ಹಸು-ಹಂದಿಗಳಿಂದ ಲಕ್ಷಾಂತರ ಆದಾಯ
Team Udayavani, Jun 1, 2018, 11:55 AM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ತೊಂದರೆ ಕೊಡುವ ಬಿಡಾಡಿ ಹಸು-ಹಂದಿಗಳು ಬಿಬಿಎಂಪಿಗೆ ವಾರ್ಷಿಕ ಲಕ್ಷಾಂತರ ರೂ. ಆದಾಯ ತಂಡುಕೊಡುತ್ತಿವೆ. ನಗರದ ಅಲ್ಲಲ್ಲಿ ಸಂಚರಿಸುವ ಬಿಡಾಡಿ ಹಂದಿ ಹಾಗೂ ಹಸುಗಳು ಜನರನ್ನು ಇಲ್ಲದಂತೆ ಕಾಡುತ್ತವೆ.
ಆದರೆ, ಇವು ಪಾಲಿಕೆಗೆ ಆದಾಯ ತಂದುಕೊಡುತ್ತಿದೆ ಎಂಬ ಅಂಶ ಪಾಲಿಕೆಯ ಪಶುಪಾಲನಾ ವಿಭಾಗದ ಅಂಕಿ-ಅಂಶಗಳಿಂದ ತಿಳಿದಿದೆ. ಇತ್ತೀಚೆಗೆ ನಗರದಲ್ಲಿರುವ ಬಿಡಾಡಿ ಹಂದಿಗಳನ್ನು ಹಿಡಿಯಲು ಪಾಲಿಕೆಯಿಂದ ಟೆಂಡರ್ ನೀಡಲಾಗಿತ್ತು. ಟೆಂಡರ್ ಪಡೆದವರು ಬುಧವಾರ ಎಚ್ಎಸ್ಆರ್ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿ 20 ಹಂದಿಗಳನ್ನು ಸೆರೆ ಹಿಡಿದಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆ ಹಾಗೂ ರಸ್ತೆ ಬಿಡುವುದು ನಿಷಿದ್ಧ. ಹೀಗಾಗಿ, ಟೆಂಡರ್ ಪಡೆದವರು ಹಂದಿಗಳನ್ನು ಹಿಡಿದರೂ ಅದನ್ನು ಮಾಲೀಕರು ಪ್ರಶ್ನಿಸುವಂತಿಲ್ಲ. ಹೀಗಾಗಿ, ಟೆಂಡರ್ ಪಡೆದವರು ರಸ್ತೆಗಳನ್ನು ಸೆರೆ ಹಿಡಿದ ಹಂದಿಗಳನ್ನು ಮಾಂಸಕ್ಕಾಗಿ ಮಾರಾಟ ಮಾಡಿಕೊಳ್ಳಲಿದ್ದು ಪಾಲಿಕೆಗೆ ಪ್ರತಿ ಕೆಜಿಗೆ 70 ರೂ. ನೀಡಲಿದ್ದಾರೆ. ಇದರಿಂದ ಪಾಲಿಕೆಗೆ ಒಂದೇ ದಿನದಲ್ಲಿ 20,300 ರೂ. ಆದಾಯ ಬಂದಿದೆ.
ಇನ್ನು ಪಶುಪಾಲನಾ ವಿಭಾಗದ ಸಿಬ್ಬಂದಿ ತಿಂಗಳಿಗೆ 40-50 ಬಿಡಾಡಿ ಹಸುಗಳನ್ನು ಹಿಡಿಯುತ್ತಿದ್ದು, ಇದರಿಂದ ವಾರ್ಷಿಕ ಸರಾಸರಿ 3 ಲಕ್ಷ ರೂ. ಹಣ ಪಾಲಿಕೆಗೆ ಸಂದಾಯವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸಂಚರಿಸುವ ಬೀಡಾಡಿ ಹಸುಗಳನ್ನು ಬಿಡಿಸಿಕೊಳ್ಳಲು ಬರುವ ಮಾಲೀಕರಿಗೆ ಪಾಲಿಕೆಯಿಂದ ಪ್ರತಿ ಹಸುವಿಗೆ 600 ರೂ. ದಂಡ ಹಾಕಲಾಗುತ್ತದೆ ಎಂದು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.