30 ವಾರ್ಡ್‌ಗಳಿಗೆ ಇ-ಆಸ್ತಿ ತಂತ್ರಾಂಶ ವಿಸ್ತರಣೆ

ಎಲ್ಲಾ ವಾರ್ಡ್‌ಗಳಲ್ಲೂ ತಂತ್ರಾಂಶ ಅಳವಡಿಕೆಗೆ ಮಹಾನಗರ ಪಾಲಿಕೆ ಚಿಂತನೆ

Team Udayavani, Nov 19, 2021, 12:29 PM IST

ಬೆಂಗಳೂರು ಪಾಲಿಕೆ

ಬೆಂಗಳೂರು: ಬಿಬಿಎಂಪಿ ಕಂದಾಯ ಇಲಾಖೆ ತನ್ನ ಸೇವೆಗಳನ್ನು ಸರಳೀಕರಣ ಗೊಳಿಸಿ ಕ್ಲುಪ್ತ ಅವಧಿಯಲ್ಲಿ ವಿಲೇವಾರಿ ಮಾಡುವ ಉದ್ದೇಶ ದಿಂದ ಈಗಾಗಲೇ “ಇ-ಆಸ್ತಿ, ತಂತ್ರಾಂಶ’ವನ್ನು ಈಗಗಾಲೇ ಕೆಲವು ವಾರ್ಡ್‌ಗಳಲ್ಲಿ ವಿಸ್ತರಣೆ ಮಾಡಿದ್ದು ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಆ ಹಿನ್ನೆಲೆಯಲ್ಲಿ ಎರಡನೇ ಹಂತದಲ್ಲಿ ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಯ 30 ವಾರ್ಡ್‌ಗಳಿಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ.

ಹೆಬ್ಟಾಳ ಕ್ಷೇತ್ರ ವ್ಯಾಪ್ತಿಯ ಜೆಸಿನಗರ ಉಪ ವಿಭಾಗದ ಗಂಗೇನಹಳ್ಳಿ, ಜಯಚಾಮ ರಾಜೇಂದ್ರ ನಗರ, ಮನೋರಾಯನಪಾಳ್ಯ ವಿಶ್ವನಾಥ ನಾಗೇನಹಳ್ಳಿ ಹಾಗೂ ಹೆಬ್ಟಾಳ ಉಪ ವಿಭಾಗದ ಗಂಗಾನಗರ, ರಾಧಾಕೃಷ್ಣ ದೇವಸ್ಥಾನ ಮತ್ತು ಸಂಜಯನಗರ ವಾರ್ಡ್ ಗಳಿಗೆ ಸೇವೆ ವಿಸ್ತರಿಸಲಾಗಿದೆ.

ಶಿವಾಜಿನಗರ ಉಪವಿಭಾಗದ ಭಾರತಿ ನಗರ, ಶಿವಾಜಿನಗರ, ಅಲಸೂರು ವಸಂತನಗರ ಉಪ ವಿಭಾಗದ ಜಯ ಮಹಲ್‌, ರಾಮಸ್ವಾಮಿ ಪಾಳ್ಯ, ಸಂಪಂಗಿ ರಾಮನಗರ, ವಸಂತನಗರ ಪಾರ್ಡ್‌ಗಳಲ್ಲೂ ಇ-ಆಸ್ತಿ ತಂತ್ರಾಂಶ ಜಾರಿಗೊಳಿಸಲಾಗಿದೆ. ಪುಲಕೇಶಿ ನಗರ ಕ್ಷೇತ್ರದ ಪುಲಕೇಶಿನಗರ ಉಪವಿಭಾಗದ ದೇವರಜೀವನಹಳ್ಳಿ, ಪುಲಕೇಶಿನಗರ, ಎಸ್‌.ಕೆ.ಗಾರ್ಡನ್‌, ಕೆ.ಜೆ. ಹಳ್ಳಿ ಉಪವಿಭಾಗದ ಕಾವಲ್‌ ಭೈರಸಂದ್ರ, ಕುಶಾಲನಗರ, ಮುನೇಶ್ವರನಗರ, ಸಗಾಯ್‌ ಪುರಂ ವಾಡ್‌ಗಳಲ್ಲಿ ವಿಸ್ತರಿಸಲಾಗಿದೆ.

ಇದನ್ನೂ ಓದಿ:- ಅದೃಷ್ಟಕ್ಕಿಂತ ಪರಿಶ್ರಮ ನಂಬಿ: ಪುತ್ರರಿಗೆ ರವಿಚಂದ್ರನ್‌ ಕಿವಿಮಾತು

ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯ ಮಾರುತಿ ಸೇವಾನಗರದ ಬಾಣಸವಾಡಿ, ಕಮ್ಮನಹಳ್ಳಿ, ಲಿಂಗರಾಜಪುರಂ, ಮಾರುತಿ ಸೇವಾನಗರ, ಎಚ್‌.ಬಿ.ಆರ್‌. ಲೇಔಟ್‌ ಉಪವಿಭಾಗದ ಕಾಚರಕನಹಳ್ಳಿ, ಕಾಡುಗೊಂಡನಹಳ್ಳಿ, ನಾಗವಾರ ವಾರ್ಡ್‌ಗಳಿಗೂ ವಿಸ್ತರಣೆ ಮಾಡಲಾಗಿದೆ.

