ಮೆಟ್ರೋ; ಬದಲಾಗುತ್ತಾ ಜೀವನ ಶೈಲಿ?

ಕೆಂಗೇರಿ ಮೆಟ್ರೋ ಲೋಕಾರ್ಪಣೆಗೆ ಕ್ಷಣಗಣನೆ; ಸಮಯ ಉಳಿತಾಯ; ಉತ್ಪಾದಕತೆಯೂ ಹೆಚ್ಚಳ

Team Udayavani, Aug 28, 2021, 3:44 PM IST

ಮೆಟ್ರೋ; ಬದಲಾಗುತ್ತಾ ಜೀವನ ಶೈಲಿ?

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಮತ್ತೊಂದು ವಿಸ್ತರಿತ ಮಾರ್ಗ ಮೈಸೂರು ರಸ್ತೆ- ಕೆಂಗೇರಿ ಮೆಟ್ರೋ ಲೋಕಾರ್ಪಣೆಗೆ ಈಗಕ್ಷಣಗಣನೆ. ನಗರದ ಸಂಚಾರದಟ್ಟಣೆ ತಗ್ಗಿಸಲು ನಿರ್ಮಾಣಗೊಂಡ ಈ ಮಾರ್ಗವು ಮುಂಬರುವ ದಿನಗಳಲ್ಲಿ ಆ ಭಾಗದ ಸಾಮಾಜಿಕ-ಆರ್ಥಿಕತೆಯ ಬದಲಾವಣೆಗೂ ಇದು ಬಹುದೊಡ್ಡ ಪಾತ್ರ ನಿರ್ವಹಿಸಲಿದೆ.

ಕೆಂಗೇರಿಯಿಂದ ಮೈಸೂರು ಮಾರ್ಗದುದ್ದಕ್ಕೂ ಬಿಡದಿ,ರಾಮನಗರ,ಮಂಡ್ಯ,ಮದ್ದೂರು,ಚನ್ನಪಟ್ಟಣ, ಶ್ರೀರಂಗಪಟ್ಟಣ ಸೇರಿದಂತೆ ಹತ್ತಾರು ಊರುಗಳು ಬರುತ್ತವೆ. ಅಲ್ಲಿನ ಸಾವಿರಾರು ನಿವಾಸಿಗಳು ನಿತ್ಯದ ವಿವಿಧ ಕೆಲಸ-ಕಾರ್ಯಗಳಿಗೆ ನಗರದ ಕಡೆ ಮುಖಮಾಡಿದ್ದಾರೆ. ಆದರೆ, ನಗರಕ್ಕೆ ಹತ್ತಿರದಲ್ಲೇ ಇದ್ದರೂ, ಸಂಚಾರದಟ್ಟಣೆಯಿಂದ ಪ್ರತಿ ದಿನದ ಪ್ರಯಾಣ ಆ ಭಾಗದ ಜನರಿಗೆ ಪ್ರಯಾಸದಾಯಕ ಆಗಿದೆ. ಈ ಹಿನ್ನೆಲೆ ಯಲ್ಲಿ ಮನೆಗಳನ್ನು ಬಾಡಿಗೆ ಪಡೆದು ಇಲ್ಲಿ ವಾಸ ಇರಬೇಕಾದ ಅನಿವಾರ್ಯತೆ ಇದೆ. ಆದರೆ, ಈಗ ನಗರದ ಹೃದಯಭಾಗ ಮೆಜೆಸ್ಟಿಕ್‌ ನಿಂದ ಕೆಂಗೇರಿ ಕೇವಲ 40-45 ನಿಮಿಷಗಳ ದಾರಿ. ಅಲ್ಲಿಂದ ಮೈಸೂರು ಹತ್ತು ಪಥಗಳ ರಸ್ತೆಯಾಗಿದೆ.

