ಕೈಗೆ ಲಕ್ಷಾಂತರ ರೂ.ವಾಚು,ಧರಿಸೋದು ಚಿನ್ನ ಲೇಪಿತ ಸೂಟು
Team Udayavani, Nov 12, 2018, 6:00 AM IST
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಚಿನ್ನಾಭರಣ ಧರಿಸುವುದು ಬಿಡಿ, ಅದರ ಮೇಲಿದ್ದ ವ್ಯಾಮೋಹ ಎಂತವರನ್ನಾದರೂ ನಿಬ್ಬೆರಗು ಮಾಡುವಂತಿದೆ.
ಬಳ್ಳಾರಿಯಲ್ಲಿ ಸುಮಾರು 5 ಎಕರೆ ಜಾಗದಲ್ಲಿ ಬಹುದೊಡ್ಡ ಬಂಗಲೆ ಕಟ್ಟಿಕೊಂಡಿರುವ ರೆಡ್ಡಿ, ಅದರ ಸುತ್ತಲು 40 ಅಡಿ ಎತ್ತರದ ಗೋಡೆ ಕಟ್ಟಿದ್ದಾರೆ. ಮನೆಯೊಳಗೆ ಹೋಗಬೇಕಾದರೆ 8ರಿಂದ 10 ಕಡೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
ಬಂಗಲೆಯೊಳಗೆ ಡಿಜಿಟಲ್ ಸ್ಕ್ರೀನ್ ಹೊಂದಿರುವ ಮಿನಿ ಥಿಯೇಟರ್, ಪ್ರತಿ ಕೊಠಡಿಗೂ ಹವಾನಿಯಂತ್ರಣ ವ್ಯವಸ್ಥೆಯ ಜತೆಗೆ ಅತ್ಯಾಧುನಿಕವಾದ ಎಲ್ಲ ಸೌಲಭ್ಯವನ್ನು ಅಲ್ಲಿ ಅಳವಡಿಸಲಾಗಿದೆ.
ಮನೆಯೊಳಗೆ ಮಿನಿ ಸಭಾಂಗಣವಿದೆ. ಇದೆಲ್ಲದಕ್ಕೂ ಮಿಗಿಲಾಗಿ ತಮ್ಮ ಖಾಸಗಿ ಕೊಠಡಿಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಲಂಕರಿಸಿಕೊಂಡಿದ್ದರು.
ಸಿಂಹಾಸನದ ಮಾದರಿಯಲ್ಲಿ 2.50 ಕೋಟಿ ರೂ.ಗಳಿಗಿಂತಲೂ ಅಧಿಕ ವೆಚ್ಚದಲ್ಲಿ ಚಿನ್ನದ ಖುರ್ಚಿ ಮಾಡಿಕೊಂಡು, ಅದರ ಮೇಲೆ ಸದಾ ಕುಳಿತುಕೊಳ್ಳುತ್ತಿದ್ದರು. ಊಟ, ತಿಂಡಿಗೆ ಚಿನ್ನ ಮತ್ತು ಬೆಳ್ಳಿಯ ತಟ್ಟೆಯನ್ನೇ ಬಳಸುತ್ತಿದ್ದರು. ನೀರು ಕುಡಿಯುವ ಲೋಟವೂ ಬೆಳ್ಳಿಯದ್ದೆ ಆಗಿದ್ದವು. ಎರಡು ಹೆಲಿಕ್ಯಾಪ್ಟರ್ ಹಾಗೂ ಮಿನಿ ಸಂಚಾರಿ ಸ್ಟಾರ್ ಹೋಟೆಲ್‌ನಂತಿದ್ದ ಒಂದು ಬಸ್ ಹೊಂದಿದ್ದರು. ಸಚಿವರಾಗಿದ್ದ ಸಂದರ್ಭದಲ್ಲಿ ಅಧಿವೇಶನ ಹಾಗೂ ಸಚಿವ ಸಂಪುಟ ಸಭೆಗೆ ಬಳ್ಳಾರಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲೇ ಬಂದು ಹೋಗುತ್ತಿದ್ದರು. ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಮಧ್ಯಾಹ್ನದ ಊಟಕ್ಕೆ ಹೆಲಿಕಾಪ್ಟರ್‌ನಲ್ಲೇ ಹೋಗಿ ಬರುತ್ತಿದ್ದರಂತೆ.
ಗಾಲಿ ಜನಾರ್ದನ ರೆಡ್ಡಿಗೆ ಕಾರುಗಳ ಅತಿಯಾದ ವ್ಯಾಮೋಹವಿತ್ತು. ವಿಶ್ವದ ಪ್ರತಿಷ್ಠಿತ ಸಂಸ್ಥೆಗಳ ಎಲ್ಲ ಬಗೆಯ ಐಷಾರಾಮಿ ಕಾರುಗಳು ಅವರ ಬಳಿ ಇದ್ದವು. ನಿತ್ಯದ ಪ್ರವಾಸಕ್ಕೆ ಕಪ್ಪು ಬಣ್ಣದ ಸ್ಕಾರ್ಪಿಯೋವನ್ನು ಹೆಚ್ಚಾಗಿ ಬಳಸುತ್ತಿದ್ದರು. ಒಂದೊಂದು ಕಾರನ್ನು ನೋಡಿಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿದ್ದರು.
