ರಾಜಧಾನಿಯಲ್ಲಿ ಮೋದಿ ಭರ್ಜರಿ ಪ್ರಚಾರ
Team Udayavani, Apr 14, 2019, 3:32 AM IST
ಬೆಂಗಳೂರು: ಲೋಕಸಭಾ ಚುನಾವಣೆಯ ಬಿರುಸಿನ ಪ್ರಚಾರದಲ್ಲಿದ್ದ ರಾಜಾಧಾನಿ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿಗಳಿಗೆ ಶನಿವಾರ ಮೋದಿ ಪ್ರಚಾರದ ಟಾನಿಕ್ ದೊರೆಯಿತು. ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಮೋದಿ ಮತ್ತೂಮ್ಮೆ ಬೃಹತ್ ರ್ಯಾಲಿ’ಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೇರಿದ್ದರು.
ರಾತ್ರಿ 7.40ರ ಸುಮಾರಿಗೆ ಪ್ರಧಾನಿ ಮೋದಿಯವರು ವೇದಿಕೆ ಪ್ರವೇಶ ಮಾಡಿದರು. ವೇದಿಕೆ ಮೇಲೇರುತ್ತಿದ್ದಂತೆ ಬೆಂಗಳೂರು ಉತ್ತರದ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ, ದಕ್ಷಿಣದ ತೇಜಸ್ವಿ ಸೂರ್ಯ, ಕೇಂದ್ರದ ಪಿ.ಸಿ.ಮೋಹನ್ ಹಾಗೂ ಗ್ರಾಮಾಂತರ ಅಭ್ಯರ್ಥಿ ಅಶ್ವಥ್‌ನಾರಾಯಣಗೌಡರನ್ನು ಮಾತನಾಡಿದರು. ಈ ವೇಳೆ ತೇಜಸ್ವಿ ಸೂರ್ಯ ಅವರು ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದು ವಿಶೇಷವಾಗಿತ್ತು. ವೇದಿಕೆಯಿಂದ ತೆರಳುವ ಮುನ್ನವೂ ನಾಲ್ಕೂ ಅಭ್ಯರ್ಥಿಗಳ ಜತೆ ಕೈ ಎತ್ತಿ ವಿಜಯದ ಸಂಕೇತ ಪ್ರದರ್ಶಿಸಿದರು.
ತೇಜಸ್ವಿನಿ ಅನಂತಕುಮಾರ್ ಜತೆ ಮಾತುಕತೆ: ಮೋದಿಯವರು ಆಗಮಿಸುತ್ತಿದ್ದಂತೆ ವೇದಿಕೆಯ ಎರಡನೇ ಸಾಲಿನ ಕುರ್ಚಿಯಲ್ಲಿ ಕುಳಿತದ್ದ ತೇಜಸ್ವಿನಿ ಅನಂತಕುಮಾರ್ ಅವರು ನೇರವಾಗಿ ಮೋದಿ ಬಳಿಗೆ ಬಂದು ನಮಸ್ಕಾರ ಮಾಡಿದರು. ಜನರತ್ತ ಕೈಬೀಸುವ ಭರದಲ್ಲಿದ್ದ ಮೋದಿಯವರು ಮೊದಲಿಗೆ ಸರಿಯಾಗಿ ಅವರನ್ನು ಗಮನಿಸಿರಲಿಲ್ಲ. ಜನರತ್ತ ಕೈಬೀಸಿ ಹಿಂದೆ ಬರುತ್ತಿದ್ದಂತೆ ಅಲ್ಲೇ ಪಕ್ಷದಲ್ಲಿ ನಿಂತಿದ್ದ ತೇಜಸ್ವಿನಿ ಅನಂತಕುಮಾರ್ ಅವರ ಜತೆಗೆ ಕೆಲಕಾಲ ಮಾತುಕತೆ ನಡೆಸಿ ಉಭಯಕುಶಲೋಪರಿ ವಿಚಾರಿಸಿದರು.
