ಮೊಬೈಲ್‌ ಕ್ಯಾಂಟೀನ್‌ ಸಂಚಾರ

Team Udayavani, Jan 25, 2018, 9:39 AM IST

indira-2.jpg

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳಾವಕಾಶ ದೊರೆಯದ ವಾರ್ಡ್‌ಗಳಿಗೆ ಆಹಾರ ಪೂರೈಸಲು “ಮೊಬೈಲ್‌ ಇಂದಿರಾ ಕ್ಯಾಂಟೀನ್‌’ಗಳು ಸಜ್ಜಾಗಿದ್ದು, ಜ.26ರಿಂದ ನಗರದ ವಿವಿಧೆಡೆ ಆಹಾರ ವಿತರಿಸುವ ಕಾರ್ಯ ಆರಂಭಿಸಲಿವೆ. 

ಈಗಾಗಲೇ 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗಿದೆ. ಆದರೆ, ಕೇಂದ್ರ ಭಾಗದ 24 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗೆ ಅಗತ್ಯ ವಿಸ್ತೀರ್ಣದ ಸರ್ಕಾರಿ ಜಾಗ ಸಿಕ್ಕಿಲ್ಲ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು “ಮೊಬೈಲ್‌ ಇಂದಿರಾ ಕ್ಯಾಂಟೀನ್‌’ಗಳ ಮೂಲಕ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ವಿತರಿಸಲು ಮುಂದಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮವೆನಿಸಿದ 10 ಮೊಬೈಲ್‌ ಕ್ಯಾಂಟೀನ್‌ಗಳ ಅಧ್ಯಯನ ನಡೆಸಿರುವ ಅಧಿಕಾರಿಗಳು ಅವುಗಳಲ್ಲಿನ ಪ್ರಮುಖ ಅಂಶಗಳನ್ನು ಆಧರಿಸಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ವಾಹನ ವಿನ್ಯಾಸಗೊಳಿಸಿದ್ದಾರೆ. ಇದರಲ್ಲಿ ಹಲವು ವ್ಯವಸ್ಥೆ ಕಲ್ಪಿಸಲಾಗಿದೆ.

ಸಿಸಿಟಿವಿ ಮತ್ತು ಜಿಪಿಎಸ್‌ ಅಳವಡಿಕೆ: ಭದ್ರತೆ ಹಾಗೂ ಸುರಕ್ಷತಾ ದೃಷ್ಟಿಯಿಂದ ವಾಹನದಲ್ಲಿ ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಹನದ ಚಲನವಲನ ನಿಯಂತ್ರಿಸಲು ಪ್ರತಿ ವಾಹನದಲ್ಲಿ ಜಿಪಿಎಸ್‌ ಅಳವಡಿಸಲಾಗಿದೆ. ನಿಗದಿಪಡಿಸಿರುವ ಮಾರ್ಗದಲ್ಲಿಯೇ ವಾಹನಗಳು ಸಂಚರಿಸುತ್ತಿವೆಯೇ ಎಂಬುದನ್ನು ಅಧಿಕಾರಿಗಳು ಗಮನಿಸಲಿದ್ದಾರೆ.

 ಸೌರಶಕ್ತಿ ಆಧಾರಿತ ಲೈಟ್ಸ್‌: ಮೊಬೈಲ್‌ ಇಂದಿರಾ ಕ್ಯಾಂಟೀನ್‌ ವಾಹನಗಳ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಅಳವಡಿಸಿರುವ ಲೈಟ್‌ಗಳು ಸೌರಶಕ್ತಿಯಿಂದ ಉರಿಯಲಿವೆ. ಅದಕ್ಕಾಗಿಯೇ ವಾಹನದ ಮೇಲ್ಭಾಗದಲ್ಲಿ ಸೌರಶಕ್ತಿ ಪ್ಯಾನಲ್‌ಗ‌ಳನ್ನು ಅಳವಡಿಸಲಾಗಿದ್ದು, ವಾಹನದಲ್ಲಿರುವ ಸಿಸಿಟಿವಿ ಕ್ಯಾಮರಾ, ಟಿಕ್ಕರ್‌ ಬೋರ್ಡ್‌ ಹಾಗೂ ಪಿಒಎಸ್‌ ಯಂತ್ರಗಳು ಸಹ ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುತ್ತವೆ.

