ಮೈದಾನದ ಕೆಳಗೆ ನುಸುಳಲಿದೆ ಮೆಟ್ರೋ ಸುರಂಗ!
Team Udayavani, Sep 22, 2017, 11:46 AM IST
ಬೆಂಗಳೂರು: ತೀವ್ರ ವಿರೋಧದ ನಡುವೆಯೇ ಗೊಟ್ಟಿಗೆರೆ-ನಾಗವಾರ ನಡುವಿನ ಸುರಂಗ ಮಾರ್ಗದ ನಕ್ಷೆ ಬದಲಾವಣೆ ಸಮರ್ಥಿಸಿಕೊಂಡ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ), ಕಂಟೋನ್ಮೆಂಟ್ ರೈಲು ನಿಲ್ದಾಣದ ಬದಲಿಗೆ ಬಂಬೂಬಜಾರ್ ಬಳಿಯ ಶಾಲಾ ಮೈದಾನದಡಿ ನಿರ್ಮಿಸುವುದೇ ಸೂಕ್ತ ಎಂಬ ವಾದ ಮುಂದಿಟ್ಟಿತು.
ಈ ಮೊದಲು ಶಿವಾಜಿನಗರದಿಂದ ಕಂಟೋನ್ಮೆಂಟ್ ನಿಲ್ದಾಣದ ಮೂಲಕ ಪಾಟರಿ ಟೌನ್‌ಗೆ ತೆರಳಲು ಉದ್ದೇಶಿಸಲಾಗಿತ್ತು. ಆದರೆ, ಹೊಸ ನಕ್ಷೆಯಲ್ಲಿ ನ್ಯೂ ಬಂಬೂ ಬಜಾರ್ ಬಳಿಯ ಶಾಲಾ ಮೈದಾನದಡಿ ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕೆ ರೈಲ್ವೆ ಹೋರಾಟಗಾರರ ವೇದಿಕೆ, ಕಂಟೋನ್ಮೆಂಟ್ ನಿವಾಸಿಗಳು ಸೇರಿದಂತೆ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಗುರುವಾರ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲ ಸುದ್ದಿಗೋಷ್ಠಿಯಲ್ಲಿ ನಕ್ಷೆ ಮಾರ್ಪಾಡಿಗೆ ಕಾರಣಗಳನ್ನು ನೀಡಿದರು.
ಕೆಟ್ಟುನಿಂತ್ರೆ ಕಷ್ಟ: ಕಂಟೋನ್ಮೆಂಟ್ ರೈಲು ನಿಲ್ದಾಣದ ಮೂಲಕ ಮೆಟ್ರೋ ಮಾರ್ಗ ನಿರ್ಮಿಸುವುದಾದರೆ, 2 ನಿಲ್ದಾಣಗಳ ನಡುವಿನ ಅಂತರ ಸುಮಾರು 1.8 ಕಿ.ಮೀ. ಆಗುತ್ತದೆ. ಆದರೆ, ಸಾಮಾನ್ಯವಾಗಿ ಈ ಅಂತರ ಗರಿಷ್ಠ 960 ಮೀ. ಇರುತ್ತದೆ. ಮಾರ್ಗಮಧ್ಯೆ ರೈಲು ಕೆಟ್ಟುನಿಂತರೆ, ಪ್ರಯಾಣಿಕರು ಹೆಚ್ಚು-ಕಡಿಮೆ 1 ಕಿ.ಮೀ. ನಡೆಯಬೇಕು. ಅದಕ್ಕಿಂತ ಮುಖ್ಯವಾಗಿ ಈ ಮಾರ್ಗ ನಿರ್ಮಾಣದ ವೇಳೆ ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಕೆಟ್ಟುನಿಂತರೆ, ಹೊರಗೆ ತೆಗೆಯಲು ಹಲವು ಕಟ್ಟಡಗಳನ್ನು ನೆಲಸಮಗೊಳಿಸಬೇಕಾಗುತ್ತದೆ ಎಂದು ಹೇಳಿದರು.
ಇನ್ನು ರೈಲು ನಿಲ್ದಾಣ ಹತ್ತಿರದಲ್ಲೇ ಇರುವುದರಿಂದ ಈ ಭಾಗದಲ್ಲಿ ಭೂಮಿಯಿಂದ 40 ಮೀಟರ್ ಆಳದಲ್ಲಿ ನಿಲ್ದಾಣ ನಿರ್ಮಿಸಬೇಕಾಗುತ್ತದೆ. ಆಗ 10ರಿಂದ 15 ಮೀ. ಆಳದಲ್ಲಿ ಬರುವ ಮೆಟ್ರೋ, ಹಾಗಾಗಿ, ಕಂಟೋನ್ಮೆಂಟ್ ಆಸುಪಾಸು ಕನಿಷ್ಠ ದೂರವನ್ನು ಈ 40 ಮೀಟರ್ ಆಳದಲ್ಲೇ ಸುರಂಗ ಮಾರ್ಗ ನಿರ್ಮಿಸಬೇಕಾಗುತ್ತದೆ. ಆದರೆ, ಸಾಮಾನ್ಯವಾಗಿ ಮೆಟ್ರೋ ಸುರಂಗ ಮಾರ್ಗ 15 ಮೀಟರ್ ಆಳದಲ್ಲಿ ಇರುತ್ತದೆ. ಮೆಜೆಸ್ಟಿಕ್ ಇಂಟರ್‌ಚೇಂಜ್ 20 ಮೀಟರ್ ಕೆಳಗಡೆ ನಿರ್ಮಾಣವಾಗಿದೆ.
