ಮೊಹಮ್ಮದ್‌ ನಲಪಾಡ್‌ ಪ್ರಕರಣ ಮಾ.2ಕ್ಕೆ ತೀರ್ಪು

Team Udayavani, Feb 28, 2018, 11:53 AM IST

nalapad.jpg

ಬೆಂಗಳೂರು: ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ಮೊಹಮ್ಮದ್‌ ನಲಪಾಡ್‌ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ  63ನೇ ಸೆಷನ್ಸ್‌ ಕೋರ್ಟ್‌ ಮಾ.2ಕ್ಕೆ ತೀರ್ಪು ಕಾಯ್ದಿರಿಸಿದೆ.

ಪ್ರಕರಣ ಸಂಬಂಧ ವಿದ್ವತ್‌ ಪರ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್‌, ಮೊಹಮ್ಮದ್‌ ನಲಪಾಡ್‌ ಪರ ಟಾಮಿ ಸೆಬಾಸ್ಟಿನ್‌ ಹಾಗೂ ಇತರೆ ಆರೋಪಿಗಳ ಪರ ಬಾಲನ್‌ ವಾದ ಮಂಡಿಸಿದರು. ಮೂವರು ವಕೀಲರು ಸುಮಾರು 2 ಗಂಟೆಗೂ ಅಧಿಕ ಕಾಲ ಮಂಡಿಸಿದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ವಿಚಾರಣೆ ಪೂರ್ಣಗೊಳಿಸಿ ಮಾ.2ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು.

ಮೊದಲಿಗೆ ಮೊಹಮ್ಮದ್‌ ಹೊರತು ಪಡಿಸಿ ಇತರೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲ ಬಾಲನ್‌, ಘಟನೆ ಸಂಬಂಧ ದಾಖಲಾಗಿರುವ ಎರಡು ಎಫ್ಐಆರ್‌ಗಳಲ್ಲಿ ಮೊಹಮ್ಮದ್‌ ಹೊರತು ಪಡಿಸಿ, ನಮ್ಮ ಕಕ್ಷಿದಾರರ ಹೆಸರುಗಳಿಲ್ಲ. ಪ್ರಕರಣದಲ್ಲಿ ಆರೋಪಿ 2ರಿಂದ 8ರವರೆಗಿನ ಆರೋಪಿಗಳ ಪಾತ್ರ ಇಲ್ಲ. ಸಿಸಿಟಿವಿ ನೋಡಿ ಮೊಹಮ್ಮದ್‌ ಹಾಗೂ ಇತರೆ 15 ಮಂದಿ ಎಂದು ಹೇಳುತ್ತಾರೆ. ಆದರೆ, ಆ ಆರೋಪಿಗಳು ಯಾರೆಂದು ಎಲ್ಲಿಯೂ ಉಲ್ಲೇಖೀಸಿಲ್ಲ ಎಂದರು.

ಇನ್ನು ವಿದ್ವತ್‌ ಕಾಲಿಗೆ ಮೊದಲೇ ಪೆಟ್ಟು ಬಿದ್ದಿತ್ತು. ಅಂತಹ ವ್ಯಕ್ತಿಯ ಮೇಲೆ ಹಲ್ಲೆ ಸಾಧ್ಯವೇ? ಗಲಾಟೆ ವೇಳೆ ಎರಡು ಗುಂಪಿನ ಸದಸ್ಯರು ಗಾಯಗೊಂಡಿದ್ದಾರೆ. ಆದರೆ ವಿದ್ವತ್‌ ಖಾಸಗಿ ಆಸ್ಪತ್ರೆ ದಾಖಲಾಗಿದ್ದಾನೆ. ನಕ್ಕಲ್‌ನಿಂದ ಹಲ್ಲೆ ಎಂದು ಎಸ್‌ಪಿಪಿ ವಾದಿಸುತ್ತಾರೆ. ಅಂತಹ ಯಾವುದೇ ಅಸ್ತ್ರ ಬಳಕೆ ಕುರಿತು ದಾಖಲೆಗಳಿಲ್ಲ. ಇದೊಂದು ಸಣ್ಣ ಘಟನೆ ಅಷ್ಟೇ. ಆದರೆ,ಇದಕ್ಕೆ ರಾಜಕೀಯ ಬಣ್ಣ ಕಟ್ಟಿ ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಿದ್ದಾರೆ ಎಂದರು.