ಪ್ರತಿ ವಾಹನಕ್ಕೆ ಮಾರ್ಷಲ್‌ ನೇಮಕ: ಪ್ರತಿ ವಾಹನಕ್ಕೆ ಪಾಲಿಕೆಯಿಂದ ಒಬ್ಬರು ಮಾರ್ಷಲ್‌ ನೇಮಿಸಲಾಗಿದೆ. ಮಾರ್ಷಲ್‌ಗ‌ಳು ಕ್ಯಾಂಟೀನ್‌ ನಲ್ಲಿನ ಸ್ವತ್ಛತೆ, ನೈರ್ಮಲ್ಯದ ಜತೆಗೆ, ಆಹಾರ ಪಡೆಯಲು ಜನರು ಸಾಲಿನಲ್ಲಿ ಬರುವಂತೆ ಹಾಗೂ ಕ್ಯಾಂಟೀನ್‌ ಬಳಿ ಯಾವುದೇ ರೀತಿಯ ಅಹಿತಕರ ಘಟನೆ ಗಳು ನಡೆಯದಂತೆ ನೋಡಿಕೊಳ್ಳಲಿದ್ದಾರೆ.

ಮಳೆ, ಬಿಸಿಲಿನ ಚಿಂತೆಯಿಲ್ಲ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ವಾಹನದ ಎರಡು ಕಡೆಗಳಲ್ಲಿ ವಿಸ್ತರಿಸಬಹುದಾದ ಮೇಲ್ಛಾವಣಿ (ಕ್ಯಾನೋಪಿ) ಅಳವಡಿಸಲಾಗಿದೆ. ಅದರಂತೆ ಪ್ರತಿ ಪಾರ್ಶ್ವದಲ್ಲಿಯೂ ಮೇಲ್ಛಾವಣಿಗಳು 4 ಅಡಿ ವಿಸ್ತರಿಸಬಹುದಾಗಿದ್ದು, ಇದರಿಂದಾಗಿ ಜನರು ಬಿಸಿಲು ಮತ್ತು ಮಳೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. 

ಈ ಹಿಂದೆ ಸ್ಥಳ ದೊರೆಯಲಿಲ್ಲ ಎಂದು ಕ್ಯಾಂಟೀನ್‌ನಿಂದ ವಂಚಿತರಾದವರಿಗೆ ಸೌಲಭ ವಾಹನಗಳು ನಿರ್ದಿಷ್ಟ ಮಾರ್ಗದಲ್ಲೇ ಸಂಚರಿಸುತ್ತಿವೆ ಎಂದು ತಿಳಿಯಲು ಜಿಪಿಎಸ್‌
 
ಕ್ಯಾಂಟೀನ್‌ ವಿಶೇಷತೆಗಳು
ಆಹಾರವನ್ನು ತ್ವರಿತವಾಗಿ ವಿತರಿಸಲು ಪ್ರತ್ಯೇಕ ನಗದು ಮತ್ತು ಆಹಾರದ ಕೌಂಟರ್‌. 
ಸ್ವತ್ಛ ಹಾಗೂ ಬಳಸಿದ ಪ್ಲೇಟ್‌ಗಳನ್ನು ಇರಿಸಲು ಪ್ರತ್ಯೇಕ ರ್ಯಾಕ್‌.
ಅಂತರ್ನಿರ್ಮಿತ ಪ್ರತ್ಯೇಕ 250 ಲೀ. ಕುಡಿಯುವ ನೀರಿನ, 350 ಲೀ. ಕೈತೊಳೆಯುವ ನೀರು ಮತ್ತು ತ್ಯಾಜ್ಯ ನೀರು ಶೇಖರಿಸಲು 500 ಲೀ.ಟ್ಯಾಂಕ್‌.
ಆಹಾರದ ಪಾತ್ರೆಗಳನ್ನು ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಮಾಡಲು ಸೈಡ್‌ ಪೋರ್ಟ್‌.
ಎಸ್‌ಎಸ್‌-304 ಆಹಾರ ದರ್ಜೆಯ ಒಳಾಂಗಣ.
ಎಲೆಕ್ಟ್ರಾನಿಕಲ್‌ ಟಿಕ್ಕರ್‌ ಬೋರ್ಡ್‌ ಮತ್ತು ಪಿಒಎಸ್‌ ಯಂತ್ರಗಳು.
ಹೆಚ್ಚುವರಿಯಾಗಿ 6 ಊಟದ ಟೇಬಲ್‌ಗ‌ಳು.
ಬಳಸಿದ ಪ್ಲೇಟ್‌ಗಳು ಮತ್ತು ತ್ಯಾಜ್ಯ ಆಹಾರ ಸಂಗ್ರಹಣೆಗೆ ಕ್ರೇಟ್‌ಗಳನ್ನೊಳಗೊಂಡ ಪ್ರತ್ಯೇಕ ಪ್ರದೇಶ.
„ಒಳಗೆ, ಹೊರೆಗೆ 4 ಸಿಸಿಟಿವಿ ಕ್ಯಾಮರಾ ಅಳವಡಿಕ.