ಎಸ್‌ಎಂಕೆ ಜತೆ ಚರ್ಚೆ: ಮೋದಿಯವರು ವೇದಿಕೆಯಲ್ಲಿ ಕುಳಿತಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡುತ್ತಿದ್ದರು. ಈ ವೇಳೆ ಮೋದಿಯವರು ತಮ್ಮ ಪಕ್ಷದಲ್ಲೇ ಇದ್ದ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರ ಜತೆಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದರು. ಅಲ್ಲದೇ, ವೇದಿಕೆ ಪ್ರವೇಶಿಸಿದಾಗ ಮತ್ತು ವೇದಿಕೆಯಿಂದ ನಿರ್ಗಮಿವಾಗಲೂ ಎಸ್.ಎಂ.ಕೃಷ್ಣ ಅವರಿಗೆ ವಿಶೇಷವಾಗಿ ನಮಸ್ಕರಿಸಿದರು. ವೇದಿಕೆಯ ಮೇಲೆ ಬಿಜೆಪಿಯ ಹಲವು ನಾಯಕರಿದ್ದರೂ, ಮೋದಿಯವರು ವಿಶೇಷವಾಗಿ ಎಸ್.ಎಂ.ಕೃಷ್ಣ ಅವರ ಜತೆಗೆ ಚರ್ಚೆ ಮಾಡುತ್ತಿದ್ದದ್ದು ಹೆಚ್ಚು ಆರ್ಕಷಕವಾಗಿತ್ತು.
ಅನಂತ ಕುಮಾರ್, ವಿಜಯ ಕುಮಾರ್ ಸ್ಮರಣೆ: ಕೇಂದ್ರದಲ್ಲಿ ಸಚಿವರಾಗಿದ್ದ ಅನಂತ ಕುಮಾರ್ ಹಾಗೂ ಜಯನಗರ ಶಾಸಕರಾಗಿದ್ದ ವಿಜಯ್ ಕುಮಾರ್ ಅವರನ್ನು ಪ್ರಧಾನಿ ಮೋದಿಯವರು ತಮ್ಮ ಭಾಣಷದ ಆರಂಭದಲ್ಲೇ ನೆನಪಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದರು. ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸುವ ಸಂದರ್ಭದಲ್ಲಿ ಜನರಿಕ್ ಔಷಧ ಹಾಗೂ ಮಂಡಿಚಿಪ್ಪು ಕೈಗೆಟುಕುವ ದರದಲ್ಲಿ ನೀಡಲು ಸಾಧ್ಯವಾಗಿದ್ದು ಅನಂತಕುಮಾರ್ ಅವರ ಪರಿಶ್ರಮದಿಂದ ಎಂದು ಮೋದಿಯವರು ಸ್ಮರಿಸಿದರು.
ಬಿಲ್ಲುಬಾಣದ ಅರ್ಪಣೆ: ಶನಿವಾರ ದೇಶಾದ್ಯಂತ ರಾಮನವಮಿ ಆಚರಣೆ ಮಾಡುತ್ತಿರುವುದರಿಂದ ಇದರ ನೆನಪಿಗಾಗಿ ರಾಜ್ಯ ಬಿಜೆಪಿಯಿಂದ ಮೋದಿಯವರಿಗೆ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬಿಲ್ಲುಬಾಣ ಅರ್ಪಿಸಿದರು.ಖುಷಿಯಿಂದ ಸ್ವೀಕರಿಸಿದ ಮೋದಿ, ಅದನ್ನು ಜನರತ್ತ ತೋರಿಸಿದರು.
ಜನ ಸಾಗರ: ಸಂಜೆ 6.45ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದು ಗಂಟೆ ತಡವಾಗಿ ಶುರವಾಗಿತ್ತು. ಸಂಜೆ 5.30ರ ಸುಮಾರಿಗೆ ಮೈದಾನ ಬಹುತೇಕ ಭರ್ತಿಯಾಗಿತ್ತು. ವಿಐಪಿ, ವಿವಿಐಪಿ ಹಾಗೂ ಸಮಾನ್ಯ ಕಾರ್ಯಕರ್ತರಿಗಾಗಿ ಹಾಕಿದ್ದ ಎಲ್ಲ ಕುರ್ಚಿಗಳು ಭರ್ತಿಯಾಗಿದ್ದು, ವೇದಿಕೆಯ ಮೂರು ಸುತ್ತುಗಳಲ್ಲೂ ಕಾರ್ಯಕರ್ತರು ನಿಂತಿದ್ದರು. ಮೋದಿ ಭಾಷಣ ವೀಕ್ಷಿಸಲು 11 ಬೃಹದಾಕಾರದ ಎಲ್‌ಇಡಿ ಸ್ಕ್ರೀನ್ ಕೂಡ ಅಳವಡಿಸಲಾಗಿತ್ತು. ಹಾಗೆಯೇ ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕಣ್ಗಾವಲು ಇತ್ತು. ಎಲ್ಲೆಲ್ಲೂ ಬಿಜೆಪಿ ಬಾವುಟ ರಾರಾಜಿಸುತ್ತಿತ್ತು.
