ಖಾದಿ ಉತ್ಸವದಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತ್ರಗಳು


Team Udayavani, Jan 3, 2018, 12:49 PM IST

khadi utsava.jpg

ಬೆಂಗಳೂರು: ಒಂದು ಶಾಲು ಬೆಲೆ ಎಷ್ಟಿರಬಹುದು? 500 ರೂ.? ಅಬ್ಬಬ್ಟಾ ಎಂದರೆ, ಐದು ಸಾವಿರ ರೂ. ಆಗಬಹುದು. ಆದರೆ, ಖಾದಿ ಉತ್ಸವದಲ್ಲಿ ಪ್ರದರ್ಶನಕ್ಕಿಟ್ಟ ಶಾಲೊಂದರ ಬೆಲೆ ಎರಡೂವರೆ ಲಕ್ಷ! ಹೌದು, ಅದು “ಕಿಂಗ್‌ ಆಫ್ ವೂಲ್‌’ ಪಾಶ್ಮಿನಾ ಉಣ್ಣೆಯಿಂದ ಪ್ರಸಿದ್ಧ ಜಮ್ಮು-ಕಾಶ್ಮೀರದ ಖಾದಿ ಕುಶಲಕರ್ಮಿಗಳು ತಯಾರಿಸಿದ ಶಾಲು.

ಅದರಲ್ಲಿ ಕಡ್ಡಿಯಿಂದ ಹೆಣೆದ ಅಪರೂಪದ ಕಲಾಕುಸುರಿಯನ್ನು ಆ ಶಾಲುಗಳ ಮೇಲೆ ಮೂಡಿಬಂದಿದೆ. ಈ ಶಾಲುಗಳಿಗೆ ವಿದೇಶದಲ್ಲಿ ಕೂಡ ಬೇಡಿಕೆ ಇದೆ. ಈಗ ಈ ಅಪರೂಪದ ಶಾಲುಗಳು ಈಗ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರದಿಂದ ಆರಂಭಗೊಂಡ ಒಂದು ತಿಂಗಳ ರಾಷ್ಟ್ರಮಟ್ಟದ ಖಾದಿ ಉತ್ಸವದ ಆಕರ್ಷಣೆಯ ಕೇಂದ್ರಬಿಂದು. 

20 ಡಿಗ್ರಿಯಲ್ಲೂ ಬೆಚ್ಚಗಿನ ಅನುಭವ!: ಸಾಮಾನ್ಯ ಶಾಲುಗಳಿಗೆ ಮತ್ತು ಈ ಪಾಶ್ಮಿನಾ ಉಣ್ಣೆಯ ಶಾಲುಗಳಿಗೆ ಸಾಕಷ್ಟು ವ್ಯತ್ಯಾಸ ಇದೆ. 0ಗಿಂತ 10ರಿಂದ 20 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಉಷ್ಣಾಂಶ (-10ರಿಂದ -20 ಡಿಗ್ರಿ)ದಲ್ಲೂ ಈ ಶಾಲುಗಳು ಬೆಚ್ಚಗಿನ ಹಿತ ನೀಡುತ್ತವೆ. ಸಂಪೂರ್ಣವಾಗಿ ಕೈಯಿಂದ ತಯಾರಿಸಲಾಗಿದ್ದು, ಇವುಗಳ ಮೇಲೆ ವಿವಿಧ ಪ್ರಕಾರದ ವಿನ್ಯಾಸಗಳನ್ನು ರೂಪಿಸಲಾಗಿರುತ್ತದೆ.

ಇಂತಹ ಒಂದು ಶಾಲು ಹೆಣೆಯಲು ಕನಿಷ್ಠ ಒಂದು ವರ್ಷ ಹಿಡಿಯುತ್ತದೆ ಎಂದು ತಯಾರಕ ಬುರ್ಹಾನ್‌ “ಉದಯವಾಣಿ’ಗೆ ತಿಳಿಸಿದರು. ಪ್ರತಿ ವರ್ಷ 40ರಿಂದ 50 ಲಕ್ಷ ರೂ. ವಹಿವಾಟು ನಡೆಸಲಾಗಿದೆ. ಇದರಲ್ಲಿ ದುಬಾರಿ ಶಾಲುಗಳು, ಲಕ್ಷಾಂತರ ಬೆಲೆಬಾಳುವ ಸೀರೆಗಳು, ಸಿಲ್ಕ್ ಸ್ಟೋಲ್ಸ್‌, ಸಾಂಪ್ರದಾಯಿಕ ಕೋಟುಗಳು ಸೇರಿವೆ. 

