ಇತಿಹಾಸ ಕಟ್ಟಿಕೊಡುವ ಮಿತ್ತಬೈಲು ಯಮುನಕ್ಕ

Team Udayavani, Feb 12, 2018, 1:14 PM IST

ithihasa.jpg

ಬೆಂಗಳೂರು: ಮಾತೃಮೂಲ ವ್ಯವಸ್ಥೆಯಲ್ಲಿ ಸ್ತ್ರೀಯರಿಂದ ಆಗುತ್ತಿದ್ದ ಸ್ತ್ರೀ ಶೋಷಣೆ ಮತ್ತು ತನ್ನ ಜನಾಂಗದಲ್ಲೇ ನಡೆಯುತ್ತಿದ್ದ ಎದೆ ನಡುಗಿಸುವ ಕ್ರೌರ್ಯವನ್ನು ಡಿ.ಕೆ.ಚೌಟ ಅವರು “ಮಿತ್ತಬೈಲು ಯಮುನಕ್ಕ’ ಕಾದಂಬರಿಯಲ್ಲಿ ದಿಟ್ಟವಾಗಿ ಬರೆದಿದ್ದಾರೆ ಎಂದು ವಿಮರ್ಶಕ ಪ್ರೊ.ಸಿ.ಎನ್‌.ರಾಮಚಂದ್ರನ್‌ ವಿಶ್ಲೇಷಿಸಿದರು.

ರಂಗಚೇತನ ಸಂಸ್ಕೃತಿ ಟ್ರಸ್ಟ್‌, ಆಶಯ ಪಬ್ಲಿಕೇಷನ್ಸ್‌ ಮತ್ತು ಚೌಟ ಟ್ರಸ್ಟ್‌ ವತಿಯಿಂದ ಭಾನುವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಡಿ.ಕೆ.ಚೌಟರ ತುಳು ಕಾದಂಬರಿ ಮಿತ್ತಬೈಲು ಯಮುನಕ್ಕ ಇಂಗ್ಲಿಷ್‌ ಅನುವಾದ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸಾಹಿತಿಗಳು ತಮ್ಮ ಜನಾಂಗದ ಬಗ್ಗೆ ಬರೆಯುವಾಗ ಪ್ರಜ್ಞಾಪೂರ್ವಕವಾಗಿ ಅಥವಾ ತನ್ನಿಂದತಾನಾಗಿಯೇ ಜನಾಂಗವನ್ನು ವೈಭವೀಕರಿಸುವುದು ಸಹಜವಾಗಿರುತ್ತದೆ. ಆದರೆ, ಮಿತ್ತಬೈಲು ಯಮುನಕ್ಕ ಕಾದಂಬರಿಯಲ್ಲಿ ಚೌಟರು, ವ್ಯವಸ್ಥೆಯನ್ನು ವಸ್ತುನಿಷ್ಠವಾಗಿ ಕಟ್ಟಿಕೊಟ್ಟಿದ್ದಾರೆ. ಬಂಟರ ಸಮುದಾಯದಲ್ಲಿದ್ದ ಸಾಮಾಜಿಕ ವ್ಯವಸ್ಥೆಯಾಗಿದ್ದ ಗುತ್ತಿನ ಯಾಜಮಾನಿಕೆ,

ಪಾಳೇಗಾರಿಕೆಯನ್ನು ದೂರದಿಂದ ನೋಡಿ, ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಎದೆ ನಡುಗಿಸುವ ದರ್ಪ, ಕ್ರೌರ್ಯದ ಬಗ್ಗೆಯೂ ಯಾವುದೇ ಹಿಂಜರಿಕೆ ಇಲ್ಲದೇ ಬರೆದಿದ್ದಾರೆ. ತುಳುನಾಡಿನ ಪರಿಚಯ, ಮಾತೃಮೂಲ ವ್ಯವಸ್ಥೆಯಲ್ಲಿ ಮಹಿಳೆಯಿಂದ ಮಹಿಳೆಗೆ ಆಗುತ್ತಿದ್ದ ಶೋಷಣೆಯನ್ನು ಉದಾರಹಣೆ ಸಹಿತವಾಗಿ ಉಲ್ಲೇಖೀಸಿರುವುದನ್ನು ವಿವರಿಸಿದರು.

ರೋಚಕ ಕಥೆಯನ್ನು ಅತ್ಯಂತ ರೋಚಕವಾಗಿ, ಒಂದು ಕಾಲಘಟ್ಟದ ಚರಿತ್ರೆ, ಒಂದು ಜನಾಂಗೀಯ ಬದುಕು ಮತ್ತು ಅಧ್ಯಯನ ಹೀಗಿ ಈ ಕಾದಂಬರಿ ಅನೇಕ ಆಯಾಮವನ್ನು ಹೊಂದಿದೆ. ಯಾವ ಚರಿತ್ರೆಯನ್ನು ಯಾವ ಕಾಲಘಟ್ಟದಲ್ಲಿಯೂ ಸರಳ ರೇಖಾಚಿತ್ರದಂತೆ ಬರೆಯಲು ಸಾಧ್ಯವಿಲ್ಲ ಎಂಬುದನ್ನು ಈ ಕಾದಂಬರಿ ಮತ್ತೇ ಮತ್ತೇ ಪುಷ್ಠಿàಕರಿಸುತ್ತದೆ. ಚರಿತ್ರೆಯ ಸಂದಿಗ್ಧತೆಗಳನ್ನು ಅದ್ಭುತವಾಗಿ ಹಿಡಿದಿಟ್ಟಿದ್ದಾರೆ ಎಂದು ಬಣ್ಣಿಸಿದರು.