ಬಿಜೆಪಿ ರ್ಯಾಲಿಯಲ್ಲಿ ವೈದ್ಯರು, ಎಂಜಿನಿಯರ್‌ಗಳು, ಆಟೋ ಚಾಲಕರು, ಖಾಸಗಿ ಉದ್ಯೋಗಿಗಳು ಸೇರಿ ಎಲ್ಲ ವೃತ್ತಿಯವರೂ ಸ್ವ ಇಚ್ಛೆಯಿಂದ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್‌ನವರು ಇಂತಹ ಒಂದು ರ್ಯಾಲಿ ಮಾಡಿ ತೋರಿಸಲಿ.
-ತೇಜಸ್ವಿ ಸೂರ್ಯ
ದೇಶದ ಸೈನಿಕರಿಗೆ ಒನ್‌ರ್‍ಯಾಂಕ್-ಒನ್‌ಪೆನ್ಷನ್ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ನರೇಂದ್ರ ಮೋದಿ ಸರ್ಕಾರ ಇದನ್ನು ಮಾಡಿ ತೋರಿಸಿತು. ಕಾಂಗ್ರೆಸ್‌ಗೆ ಒಆರ್‌ಒಪಿ ಅಂದರೆ-ಒನ್ ರಾಹುಲ್ ಒನ್ ಪ್ರಿಯಾಂಕ ಎಂದಷ್ಟೇ ಗೊತ್ತು.
-ಡಿ.ವಿ.ಸದಾನಂದಗೌಡ
70 ವರ್ಷದಲ್ಲಿ ಆಗದ ಕೆಲಸವನ್ನು 5ವರ್ಷದಲ್ಲಿ ಮೋದಿ ಮಾಡಿ¨ªಾರೆ. ಮೈತ್ರಿ ಸರ್ಕಾರದಲ್ಲಿ ಭ್ರಷ್ಟಚಾರ ತುಂಬಿ ತುಳುಕುತ್ತಿದೆ. ರಾಜ್ಯ ಸರ್ಕಾರ ಬೆಂಗಳೂರನ್ನು ಮರೆತಿದೆ. ವೈಟ್ ಟಾಪಿಂಗ್ ಹೆಸರಿನಲ್ಲಿ ಜನರ ದುಡ್ಡು ಲೂಟಿ ಹೊಡೆಯುತ್ತಿದೆ.
-ಪಿ.ಸಿ.ಮೋಹನ್
ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬಂಡೆ ಗುಡ್ಡ ಕಂಡಲ್ಲಿ ಕ್ರಷರ್‌ಮಾಡುತ್ತಾರೆ. ಕೇಂದ್ರದ ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ.
-ಅಶ್ವತ್ಥನಾರಾಯಣ
ಮಂಡ್ಯದಲ್ಲಿ ಈಗಾಗಲೇ ಕಾಂಗ್ರೆಸ್ ನಾಯಕರು ಮೈತ್ರಿ ಅಭ್ಯರ್ಥಿಗೆ ಕೈಕೊಟ್ಟಿ¨ªಾರೆ. ಜನರೂ ಕೈ ಕೊಡುತ್ತಾರೆ. ಮೋದಿ ಪ್ರಧಾನಿಯಾದರೆ ಸನ್ಯಾಸ ಸ್ವೀಕರಿಸುವುದಾಗಿ ಎಚ್.ಡಿ.ರೇವಣ್ಣ ಹೇಳಿದ್ದಾರೆ. ರೇವಣ್ಣ ಯಾವ ಮಠ ಸೇರುತ್ತಾರೆ?
-ಆರ್.ಅಶೋಕ್
ಚುನಾವಣೆಗೆ ನಾಲ್ಕು ದಿನ ಉಳಿದಿದ್ದು, ನಾವೆಲ್ಲರೂ ಸಂಘಟಿತವಾಗಿ ವ್ಯಾಪಕ ಪ್ರಚಾರನಡೆಸಬೇಕಿದೆ. ಮೋದಿಯವರ ಆಡಳಿತದಲ್ಲಿ ದೇಶ ಸರ್ವಾಂಗೀಣ ಅಭಿವೃದ್ಧಿ ಕಂಡಿದೆ. ವಿರೋಧ ಪಕ್ಷಗಳ ಘಟಬಂಧನ್ ನೆಲಕಚ್ಚಿದೆ.
-ವಿ.ಸೋಮಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.