ನಮ್ಮ ಬಳಿ ಐದು ಲಕ್ಷ ರೂ. ಬೆಲೆಬಾಳುವ ಪಾಶ್ಮಿನಾ ಶಾಲುಗಳೂ ಇವೆ. ಆದರೆ, ಸದ್ಯಕ್ಕೆ ಅವುಗಳನ್ನು ಇಲ್ಲಿ ಪ್ರದರ್ಶನ ಮಾಡಿಲ್ಲ. 2006ರಿಂದ ನಾವು ಪ್ರದರ್ಶನ ನಡೆಸುತ್ತಿದ್ದೇವೆ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದು, ಉತ್ತರ ಭಾರತದಲ್ಲಿ ಶಾಲುಗಳು ಹೆಚ್ಚು ಮಾರಾಟವಾಗುತ್ತವೆ. ಬೆಂಗಳೂರಿನಲ್ಲಿ ಸೀರೆಗಳು, ಸೂಟುಗಳ ಮಾರಾಟ ಹೆಚ್ಚು ಎನ್ನುತ್ತಾರೆ. ಜಮ್ಮು-ಕಾಶ್ಮೀರದ ಶ್ರೀನಗರ ಗ್ರಾಮೀಣ ವಿಕಾಸ ಖಾದಿ ಗ್ರಾಮೋದ್ಯೋಗ ಭವನದ ಮಂಜೂರ್‌ ಅಹಮ್ಮದ್‌.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್ಟಿ)ಯಿಂದ ಫಾರ್ಮಲ್‌, ಸೆಮಿ ಫಾರ್ಮಲ್‌ ಪ್ಯಾಂಟು-ಶರ್ಟ್‌ಗಳು, ಲೆಹಂಗಾ-ಚೂಲಿ, ಚಿಂತಾಮಣಿ ಸೇರಿದಂತೆ ಸುತ್ತಲಿನ ರೇಷ್ಮೆ ಸೀರೆಗಳಿವೆ. ರೇಷ್ಮೆ ಉತ್ಪನ್ನಗಳ ಮೇಲೆ ಶೇ. 20ರಷ್ಟು ಹಾಗೂ ಇತರ ಉತ್ಪನ್ನಗಳ ಮೇಲೆ ಶೇ. 35ರಷ್ಟು ರಿಯಾಯ್ತಿ ಕಲ್ಪಿಸಲಾಗಿದೆ. 

ಒಂದೇ ಕಡೆ ಎಲ್ಲ ಅಧಿಕೃತವಾದ ದೇಶಿ ಉತ್ಪನ್ನಗಳು ಸಿಗುವ ಉತ್ತಮ ವೇದಿಕೆ ಇದಾಗಿದೆ. ಉತ್ಪಾದಕರಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದು ಒಳ್ಳೆಯ ಬೆಳವಣಿಗೆ. ಆದರೆ, ಶ್ರೀಗಂಧದ ಉತ್ಪನ್ನಗಳು ಕಡಿಮೆ ಇವೆ. ಹಾಗೂ ಸಾಕಷ್ಟು ಕರಕುಶಲಕರ್ಮಿಗಳು ನಮ್ಮಲ್ಲಿದ್ದಾರೆ. ಅವರಿಗೆ ಇನ್ನಷ್ಟು ವೇದಿಕೆ ಸಿಗಬೇಕಿತ್ತು.
-ಗೋಪಿನಾಥ್‌, ಅನಿವಾಸಿ ಭಾರತೀಯ (ಕೆನಡಾ).

ಸಾಕಷ್ಟು ಆಯ್ಕೆಗಳು ಇಲ್ಲಿವೆ. 20 ಸಾವಿರಕ್ಕೂ ಹೆಚ್ಚು ಮೊತ್ತದ ಉತ್ಪನ್ನಗಳನ್ನು ನಾನು ಖರೀದಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದ್ದರಿಂದ ಉತ್ಪಾದಕರಿಗೂ ಇದು ಒಳ್ಳೆಯ ವೇದಿಕೆ. ಇಂತಹ ಉತ್ಸವಗಳು ಆಗಾಗ್ಗೆ ನಡೆಯಬೇಕು.
-ಡಾ.ಶ್ರೀನಿವಾಸ್‌, ಬನಶಂಕರಿ ನಿವಾಸಿ.

