಬಿಬಿಎಂಪಿ ಯೋಜನೆಯಂತೆ ಸಾರಕ್ಕಿ ಜಂಕ್ಷನ್ ನಿಂದ ಕನಕಪುರ ರಸ್ತೆ ಸಂಪರ್ಕಿಸುವ 1.2 ಕಿ.ಮೀ. ಉದ್ದದ ಮೇಲ್ಸೇತುವೆ ಹಾಗೂ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗಿನ 1.8 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಿಸಲಾಗ ಬೇಕಿತ್ತು. ಈ ಎರಡೂ ಮೇಲ್ಸೇತುವೆಗಳ ನಿರ್ಮಾ ಣಕ್ಕಾಗಿ ರಾಜ್ಯ ಸರ್ಕಾರ ಅಮೃತ ನಗರೋತ್ಥಾನ ಅನುದಾನದಲ್ಲಿ ಬಿಬಿಎಂಪಿಗೆ 170.50 ಕೋಟಿ ರೂ. ಹಣ ನೀಡಿದೆ. ಈ ಮೇಲ್ಸೇತುವೆಗಳು ಸೆಂಟ್ರಲ್ ಸಿಲ್ಕ್ಬೋರ್ಡ್ ಜಂಕ್ಷನ್‌ನಿಂದ ನಾಯಂಡಹಳ್ಳಿವರೆಗಿನ ಸಿಗ್ನಲ್ ಫ್ರೀ ಕಾರಿಡಾರ್ ನ ಭಾಗವಾಗಿತ್ತು. ಆದರೆ, ಆ ಮೇಲ್ಸೇತುವೆ ನಿರ್ಮಾಣವನ್ನು ಬಿಬಿಎಂಪಿಯಿಂದ ಬಿಎಂಆರ್ ಸಿಎಲ್ ವರ್ಗಾಯಿಸಲಾಗಿದೆ.
ಹೀಗಾಗಿ ಸರ್ಕಾರ ನೀಡಿರುವ ಅನುದಾನವನ್ನು ಬಿಬಿಎಂಪಿ ಬಿಎಂಆರ್‌ಸಿಎಲ್‌ಗೆ ವರ್ಗಾಯಿಸ ಬೇಕಿತ್ತು. ಆದರೆ, ಬಿಎಂಆರ್‌ಸಿಎಲ್ ಬಿಬಿಎಂಪಿಯಿಂದ ಯಾವುದೇ ಅನುದಾನ ಪಡೆಯದೇ ರಾಗಿಗುಡ್ಡ ದಿಂದ ಸಿಲ್ಕ್ಬೋರ್ಡ್‌ವರೆಗಿನ 3.35 ಕಿ.ಮೀ. ಉದ್ದದ ಮಾರ್ಗದಲ್ಲಿ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಮಾದರಿಯಲ್ಲಿ ರಸ್ತೆ, ಮೇಲ್ಸೇತುವೆ ಮತ್ತು ಮೆಟ್ರೋ ಮಾರ್ಗ ನಿರ್ಮಿಸಿದೆ.
ಅದೇ ಮಾದರಿಯಲ್ಲಿ 3ನೇ ಹಂತದ ಮೆಟ್ರೋ ಮಾರ್ಗ ನಿರ್ಮಿಸುವಾಗ ಸಾರಕ್ಕಿ ಜಂಕ್ಷನ್‌ನಿಂದ ಕನಕಪುರ ರಸ್ತೆ ಹಾಗೂ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಮೇಲ್ಸೇತುವೆ ಮತ್ತು ಮೆಟ್ರೋ ಮಾರ್ಗವನ್ನು ಜತೆಜತೆಯಾಗಿ ನಿರ್ಮಿಸಲಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ನಿಗದಿ ಮಾಡಲಾಗಿದ್ದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.