ಹಾಗಾಗಿ, ಸಂಚಾರದಟ್ಟಣೆಗೆ ಬಹುತೇಕ ಮುಕ್ತಿ ದೊರೆಯಲಿದ್ದು, ನಗರದಲ್ಲೇ ವಾಸವಿರಬೇಕಾದ ಅನಿವಾರ್ಯತೆ ತಪ್ಪಲಿದೆ. ಇದರಿಂದ ಆರ್ಥಿಕ ಹೊರೆ ತಕ್ಕಮಟ್ಟಿಗೆ ತಗ್ಗುವುದರ ಜತೆಗೆ ಸಂಜೆಯಾಗುತ್ತಿದ್ದಂತೆ ಜನ ಗೂಡು ಸೇರಬಹುದು. ಉಳಿತಾಯ ಆಗುವ ಸಮಯವನ್ನು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಳೆಯಲಿಕ್ಕೂ ಸಾಧ್ಯವಾಗಲಿದೆ.

ಇದನ್ನೂ ಓದಿ:ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಪತ್ನಿಗೆ ಇ.ಡಿ ಸಮನ್ಸ್  

ಸಮಯ ಉಳಿತಾಯ ಮಾತ್ರವಲ್ಲ; ಮಕ್ಕಳ ಶಿಕ್ಷಣದ ಹೊರೆ ತಗ್ಗಲಿದೆ. ನಗರದ ಮೇಲಿನ ಒತ್ತಡ ಕಡಿಮೆಆಗಲಿದೆ. ವೃತ್ತಿಯ ಜತೆಗೆ ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರಿಗೆ ಪೂರಕವಾಗಲಿದ್ದು, ಆ ಮೂಲಕ ಉತ್ಪಾದಕತೆಹೆಚ್ಚಲಿದೆ.ಇದುಪರೋಕ್ಷವಾಗಿ ಒಟ್ಟಾರೆ ಆಂತರಿಕ ವೃದ್ಧಿಗೂ ನೆರವಾಗಲಿದೆ. ಮಾರ್ಗದ ಉದ್ದ ಬರೀ 7.50 ಕಿ.ಮೀ. ಇರಬಹುದು. ಆದರೆ, ಭವಿಷ್ಯದಲ್ಲಿ ಮೆಟ್ರೋ ಜಾಲ ಮತ್ತಷ್ಟು ಹಿಗ್ಗಲಿದೆ. ಆ ದೃಷ್ಟಿಯಿಂದ ಇದರ ಪರಿಣಾಮ ಉತ್ತಮವಾಗಲಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಪ್ರಯಾಣಿಕರು ಏನಂತಾರೆ?: ಮೆಟ್ರೋ ಬರುತ್ತಿರುವುದು ನಿರೀಕ್ಷೆಗಳು ಮತ್ತೆ ಚಿಗುರೊಡೆಯುವಂತೆ ಮಾಡಿದೆ. ಪ್ರಯಾಣ ದರ ತುಸು ಕೈಗೆಟುವಂತಾದರೆ, ಪ್ರತಿ ದಿನ ಊರಿಂದಲೇ ಬಂದುಹೋಗುತ್ತೇನೆ’ ಎಂದು ಬಿಎಂಟಿಸಿ ಬಸ್‌ ನಿರ್ವಾಹಕ ಚನ್ನಪಟ್ಟಣದ ನಿವಾಸಿ ಮಹೇಶ್‌ ತಿಳಿಸುತ್ತಾರೆ. ಕೆಂಗೇರಿವರೆಗೂ ಮೆಟ್ರೋ ಬರುತ್ತಿರುವುದು ಖುಷಿ ತಂದಿದೆ. ಯಾಕೆಂದರೆ, ನಮಗೆ ಊರಿನಿಂದ ಕೆಂಗೇರಿ ತಲುಪುವುದು ಸುಲಭವಾಗಿತ್ತು. ಆದರೆ, ಅಲ್ಲಿಂದ ಕೆಲಸ ಮಾಡುವ ಜಾಗಕ್ಕೆ ತೆರಳಲು ಹರಸಾಹಸ ಮಾಡಬೇಕಾಗಿತ್ತು. ಇನ್ಮುಂದೆ ಅದರ ಚಿಂತೆ ಕಾಡದು’ ಎಂದು ಖಾಸಗಿ ಉದ್ಯೋಗಿ ಮಂಡ್ಯ ಮೂಲನಿವಾಸಿ ವಿನೋದ್‌ ಹೇಳುತ್ತಾರೆ.