ಅಲ್ಲದೆ, ಕಂಟೋನ್ಮೆಂಟ್ ಮಾರ್ಗದಲ್ಲಿ ಅತಿದೊಡ್ಡ ತಿರುವು (ಶಾರ್ಪ್ ಕರ್ವ್) ಬರುತ್ತದೆ. ಇದರಿಂದ ಗಂಟೆಗೆ ಸರಾಸರಿ 80 ಕಿ.ಮೀ. ವೇಗದಲ್ಲಿ ಹೊರಟ ರೈಲು, ತಿರುವಿನಲ್ಲಿ ಏಕಾಏಕಿ 20ರಿಂದ 30 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು. ಶಿವಾಜಿನಗರದಿಂದ ನೇರವಾಗಿ ಬಂಬೂ ಬಜಾರಿನ ಬಳಿ ಇರುವ ಮೈದಾನದ ಮೂಲಕ ಹೋದರೆ, ಅಂತರ ಕೇವಲ 800 ಮೀಟರ್ ಆಗುತ್ತದೆ. ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ.
ಕಂಟೋನ್ಮೆಂಟ್ ನಿಲ್ದಾಣ ಕೇವಲ 130ರಿಂದ 140 ಮೀ. ದೂರ ಆಗಲಿದ್ದು, ಪ್ರಯಾಣಿಕರಿಗಾಗಿ ಸಬ್‌ವೇ ನಿರ್ಮಿಸಲಾಗುವುದು ಎಂದರು. ಈ ಬಗ್ಗೆ ಮೊದಲೇ ಯಾಕೆ ಯೋಚಿಸಲಿಲ್ಲ ಎಂದು ಕೇಳಿದಾಗ, ಮೊದಲ ಹಂತ ಪೂರ್ಣಗೊಳ್ಳುವ ಮೊದಲೇ 2ನೇ ಹಂತದ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿತ್ತು. ಆಗ, ಬೆಂಗಳೂರು ಮಣ್ಣಿನ ಬಗ್ಗೆ ಇನ್ನೂ ಗೊತ್ತಿರಲಿಲ್ಲ. ಅಷ್ಟಕ್ಕೂ ಡಿಪಿಆರ್ ಅಂತಿಮವಲ್ಲ; ಡಿಟೇಲ್ ಎಂಜಿನಿಯರಿಂಗ್ ರಿಪೋರ್ಟ್ ಆಗಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.
ವರದಿ ರೆಡಿ: ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಮೆಟ್ರೋ ಮಾರ್ಗಕ್ಕೆ ಸಂಬಂಧಿಸಿದ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದ್ದು, ಬಿಎಂಆರ್‌ಸಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು. ಯೋಜನೆ ಸಿದ್ಧಗೊಂಡಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗುವುದು. ನಂತರ ಅದನ್ನು ಬಿಎಂಆರ್‌ಸಿಗೆ ಕಳುಹಿಸಲಾಗುವುದು. ಈ ಎಲ್ಲ ಪ್ರಕ್ರಿಯೆ ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಮಾರ್ಗ ಬದಲಾವಣೆಗೆ ಕಾರಣ
* ಹಳೆಯ ಮಾರ್ಗ 1.80 ಕಿ.ಮೀ. ಮತ್ತು ಹೊಸ ಮಾರ್ಗ 800 ಮೀ.
* ಅತಿದೊಡ್ಡ ತಿರುವು ಬರುವುದರಿಂದ ರೈಲಿನ ವೇಗ ತಗ್ಗಲಿದೆ.
* ಟಿಬಿಎಂ ಕೆಟ್ಟುನಿಂತರೆ ಹೊರತೆಗೆಯಲು ಮುಕ್ತ ಜಾಗ ಇಲ್ಲ.
* ರೈಲು ನಿಲ್ದಾಣ ಪಕ್ಕದಲ್ಲಿರುವುದರಿಂದ ದುಪ್ಪಟ್ಟು ಆಳಕ್ಕಿಳಿಯಬೇಕು.
* ಪರಿಷ್ಕೃತ ಮಾರ್ಗದಲ್ಲಿ ಹೋದರೆ ಸಾವಿರ ಕೋಟಿ ರೂ. ಉಳಿಯುತ್ತದೆ.
* 40 ಮೀ. ಆಳದಲ್ಲಿ ಒಟ್ಟಿಗೆ 6 ಸಾವಿರ ಪ್ರಯಾಣಿಕರನ್ನು ಕರೆದೊಯ್ಯವುದು ಸುರಕ್ಷಿತವಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.