ಮೊದಲ ದಿನ ಐದು ಸಾವಿರ ಜನ ಭೇಟಿ ನೀಡಿರುವ ಸಾಧ್ಯತೆ ಇದೆ. ಒಂದು ತಿಂಗಳಲ್ಲಿ 2 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದ್ದು, 40 ಕೋಟಿ ವಹಿವಾಟು ನಡೆಯಬಹುದು. ಸರ್ಕಾರಿ ರಜೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಫ್ಯಾಷನ್‌ ಶೋ ಕೂಡ ಏರ್ಪಡಿಸಲಾಗಿದೆ. 208 ಮಳಿಗೆಗಳನ್ನು ತೆರೆಯಲಾಗಿದೆ. 
-ಜಯವಿಭವ ಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ.

30 ಪಂಚೆ ಆರ್ಡರ್‌ ಮಾಡಿದ ಸಿಎಂ: ಖಾದಿ ಉತ್ಸವದಲ್ಲಿ ಮಳಿಗೆಗಳ ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಳಿಗೆಯೊಂದರಲ್ಲಿ ಭರ್ಜರಿ ವ್ಯಾಪಾರ ಮಾಡಿದರು. “ಹರಿಹರ ಚರಕ’ ಎಂಬ ಮಳಿಗೆಯಲ್ಲಿ 30 ಪಂಚೆಗಳಿಗೆ ಮುಖ್ಯಮಂತ್ರಿ ಆರ್ಡರ್‌ ಮಾಡಿದರು.

ಜತೆಗಿದ್ದ ಬೆಂಬಲಿಗರಿಗೆ ಮನೆಗೆ ಬಿಲ್‌ ಕಳಿಸುವಂತೆಯೂ ಹೇಳಿದರು. ತಲಾ ಒಂದು ಪಂಚೆಗೆ 585 ರೂ. ಆಗಲಿದ್ದು, ಸಿಎಂ ಸುಮಾರು 17,500 ರೂ. ವ್ಯಾಪಾರ ಮಾಡಿದರು. ನಂತರ “ಹರಿಹರ ಚರಕ’ದ ಎಂ.ಎಸ್‌. ರಮೇಶ್‌, ಸ್ವತಃ ಮುಖ್ಯಮಂತ್ರಿಗಳು ನನ್ನ ಅಂಗಡಿಯಲ್ಲಿ ವ್ಯಾಪಾರ ಮಾಡಿದ್ದು ಖುಷಿ ಆಯಿತು. 30 ಪಂಚೆ ಆರ್ಡರ್‌ ಮಾಡಿಹೋದರು ಎಂದು ಹೇಳಿದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

1st phase of Jharkhand assembly election today

Election: ಝಾರ್ಖಂಡ್‌ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ

If you want an American visa, you have to wait 16 months now!

US Visa: ಅಮೆರಿಕ ವೀಸಾ ಬೇಕಿದ್ದರೆ 16 ತಿಂಗಳು ಕಾಯುವುದು ಈಗ ಅನಿವಾರ್ಯ!

PM has not read Constitution, I guarantee this: Rahul

Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್‌

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ

ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ

8(1

Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ

Bengaluru: ನಗರದ ಐಬಿಸ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ; ಗ್ರಾಹಕರ ಆತಂಕ

Bengaluru: ನಗರದ ಐಬಿಸ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ; ಗ್ರಾಹಕರ ಆತಂಕ

Bengaluru: ಕುಡಿದು ಸ್ಕೂಲ್‌ ಬಸ್‌ ಓಡಿಸಿದ ಚಾಲಕರ ಲೈಸೆನ್ಸ್‌ ಅಮಾನತು

Bengaluru: ಕುಡಿದು ಸ್ಕೂಲ್‌ ಬಸ್‌ ಓಡಿಸಿದ ಚಾಲಕರ ಲೈಸೆನ್ಸ್‌ ಅಮಾನತು

Bengaluru: ಬಸ್‌ ಚೇಸ್‌ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ

Bengaluru: ಬಸ್‌ ಚೇಸ್‌ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Rain-12

Coastal Rain: ಕರಾವಳಿಯಲ್ಲಿ ಗುರಿ ಮೀರಿದ ಹಿಂಗಾರು

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

Karnataka: ಮೀಸಲು ಪ್ರಸ್ತಾಪ ಇಲ್ಲ: ರಾಜ್ಯ ಸರ್ಕಾರ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

1st phase of Jharkhand assembly election today

Election: ಝಾರ್ಖಂಡ್‌ ವಿಧಾನಸಭೆಗೆ ಇಂದು 1ನೇ ಹಂತದ ಚುನಾವಣೆ

If you want an American visa, you have to wait 16 months now!

US Visa: ಅಮೆರಿಕ ವೀಸಾ ಬೇಕಿದ್ದರೆ 16 ತಿಂಗಳು ಕಾಯುವುದು ಈಗ ಅನಿವಾರ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.