ಬೆಂಗಳೂರಿನಲ್ಲಿ ಕೋವಿಡ್ 19 ಸೋಂಕಿನ ಸಮರ್ಥ ನಿರ್ವಹಣೆ: ವಿ.ಸೋಮಣ್ಣ ಸುದ್ದಿಗೋಷ್ಟಿ
Team Udayavani, Jul 16, 2020, 11:28 PM IST
ಬೆಂಗಳೂರು: ವಸತಿ ಸಚಿವರಾಗಿರುವ ಹಾಗೂ ಬೆಂಗಳೂರು ಪೂರ್ವ ವಲಯದ ಕೋವಿಡ್-19 ಉಸ್ತುವಾರಿ ಸಚಿವರೂ ಆಗಿರುವ ವಿ. ಸೋಮಣ್ಣ ಅವರು ಕೋವಿಡ್ 19 ನಿಭಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಿಚಾರಗಳು ಹೀಗಿವೆ:
– ಪೂರ್ವ ವಲಯದ 6 ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಸಭೆ ನಡೆಸಿದ್ದೇವೆ.
– ಗೋವಿಂದರಾಜನಗರದಲ್ಲಿ 150 ಬೆಡ್‌ಗಳ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಮಾಡಿದ್ದೇವೆ.
– ಡಾ.ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆ 500 ಬೆಡ್‌ಗಳ ಆಸ್ಪತ್ರೆ. 400 ಬೆಡ್‌ಗಳನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
– ಪೂರ್ತಿ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ನಾಳೆ ಮಧ್ಯಾಹ್ನದೊಳಗೆ ಅದನ್ನು ಕೋವಿಡ್-19 ಆಸ್ಪತ್ರೆ ಮಾಡುತ್ತೇವೆ.
– ಇಲ್ಲಿ 10 ವೆಂಟಿಲೇಟರ್ ವ್ಯವಸ್ಥೆಯೂ ಇರಲಿದೆ.
– ಕೋವಿಡ್ ಮತ್ತು ನಾನ್ ಕೋವಿಡ್ 150 ಬೆಡ್‌ಗಳನ್ನು ಮದುವೆ ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಒಂದು ಕ್ಷೇತ್ರಕ್ಕೆ ಪ್ರತಿ ವಾರ್ಡ್‌ಗಳಲ್ಲಿ 2 ಅಂಬ್ಯುಲೆನ್ಸ್, 10 ಟಿಟಿ ವಾಹನಗಳು ಹಾಗೂ 2 ಮೃತದೇಹ ಸಾಗಿಸುವ ವಾಹನ ನೀಡಿದ್ದೇವೆ.
– ಶಿವಾಜಿನಗರದಲ್ಲೂ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದ್ದೇನೆ.
– ಶಾಂತಿನಗರದ ಕೋವಿಡ್ ಕೇರ್ ಸೆಂಟರ್, ಫೀವರ್ ಸೆಂಟರ್ ಉದ್ಘಾಟನೆ ಮಾಡಿದ್ದೇವೆ.
– ಶಾಂತಿನಗರದಲ್ಲಿ 200 ಬೆಡ್‌ಗಳ ಆಸ್ಪತ್ರೆಯನ್ನು ಹೊಟೇಲ್‌ನಲ್ಲಿ ಮಾಡಲು ನಿರ್ಧರಿಸಿದ್ದೇವೆ.
– 1438 ಬೂತ್‌ಗಳು ನನ್ನ ಉಸ್ತುವಾರಿಗೆ ಬರುವ 6 ಕ್ಷೇತ್ರಗಳಲ್ಲಿ ಬರುತ್ತದೆ. ಈ ಎಲ್ಲಾ ಬೂತ್‌ಗಳನ್ನು ಕ್ರಿಯಾಶೀಲ ಮಾಡಿದ್ದೇವೆ.
– ಬೆಂಗಳೂರು ಪೂರ್ವ ವಲಯದಲ್ಲಿ 6 ಕಂಟ್ರೋಲ್ ರೂಂ ಮಾಡಿದ್ದೇವೆ.
– ಹೋಂ ಕ್ವಾರೆಂಟೈನ್‌ಗೆ ಒಳಗಾಗುವವರಿಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ.
– ಶಿವಾಜಿನಗರ, ಸರ್ವಜ್ಞನಗರ, ಹೆಬ್ಬಾಳ, ಶಾಂತಿನಗರ, ಪುಲಿಕೇಶಿನಗರ ಎಲ್ಲಾ ಕಡೆಗಳಲ್ಲೂ ವ್ಯವಸ್ಥೆ ಮಾಡಲಾಗಿದೆ.
– ನಾಳೆ ಬೆಳಿಗ್ಗೆ 11 ಘಂಟೆಗೆ ಎಲ್ಲಾ ಸಚಿವರನ್ನು ಸಭೆ ಕರೆದಿದ್ದಾರೆ. ನಗರದಲ್ಲಿನ ಎಲ್ಲಾ ಮಂತ್ರಿಗಳು ಶ್ರಮ ವಹಿಸಿದ್ದಾರೆ.
– ಬೆಂಗಳೂರು ಪೂರ್ವ ವಲಯದ ಕಂಟೈನ್‌ಮೆಂಟ್ ಜೋನ್‌ಗಳ ಮನೆಗಳಿಗೆ ರೇಷನ್ ಕಿಟ್ ಕೊಟ್ಟಿದ್ದೇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.