ಸಮಸ್ಯೆಗಳೂ ಇವೆ: ಈ ಮಾರ್ಗದಲ್ಲೊಂದಿಷ್ಟು ತಾಂತ್ರಿಕ ಸಮಸ್ಯೆಗಳೂ ಇವೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣ ಪಕ್ಕದಲ್ಲೇ ರೈಲು ನಿಲ್ದಾಣ ಇದೆ. ಎರಡರ ನಡುವೆ ಸಂಪರ್ಕ ಕಲ್ಪಿಸುವ ಕೆಲಸ ಆಗಿಲ್ಲ. ಪ್ಯಾಸೆಂಜರ್‌ ರೈಲುಗಳು ಮಾತ್ರ ನಿಲುಗಡೆ ಆಗುತ್ತವೆ. ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ವ್ಯವಸ್ಥೆ ಇಲ್ಲ. ಪ್ರಸ್ತುತ ಕಾರ್ಯಾಚರಣೆಮಾಡುವರೈಲುಗಳಕಾರ್ಯಕ್ಷಮತೆ ಹೆಚ್ಚಬೇಕು. ಅಂದರೆ ಸಂಜೆ ಮತ್ತು ಬೆಳಗ್ಗೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ರೈಲು ಸೇವೆ ಮತ್ತು ಬಸ್‌ ಸೇವೆಗಳು ದೊರೆಯುವಂತಾಗಬೇಕು. ಅದು ಅಂದುಕೊಂಡಷ್ಟು ಸರಳವಾಗಿಯೂ ಇಲ್ಲ. ಇದೆಲ್ಲವೂ ಆಗದಿದ್ದರೆ, ಉದ್ದೇಶವೂ ಸಾಕಾರಗೊಳ್ಳುವುದಿಲ್ಲ ಎಂದು ನಗರ ರೈಲ್ವೆ ಹೋರಾಟಗಾರ ಸಂಜೀವ ದ್ಯಾಮಣ್ಣವರ ಅಭಿಪ್ರಾಯ ಪಡುತ್ತಾರೆ.

ಹೈಟೆಕ್‌ ಆಯ್ತು ಬದುಕಿನ ಬಂಡಿ
ಆರಂಭದಲ್ಲಿ ಮೇಲ್ಮಧ್ಯಮ ವರ್ಗಕ್ಕೆ ಸೀಮಿತವಾಗಿತ್ತು. ಆದರೆ, ಒಂದೂವರೆ ವರ್ಷದ ಅಂತರದಲ್ಲಿ ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರುವವರು, ಕೂಲಿಕಾರ್ಮಿಕರೆ ಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ನಿತ್ಯ ಅವರೆಲ್ಲಾ ತುಂಬಿತುಳುಕುವ ಗೂಡ್ಸ್‌ ಆಟೋ, ಟೆಂಪೋ, ಖಾಸಗಿ, ಬಿಎಂಟಿಸಿ ಬಸ್‌ಗಳಲ್ಲಿ ನಿಂತು ನಿಗದಿತ ಸ್ಥಳ ತಲುಪಬೇಕಿತ್ತು. ಅದೇ ರೀತಿ, ಮಧ್ಯಮ ವರ್ಗದ ಜನ ಸ್ವಂತ ವಾಹನಗಳನ್ನು ಏರಿ, ಮುಖಕ್ಕೊಂದು ಮಾಸ್ಕ್ ಹಾಕಿಕೊಂಡು(ಸದ್ಯ ಕೊರೊನಾದಿಂದ ಬಚಾವಾಗಲು ಮಾಸ್ಕ್ ಹಾಕಲಾಗುತ್ತಿದೆ) ಓಡಾಡ ಬೇಕಿತ್ತು. ಈಗಇವರೆಲ್ಲರ “ಬದುಕಿನ ಬಂಡಿ’ ಹೈಟೆಕ್‌ ಆಗಲಿದೆ. ಹವಾನಿಯಂತ್ರಿತ ಮೆಟ್ರೋದಲ್ಲಿ ಬಂದಿಳಿದು, ಕೆಲಸ ಮುಗಿಸಿಕೊಂಡು ನಿಶ್ಚಿಂತೆಯಾಗಿ ಮನೆಗೆ ಹಿಂತಿರುಗುತ್ತಾರೆ. ಇದರಿಂದ ಗುಣಮಟ್ಟದ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಇಂಧನ ಉಳಿತಾಯ ಆಗುತ್ತಿದೆ. ಬೆನ್ನುನೋವು,ಅಲರ್ಜಿ, ನಿರಂತರಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಕಡಿಮೆಯಾಗಿವೆ.