ಇಷ್ಟು ಮಾತ್ರವಲ್ಲ, ಲಕ್ಷಾಂತರ ಮೌಲ್ಯದ ಕೈಗಡಿಯಾರ, ಚಿನ್ನ ಲೇಪಿತ ಸೂಟುಗಳನ್ನು ಧರಿಸುವುದು ಅವರ ಐಷಾರಾಮಿ ಜೀವನದ ಭಾಗವಾಗಿತ್ತು.
ತಿರುಮಲ ತಿರುಪತಿ ದೇವಸ್ಥಾನಕ್ಕೆ ಕೋಟ್ಯಾಂತರ ರೂ. ಮೌಲ್ಯದ ಮೂರು ಚಿನ್ನದ ಕಿರೀಟ ನೀಡಿದ್ದಾರೆ. ಮಗಳ ಮದುವೆಗೆ ಸುಮಾರು 500 ಕೋಟಿ ರೂ.ಖರ್ಚು ಮಾಡಿದ್ದರು. ಮದುವೆ ಆಮಂತ್ರಣ ಪತ್ರಿಕೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದರೆಂದು ಮೂಲಗಳು ತಿಳಿಸಿವೆ. ಹೀಗೆ ಮನೆಯೊಳಗೆ ರಾಜನಂತೆ ವಿಲಾಸಿ ಜೀವನ ನಡೆಸುತ್ತಿದ್ದ ಗಾಲಿ ಜನಾರ್ದನ ರೆಡ್ಡಿ ಮತ್ತೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚಿನ್ನ, ವಜ್ರಾಭರಣದ ವಿವರ: ರೆಡ್ಡಿ ತಮ್ಮ ಮನೆಗೆ ಅಲಂಕಾರಕ್ಕಾಗಿ ಚಿನ್ನ, ಬೆಳ್ಳಿ, ಮುತ್ತು ಹಾಗೂ ಪ್ಲಾಟಿನಂ ಸಹಿತವಾಗಿ ನವರತ್ನದ ಹರಳುಗಳನ್ನು ಬಳಸಿದ್ದರು. ಮನೆಯ ಹೂವಿನ ಕುಂಡ ಹಾಗೂ ಸ್ಟಾಂಡ್‌ಗಳನ್ನು ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ್ದರು. ಅವರ ಪತ್ನಿಯ ಬಳಿ ಚಿನ್ನ ಹಾಗೂ ವಜ್ರದ ಬಳೆ, ಸರ, ಕಿವಿಯೋಲೆ, ಮೂಗುತಿ, ನೆಕ್ಲೇಸ್ ಹೀಗೆ ಹತ್ತಾರು ಬಗೆಯ ಚಿನ್ನ, ವಜ್ರದ ಆಭರಣಗಳಿದ್ದವು. ಹೇರ್‌ಪಿನ್, ಐಸ್‌ಕ್ರೀಂ ಸ್ಪೂನ್, ತಟ್ಟೆ ಎಲ್ಲವೂ ಚಿನ್ನ, ಬೆಳ್ಳಿಯದ್ದಾಗಿದ್ದವು. ಜತೆಗೆ ಬೆಳ್ಳಿಯಿಂದ ಮಾಡಿದ್ದ ಮೊಬೈಲ್ ಫೋನ್ ಕೂಡ ಹೊಂದಿದ್ದರು.
ರೆಡ್ಡಿ, ಪತ್ನಿ ಹಾಗೂ ಅವರ ಮಕ್ಕಳ ಹೆಸರಿನಲ್ಲಿ ಸುಮಾರು 28.48 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಇದ್ದವು. ರೆಡ್ಡಿ ನಿತ್ಯ ಬಳಕೆಗೆ ಚಿನ್ನದ ಬೆಲ್ಟ್ ಬಳಸುತ್ತಿದ್ದು, ಅದರ ಮೌಲ್ಯ 13.15 ಲಕ್ಷವಾಗಿತ್ತು.2.58 ಕೋಟಿ ಮೌಲ್ಯದ ಚಿನ್ನದ ವಿಗ್ರಹ ಹೊಂದಿದ್ದರು. ಅವರ ಹೆಂಡತಿ ಬಳಿ 4.82 ಲಕ್ಷ ಮೌಲ್ಯದ ವಜ್ರದ ಪಟ್ಟಿ ಇತ್ತು ಎಂಬ ವಿವರಗಳು 2010-11ರಲ್ಲಿ ಲೋಕಾಯುಕ್ತಕ್ಕೆ ನೀಡಿದ ವರದಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.