3 ಯೋಜನೆಗಳಿಗೆ ಬಳಕೆ: ಸಿಗ್ನಲ್ ಮುಕ್ತ ಕಾರಿ ಡಾರ್‌ನಲ್ಲಿ ನಿರ್ಮಿಸಬೇಕಿದ್ದ ಎರಡು ಮೇಲ್ಸೇತು ವೆಗಳಿಗೆ ನಿಗದಿಯಾಗಿದ್ದ ಹಣವನ್ನು ಬಿಬಿಎಂಪಿ ಬೇರೆ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದರಂತೆ ಬಿಬಿಎಂಪಿ ನಿರ್ಮಿಸಲು ಉದ್ದೇಶಿಸಿರುವ ಮೇಖ್ರಿ ವೃತ್ತದಿಂದ ಸದಾಶಿನಗರ ಪೊಲೀಸ್ ಠಾಣೆವರೆಗೆ ಹಾಗೂ ಕಾವೇರಿ ಜಂಕ್ಷನ್ ನಿಂದ ಸದಾಶಿವನಗರ ಬಾಷ್ಯಂ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣ ಹಾಗೂ ಮೇಖ್ರಿ ವೃತ್ತದಿಂದ ವಿಡ್ಸರ್ ಮ್ಯಾನರ್ ಮೇಲ್ಸೇತುವೆವರೆ ಗಿನ ಪ್ಯಾಲೇಸ್ ರಸ್ತೆ ಅಗಲೀಕರಣ ಕಾಮಗಾರಿ ಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಕುರಿತಂತೆ ಶೀಘ್ರದಲ್ಲಿ ರಾಜ್ಯ ಸರ್ಕಾರದ ಅನುಮತಿಗೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗುತ್ತದೆ.
ಸದ್ಯ ಈ ಯೋಜನೆಗಳ ಯೋಜನಾ ವೆಚ್ಚ ಇನ್ನೂ ನಿಗದಿಯಾಗಿಲ್ಲ. ಈ ಕುರಿತು ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ, ಯೋಜನಾ ವೆಚ್ಚ ನಿಗದಿ ಮಾಡಲಾಗುತ್ತದೆ. ಆನಂತರ ಯೋಜನಾ ವೆಚ್ಚಕ್ಕೆ ಸದ್ಯ ಬಿಬಿಎಂಪಿ ಬಳಿ ಉಳಿದಿರುವ 170.50 ಕೋಟಿ ರೂ. ಹಣವನ್ನು ಬಳಸಲಾಗುತ್ತದೆ ಹಾಗೂ ಹೆಚ್ಚುವರಿ ಅನುದಾನದ ಅಗತ್ಯವಿರದ್ದರೆ ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತದೆ.
ಸಾರಕ್ಕಿ ಜಂಕ್ಷನ್‌ನಿಂದ ಕನಕಪುರ ರಸ್ತೆ ಹಾಗೂ ಇಟ್ಟಮಡು ಜಂಕ್ಷನ್‌ನಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಮೇಲ್ಸೇತುವೆಯನ್ನು ಬಿಎಂಆರ್‌ಸಿಎಲ್‌ನಿಂದಲೇ ನಿರ್ಮಿಸಲಾಗುತ್ತಿದೆ. ಹೀಗಾಗಿ ಆ ಯೋಜನೆಗೆ ನಿಗದಿ ಮಾಡಿರುವ 170.50 ಕೋಟಿ ರೂ. ಮೊತ್ತವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಮೇಖ್ರಿ ವೃತ್ತ ಸುತ್ತ ನಿರ್ಮಿಸಲಿರುವ ಎರಡು ಮೇಲ್ಸೇ ತುವೆ ಹಾಗು ರಸ್ತೆ ಅಗಲೀಕರಣ ಕಾಮಗಾರಿಗೆ ಬಳಸಿಕೊಳ್ಳಲಾಗುವುದು. – ರವೀಂದ್ರ, ಬಿಬಿಎಂಪಿ ವಿಶೇಷ ಆಯುಕ್ತ
– ಗಿರೀಶ್ ಗರಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.