“ಲಾಸ್ಟ್‌ಮೈಲ್‌ ಕನೆಕ್ಟಿವಿಟಿ ಪರಿಣಾಮಕಾರಿ ಆಗಲಿ’
ಬೆಂಗಳೂರಿನಂತಹ ಮಹಾನಗರಗಳಲ್ಲಿನ ಸಂಚಾರದಟ್ಟಣೆ ಸಮಸ್ಯೆಗೆ ಮೆಟ್ರೋಒಂದು ಸುಸ್ಥಿರ ಹಾಗೂದೀರ್ಘಾವಧಿ ಪರಿಹಾರ ಎಂಬುದರಲ್ಲಿ
ಎರಡು ಮಾತಿಲ್ಲ.ಆದರೆ,ಅದು ನಿರೀಕ್ಷಿತ ಪರಿಣಾಮಬೀರಬೇಕಾದರೆ,ಕನಿಷ್ಠ ಎರಡೂ ಹಂತಗಳನ್ನಾದರೂ ಪೂರ್ಣಗೊಳಿಸಬೇಕು. ಅದಕ್ಕೆ
ಪೂರಕವಾಗಿ “ಲಾಸ್ಟ್‌ಮೈಲ್‌ಕನೆಕ್ಟಿವಿಟಿ’ ಅಂದರೆ ನಿಲ್ದಾಣಕ್ಕೆಬಂದಿಳಿಯುವ ಪ್ರಯಾಣಿಕರು ನಿಗದಿತ ಸ್ಥಳ ತಲುಪಲು ಸೂಕ್ತ ಸಾರಿಗೆ ವ್ಯವಸ್ಥೆ
ಕಲ್ಪಿಸಬೇಕಾಗುತ್ತದೆ. ವಿಚಿತ್ರವೆಂದರೆ ಈ ವರೆಗೆ ಇದಾವುದೂ ಸಮರ್ಪಕವಾಗಿ ಆಗಿಲ್ಲ.ಹೊಸದಾಗಿ ಸೇರ್ಪಡೆಗೊಳ್ಳಲಿರುವಕೆಂಗೇರಿ ಮಾರ್ಗ ದಲ್ಲೂ ಅದು ಪುನರಾವರ್ತನೆ ಆಗದಿರಲಿ.ಇಲ್ಲಿಪ್ರತಿ 15 ನಿಮಿಷಕ್ಕೊಂದು ಮೆಟ್ರೋ ಸಂಪರ್ಕ ಸೇವೆಗಳನ್ನು ಬಿಎಂಟಿಸಿ ಪರಿಚಯಿಸಲು ನಿರ್ಧರಿಸಿದೆ.

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.