ಈ ಹಿಂದೆ ಪಾಲಿಕೆ ಮೊದಲ ಹಂತದಲ್ಲಿ ಪ್ರಯೋಗಿಕವಾಗಿ ಇ-ತಂತ್ರಾಂಶವನ್ನು ಶಾಂತಿನಗರ ಕ್ಷೇತ್ರದ ದೊಮ್ಮಲೂರು ಉಪ ವಿಭಾಗದ ಜೋಗುಪಾಳ್ಯ, ದೊಮ್ಮ ಲೂರು,ಗರಮ್‌, ವನ್ನಾರ ಪೇಟೆಯಲ್ಲಿ ಹಾಗೂ ಸಿ.ವಿ.ರಾಮನ್‌ ನಗರ ಕ್ಷೇತ್ರದ ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್‌ ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳ ನಗರ, ಜೀವನ್‌ ಭೀಮಾನಗರ, ಕೋನೇನ ಅಗ್ರಹಾರ ವಾರ್ಡ್‌ನಲ್ಲಿ ಜಾರಿಗೊಳಿಸಲಾಗಿತ್ತು. ತೆರಿಗೆದಾರರ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಾಲಿಕೆಯ ಎಲ್ಲಾ ವಾರ್ಡ್‌ ಗಳಲ್ಲೂ ಇ-ಆಸ್ತಿ ತಂತ್ರಾಂಶ ಅಳವಡಿಕೆ ಮಾಡುವ ಉದ್ದೇಶ ಬಿಬಿಎಂಪಿಗೆ ಇದೆ.

ಇ-ಆಸ್ತಿ ತಂತ್ರಾಂಶದಿಂದ ಏನು ಪ್ರಯೋಜನ?

ತಂತ್ರಾಂಶದಿಂದ ವಿತರಿಸಲಾಗುವ ನಮೂನೆ ಎ ಅಥವಾ ಬಿ ಯಲ್ಲಿ ಸ್ವತ್ತಿನ ಮಾಲೀಕರು ಮತ್ತು ಸ್ವತ್ತಿಗೆ ಸಂಬಂಧಪಟ್ಟ 42 ಅಂಶಗಳನ್ನೊಳಗೊಂಡ ಮಾಹಿತಿ ನಮೂದಿಸಿದೆ. ತಂತ್ರಾಂಶದಿಂದ ವಿತರಿಸಲಾಗುವ ದಾಖಲೆಗಳನ್ನು ಯಾವ ಸಮಯದಲ್ಲೂ, ಎಲ್ಲಿಯಾದರೂ ಜಾಲತಾಣಗಳಲ್ಲಿ ವೀಕ್ಷಿಸಬಹುದು.

ತಂತ್ರಾಂಶದಿಂದ ವಿತರಿಸಲಾಗುವ ದಾಖಲೆಗಳಲ್ಲಿ ಡಿಜಿಟಲ್‌ ಸಹಿಯನ್ನು ಅಳವಡಿಸಲಾಗುವುದು. ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸ್ವತ್ತಿನ ವಹಿವಾಟಾದ ನಂತರ ವಿವಿರಗಳು ಸ್ವಯಂಚಾಲಿತವಾಗಿ ಇ-ಆಸ್ತಿ ತಂತ್ರಾಂಶಕ್ಕೆ ವರ್ಗಾಯಿಸಲಾಗುವುದು.

ಇ-ಆಸ್ತಿ ತಂತ್ರಾಂಶವನ್ನು ಆಸ್ತಿ ತೆರಿಗೆ ತಂತ್ರಾಂಶದೊಂದಿಗೂ ಸಂಯೋಜಿಸಲಾಗಿದ್ದು ಇ-ಆಸ್ತಿ ತಂತ್ರಾಂಶ ಮತ್ತು ಆಸ್ತಿ ತೆರಿಗೆ ತಂತ್ರಾಂಶದ ಸ್ವತ್ತಿನ ಮಾಲೀಕರ ಮತ್ತು ಸ್ವತ್ತಿನ ಆಸ್ತಿ ತೆರಿಗೆ ವಿವರಗಳು ವಿನಿಮಯವಾಗುತ್ತದೆ. ಇ-ಆಸ್ತಿ ತಂತ್ರಾಂಶದಿಂದ ನೀಡಲಾಗುವ ಸೇವೆಗೆ ಸಂಬಂಧಿಸಿದ ಶುಲ್ಕಗಳನ್ನು ಆನ್‌ಲೈನ್‌ ಮೂಲಕ ಅಥವಾ ಚಲನ್‌ ಪಡೆದು ಆಯ್ದ ಬ್ಯಾಂಕ್‌ ಶಾಖೆಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.