ಮಧ್ಯರಾತ್ರಿವರೆಗೂ ಮೆಟ್ರೋ ಸಂಚಾರ
Team Udayavani, Apr 12, 2018, 12:53 PM IST
ಬೆಂಗಳೂರು: ನಗರದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿಗೆ ಬರುವ ಪ್ರೇಕ್ಷಕರ ಅನುಕೂಲಕ್ಕಾಗಿ ನಿಗದಿತ ದಿನಗಳಂದು ಮೆಟ್ರೋ ಸೇವೆಯನ್ನು ತಡರಾತ್ರಿ 12.30ರವರೆಗೂ ವಿಸ್ತರಿಸಿದ್ದು, ಪಂದ್ಯ ಮುಗಿದ ನಂತರ ಏಕರೂಪ ಪ್ರಯಾಣ ದರ ನಿಗದಿಪಡಿಸಲಾಗಿದೆ.
ಏಪ್ರಿಲ್ 13, 21, 25, 29 ಹಾಗೂ ಮೇ 1 ಮತ್ತು 17ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ದಿನಗಳಂದು ತಡ ರಾತ್ರಿ 12.30ರವರೆಗೂ ಪ್ರತಿ 15 ನಿಮಿಷಕ್ಕೊಂದು ಮೆಟ್ರೋ ಸೇವೆ ಇರಲಿದೆ. ಕೊನೆ ವಾಣಿಜ್ಯ ರೈಲು ಸಂಚಾರವು ಕಬ್ಬನ್ ಉದ್ಯಾನ ಮೆಟ್ರೋ ರೈಲು ನಿಲ್ದಾಣದಿಂದ ಮೈಸೂರು ರಸ್ತೆಗೆ ತೆರಳಲಿದೆ. ಪಂದ್ಯಾವಳಿ ಮುಗಿದ ನಂತರ ಕಬ್ಬನ್ ಉದ್ಯಾನ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳಿಂದ “ರಿಟರ್ನ್ ಜರ್ನಿ ಪೇಪರ್ ಟಿಕೆಟ್’ ಪರಿಚಯಿಸಲಾಗಿದೆ.
ಇದರ ಬೆಲೆ 50 ರೂ. ಆಗಿದ್ದು, ಇದರಿಂದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಯಾವುದೇ ನಿಲ್ದಾಣಗಳಿಗೆ ಜನ ಪ್ರಯಾಣಿಸಬಹುದು. ಏಕರೂಪದ ಟಿಕೆಟ್ ದರ ನಿಗದಿ ಉದ್ದೇಶ ಪಂದ್ಯಾವಳಿ ನಂತರ ಬರುವ ಜನದಟ್ಟಣೆ ತಗ್ಗಿಸಲು
ಹಾಗೂ ಚಿಲ್ಲರೆ ಕೊರತೆ ನೀಗಿಸುವುದಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸ್ಪಷ್ಟಪಡಿಸಿದೆ.
ಇನ್ನು ಏಪ್ರಿಲ್ 15ರಂದು ಸಂಜೆ 4ಗಂಟೆಗೆ ಪಂದ್ಯಾವಳಿ ಪ್ರಾರಂಭಗೊಳ್ಳಲಿದೆ. ಆದಾಗ್ಯೂ ಪ್ರಯಾಣಿಕರು ಪಂದ್ಯ ಮುಗಿದ ನಂತರ ರಿಟರ್ನ್ ಜರ್ನಿಗಾಗಿ ಎಂ.ಜಿ. ರಸ್ತೆ ಮತ್ತು ಕಬ್ಬನ್ ಉದ್ಯಾನ ನಿಲ್ದಾಣಗಳಿಂದ 50 ರೂ. “ಪೇಪರ್ ಟಿಕೆಟ್’ ಖರೀದಿಸಬಹುದು. ಟೋಕನ್ ಸೌಲಭ್ಯವೂ ಇರಲಿದೆ.
ಇವರಿಗೆ ಪೇಪರ್ ಟಿಕೆಟ್ ಬೇಕಾಗಿಲ್ಲ ಸ್ಮಾರ್ಟ್ ಕಾಡ್ ಹೊಂದಿರುವವರಿಗೆ ಈ ಪೇಪರ್ ಟಿಕೆಟ್ ಅವಶ್ಯಕತೆ ಇರುವುದಿಲ್ಲ. ಎಂದಿನಂತೆ ರಿಯಾಯ್ತಿ ದರದಲ್ಲಿ ವಿಸ್ತರಿಸಿದ ಅವಧಿಯಲ್ಲೂ ಬಳಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.