ತುಳು ಭಾಷೆಯಲ್ಲಿ ಸಮರ್ಥವಾದ ಶಕ್ತಿಯುತ ಸಾಹಿತ್ಯ ಅಥವಾ ಕಾದಂಬರಿ ಇದೆ ಎನ್ನುವುದು ಇದು ತೋರಿಸಿಕೊಡುತ್ತದೆ. 2005ರಲ್ಲಿ ತುಳುವಿನಲ್ಲಿ ರಚನೆಯಾಗಿದ್ದ ಈ ಕಾದಂಬರಿ, 2008ರಲ್ಲಿ ಕನ್ನಡಕ್ಕೆ ಅನುವಾದಗೊಂಡು ಈಗ ಇಂಗ್ಲಿಷ್‌ಗೆ ತರ್ಜುಮೆ ಗೊಂಡಿದೆ. ತುಳುವಿನಲ್ಲಿರುವ ಮೂಲ ಕೃತಿಯ ಆಶಯಕ್ಕೆ ಯಾವುದೇ ಧಕ್ಕೆಯಾಗದಂತೆ ಮೂಲ ಓದುಗರಿಗೆ ಸಿಗುವಷ್ಟೇ ಸತ್ವವನ್ನು ಭಾಷಾಂತರ ಕೃತಿಯಲ್ಲೂ ನೀಡಿದ್ದಾರೆ ಎಂದು ಕೃತಿಯ ವೈಶಿಷ್ಟéವನ್ನು ತಿಳಿಸಿದರು.

ಕಾದಂಬರಿಕಾರ ಡಾ.ಡಿ.ಕೆ.ಚೌಟ, ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್‌, ಕನ್ನಡ ಮತ್ತು ತುಳು ವಿದ್ವಾಂಸ ಪ್ರೊ.ಬಿ.ಎ.ವಿವೇಕ್‌ ರೈ, ಕೃತಿಯ ಅನುವಾದಕರಾದ ಪ್ರೊ.ಬಿ.ಸುರೇಂದ್ರ ರಾವ್‌, ಪ್ರೊ.ಕೆ.ಚಿನ್ನಪ್ಪಗೌಡ, ರಂಗಚೇತನ ಸಂಸ್ಕೃತಿ ಟ್ರಸ್ಟ್‌ನ ನಂಜುಂಡಸ್ವಾಮಿ ತೊಟ್ಟವಾಡಿ ಮೊದಲಾದವರು ಉಪಸ್ಥಿತರಿದ್ದರು.

ತುಳು ಭಾಷೆಯನ್ನು ಇನ್ನೊಬ್ಬರಿಗೆ ತಿಳಿಸುವ ಉದ್ದೇಶದಿಂದ ಇಂಗ್ಲಿಷ್‌ ಅನುವಾದ ಕಾರ್ಯ ಮಾಡಿದ್ದೇವೆ. ಇದು ತುಳು ಭಾಷೆಯ ಅತ್ಯಂತ ಪವರ್‌ಫ‌ುಲ್‌ ಕಾದಂಬರಿ. ಇಂತಹ ಕಾದಂಬರಿಗಳ ಸಂಖ್ಯೆ ಬಹಳ ಕಡಿಮೆ.
-ಪ್ರೊ.ಬಿ.ಸುರೇಂದ್ರ ರಾವ್‌, ಅನುವಾದಕ

ತುಳು ಭಾಷೆ ಮತ್ತು ಸಾಹಿತ್ಯದ ಉಳಿವಿಗಾಗಿ 114 ತುಳು ಕವನಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದೇವೆ. 60 ಕಥೆಗಳು ಇಂಗ್ಲಿಷ್‌ಗೆ ಅನುವಾದ ಆಗುತ್ತಿವೆ. ತುಳು ಅತ್ಯಂತ ಪುರಾತನ ಭಾಷೆಯಾದರೂ, ಸಾಹಿತ್ಯ ರೂಪದಲ್ಲಿರುವುದು ಕಡಿಮೆ.
-ಪ್ರೊ.ಕೆ.ಚಿನ್ನಪ್ಪಗೌಡ, ಅನುವಾದಕ

ಶೇ.75ಕ್ಕೂ ಹೆಚ್ಚು ತುಳು ಭಾಷಿಕರು ಇಂಗ್ಲಿಷ್‌ ಬಲ್ಲರಾಗಿದ್ದಾರೆ. ಅಂಥವರಿಗೆ ಸುಲಭವಾಗಿ ತುಳುನಾಡಿನ ಇತಿಹಾಸ ತಿಳಿಸುವ ಉದ್ದೇಶದಿಂದ ಇಂಗ್ಲಿಷ್‌ಗೆ ಅನುವಾದ ಮಾಡಲಾಗಿದೆ. ಯುವಪೀಳಿಗೆ ಈ ಕಾದಂಬರಿ ಓದಿದರೆ ತುಳುನಾಡಿ ಇತಿಹಾಸದ ಅರಿವಾಗುತ್ತದೆ.
-ಡಿ.ಕೆ.ಚೌಟ, ಕಾದಂಬರಿಕಾರ

ಟಾಪ್ ನ್ಯೂಸ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

6

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.