ಸೇವೆ ದೊರೆವ ಸ್ಥಳಗಳು
ಪಶ್ಚಿಮ ವಲಯ
ಕಾಡು ಮಲ್ಲೇಶ್ವರ, ಮೆಜೆಸ್ಟಿಕ್‌, ಓಕಳಿಪುರ, ದಯಾನಂದನಗರ, ಬಸವೇಶ್ವರನಗರ, ಚಾಮರಾಜಪೇಟೆ,
ಶ್ರೀರಾಮಮಂದಿರ

ದಕ್ಷಿಣ ವಲಯ
ಶ್ರೀನಗರ, ಗಿರಿನಗರ, ಮಡಿವಾಳ, ಜಯ ನಗರ, ಜೆ.ಪಿ.ನಗರ, ಕೆಂಪಾಪುರ ಅಗ್ರಹಾರ, ಬಾಪೂಜಿನಗರ, ಯಡಿಯೂರು

ಪೂರ್ವ ವಲಯ 
ಕಾಚರಕನಹಳ್ಳಿ, ಮೋರಾಯನಪಾಳ್ಯ,

 ಹಲಸೂರು, ಬೊಮ್ಮನಹಳ್ಳಿ, ಯಲಚೇನಹಳ್ಳಿ , ಮಹದೇವಪುರ , ಎಚ್‌ಎಎಲ್‌ ಏರ್‌ಪೋರ್ಟ್‌, ರಾಜರಾಜೇಶ್ವರಿ ನಗರ, ಲಕ್ಷ್ಮೀದೇವಿನಗರ, ಜ್ಞಾನಭಾರತಿ, ಲಗ್ಗೆರ

ವಿಶ್ವದ ಅತ್ಯುತ್ತಮವಾದ 10 ಮೊಬೈಲ್‌ ಕ್ಯಾಂಟೀನ್‌ ವಾಹನಗಳ ವಿನ್ಯಾಸವನ್ನು ಅಧ್ಯಯನ ನಡೆಸಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ವಿನ್ಯಾಸಗೊಳಿಸಲಾಗಿದ್ದು, ನಿರ್ಮಿತ ಕ್ಯಾಂಟೀನ್‌ನಲ್ಲಿರುವ ಎಲ್ಲ ಸೌಲಭ್ಯಗಳು ಮೊಬೈಲ್‌ ಕ್ಯಾಂಟೀನ್‌ನಲ್ಲಿಯೂ ಇರಲಿವೆ. ಜತೆಗೆ ವಾಹನ ಪರಿಸರ ಸ್ನೇಹಿಯಾಗಿದೆ. ಜತೆಗೆ ಟೇಬಲ್‌ಗ‌ಳು, ಬಳಸಿದ ನೀರು, ಕುಡಿಯುವ ನೀರಿಗಾಗಿ ಪ್ರತ್ಯೇಕ ಟ್ಯಾಂಕ್‌, ಪ್ಲೇಟ್‌ಗಳನ್ನು ಇರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
 ಮನೋಜ್‌ ರಾಜನ್‌, ವಿಶೇಷ ಆಯುಕ್ತ

ಪಾಲಿಕೆಯ 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಿವೆ. 24 ಕಡೆಗಳಲ್ಲಿ ಮೊಬೈಲ್‌ ಇಂದಿರಾ ಕ್ಯಾಂಟೀನ್‌ ಸೇವೆ ನೀಡಲಿವೆ. ಪ್ರತಿ ಮೊಬೈಲ್‌ ಕ್ಯಾಂಟೀನ್‌ಗೆ 14 ಲಕ್ಷ ರೂ. ವೆಚ್ಚವಾಗಿದ್ದು, ಜ.26ರಂದು  ಮುಖ್ಯಮಂತ್ರಿಗಳು 16 ವಾಹನಗಳಿಗೆ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿಯಿಂದ ಆಹಾರ ವಿತರಣೆಯನ್ನು ಆರಂಭಿಸಲಿವೆ.
 ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

 ವೆಂ.ಸುನೀಲ್‌ಕುಮಾರ್‌

ಟಾಪ್ ನ್ಯೂಸ್

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

German: ಮಾರುಕಟ್ಟೆಗೆ ನುಗ್ಗಿಸಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

PM Modi: 43 ವರ್ಷದ ಬಳಿಕ ಪ್ರಧಾನಿ ಮೋದಿ ಕುವೈತ್ ಭೇಟಿ… ಇಲ್ಲಿದೆ ಎರಡು ದಿನದ ವೇಳಾಪಟ್ಟಿ

PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ

Upendra’s UI Movie Review

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.