ಲೋಕಸಭಾ ಚುನಾವಣೆ : ಪ್ರಧಾನಿ ಪರ ಪ್ರಚಾರಕ್ಕೆ ‘ಟೀಂ ಮೋದಿ’ ಸಜ್ಜು
Team Udayavani, Dec 17, 2018, 7:05 AM IST
ಬೆಂಗಳೂರು : ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೆ ಸಜ್ಜಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯಾಗಿಸಲು ‘ಟೀಂ ಮೋದಿ’ ಸಿದ್ಧವಾಗಿದೆ. ಮೋದಿ ಸರಕಾರ 5 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದು, ಈಗ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮತ್ತೂಮ್ಮೆ ಮೋದಿಯವರನ್ನು ಪ್ರಧಾನಿ ಮಾಡಬೇಕು ಎಂಬ ಉದ್ದೇಶದೊಂದಿಗೆ ವಿನೂತನ ಕಾರ್ಯಕ್ರಮಗಳೊಂದಿಗೆ ಟೀಂ ಮೋದಿ ಕಾರ್ಯಾರಂಭಿಸಿದೆ. ಇಂದೊಂದು ರಾಜಕೀಯೇತರ ಸಂಘಟನೆಯಾಗಿದ್ದು, ಯಾರು ಬೇಕಾದರೂ ಇದರಲ್ಲಿ ಸದಸ್ಯರಾಗಿ ಮೋದಿಯವರ ಸಾಧನೆಯ ಕುರಿತು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬಹುದು. ಮೋದಿ ಸಾಧನೆಯ ಕುರಿತ ಮಾಹಿತಿ ಮತ್ತು ಎಲ್ಲ ರೀತಿಯ ದಾಖಲೆಗಳನ್ನು ‘ಟೀಂ ಮೋದಿ’ ಒದಗಿಸಿಕೊಡಲಿದೆ ಎಂದು ಲೇಖಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ‘ಉದಯವಾಣಿ’ ಗೆ ಮಾಹಿತಿ ನೀಡಿದರು.
ಟೀಂ ಮೋದಿಗೆ ಚಾಲನೆ
‘ಟೀಂ ಮೋದಿ’ ಸಂಘಟನೆಗೆ ರವಿವಾರ ರಾಜ್ಯಾದ್ಯಂತ ಬೈಕ್ ಜಾಥಾ ಮೂಲಕ ಚಾಲನೆ ಸಿಕ್ಕಿದೆ. ಉಡುಪಿ, ಮಂಗಳೂರು, ಮೈಸೂರು, ಯಾದಗಿರಿ, ಮುಂಡಗೋಡು, ನೆಲಮಂಗಲ ಸಹಿತ ರಾಜ್ಯದ 357 ಕಡೆಗಳಲ್ಲಿ ಬೈಕ್ ಜಾಥಾ ಮೂಲಕ ಮೋದಿಯವರ ಸಾಧನೆಯ ಮಾಹಿತಿ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆದಿದೆ. ಎಲ್ಲೆಲ್ಲಿ ಬೈಕ್ ಜಾಥಾಗೆ ಅವಕಾಶ ಸಿಕ್ಕಿಲ್ಲವೋ ಅಲ್ಲಿ ಪಾದಯಾತ್ರೆ ಮೂಲಕ ಟೀಂ ಮೋದಿ ಕಾರ್ಯಾರಂಭಿಸಿದೆ. ಪಾದಯಾತ್ರೆಗೂ ಅವಕಾಶ ನೀಡದ ಕಡೆಗಳಲ್ಲಿ ಸ್ವಚ್ಛತಾ ಕಾರ್ಯದೊಂದಿಗೆ ‘ಟೀಂ ಮೋದಿ’ ಕಾಯಕ ಆರಂಭಿಸಿದೆ.
ವಿಚಾರಗೋಷ್ಠಿ , ಸಮಾವೇಶ
ವೈದ್ಯರು, ಎಂಜಿನಿಯರ್, ಪ್ರಾಧ್ಯಾಪಕರು ಸಹಿತವಾಗಿ ಬೌದ್ಧಿಕ ವರ್ಗದವರಿಗೆ ವಿಚಾರ ಗೋಷ್ಠಿ, ಸಂವಾದ, ವಿಚಾರ ಮಂಥನ ಮೊದಲಾದ ಕಾರ್ಯಕ್ರಮಗಳ ಮೂಲಕ ಮೋದಿಯವರ ಸಾಧನೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕ ಸಭೆಯ ಮೂಲಕ ಮೋದಿ ಸಾಧನೆ, ಮೋದಿ ಮತ್ತೂಮ್ಮೆ ಪ್ರಧಾನಿ ಏಕೆ ಆಗಬೇಕು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಿದ್ದೇವೆ. ಇದರ ಜತೆಗೆ ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.