ಟೆಲ್‌ ಟು ಸೇಲ್‌: ನಮ್ಮ ಕಕ್ಷಿದಾರರು ಮದ್ಯ ಸೇವಿಸಲು ಕೆಫೆಗೆ ಹೋಗಿದ್ದರು ಎಂದು ಆರೋಪಿಸುತ್ತಾರೆ. ಹಾಗಾದರೆ ವಿದ್ವತ್‌ ಹಾಲು ಕುಡಿಯೋಕ್ಕೆ ಹೋಗಿದ್ದರೆ? ಅನಗತ್ಯವಾಗಿ ಪ್ರಕರಣವನ್ನು ಎಳೆಯುತ್ತಿದ್ದಾರೆ.  ಬಂದರೂ ಹೊಡೆದರು ಹೋದರು ಇಲ್ಲಿಗೆ ಮುಗಿಯಿತು. ಆದರೆ, ಕಾಂಗ್ರೆಸ್‌ ಯುವ ಮುಖಂಡ ಎಂಬ ಕಾರಣಕ್ಕೆ ಮಾಧ್ಯಮಗಳು ಇದನ್ನು “ಟೆಲ್‌ ಟು ಸೇಲ್‌’ ಮಾಡುತ್ತಿವೆ  ಎಂದರು.

ಈ ಹಿಂದೆ ವಿದ್ವತ್‌ಗೆ ಅಪಘಾತದ ಬಗ್ಗೆ ಮಾಹಿತಿ ನೀಡಿಲ್ಲ. ವಿದ್ವತ್‌ ಆರೋಗ್ಯವಾಗಿದ್ದರೂ ಗಂಭೀರ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ತಿರಸ್ಕರಿಸುವಂತಹ ಬಲವಾದ ಸಾûಾÂಗಳಿಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್‌, ದೂರು ದಾಖಲಾಗುತ್ತಿದ್ದಂತೆ ಮೊದಲಿಗೆ ಪೊಲೀಸರು ಹÇÉೆಗೊಳಗಾದವರು ರಕ್ಷಣೆ ಮಾಡುವುದು ಬಿಟ್ಟು ,ವಿದ್ವತ್‌ ಕುಡಿದಿದ್ದಾನಾ ಎಂದು ಪರೀಕ್ಷೆ ನಡೆಸಿದರು. ವಿದ್ವತ್‌ ಐಸಿಯೂನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರವಾದ ಮಾತ್ರಕ್ಕೆ  ಆರೋಪಿಗಳಿಗೆ ಜಾಮೀನು ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ವಿದ್ವತ್‌ ವಿರುದ್ಧ ದೂರು ನೀಡಿರುವ ಅರುಣ್‌ಬಾಬು ದೂರಿನ ಪ್ರತಿಯನ್ನು ಗಮನಿಸಿದರೆ ಇದೊಂದು ಉದ್ದೇಶ ಪೂರ್ವಕ ದೂರು ಎಂಬುದು ಕಾಣುತ್ತದೆ. ದೂರುದಾರರ ವಿಳಾಸ ಮತ್ತು ಫೋನ್‌ ಸಂಖ್ಯೆಗಳನ್ನು ಬೇರೆ ಬೇರೆ ಪೆನ್‌ಗಳನ್ನು ಬಳಸಿ ಬರೆಯಲಾಗಿದೆ. ದೂರಿನಲ್ಲಿ ದಿನಾಂಕ ಮತ್ತು ದೂರುದಾರರ ಸಹಿಯನ್ನೂ ತಿದ್ದಿರುವಂತಿದ್ದು, ಇದು ಪೊಲೀಸರೇ ಖುದ್ದು ಬರೆದ ದೂರಿನ ಪ್ರತಿಯೇ ಹೊರತು ಅರುಣ್‌ಬಾಬು ಬರೆದ ದೂರು ಅಲ್ಲ. 

ಅಲ್ಲದೇ, ಮೊದಲ ಎಫ್ಐಆರ್‌ ಮಧ್ಯಾಹ್ನ 3.30ಕ್ಕೆ ದಾಖಲಾಗಿದೆ. ಎರಡನೇ ಎಫ್ಐಆರ್‌ ಅಂದರೆ ಅರುಣ್‌ಬಾಬು ನೀಡಿದ ದೂರು 5.30ಕ್ಕೆ ದಾಖಲಾಗಿದೆ. ವಿದ್ವತ್‌ ಮದ್ಯಪಾನ ಮಾಡಿದ್ದರು ಎಂದು ಹೇಳಿದ್ದಾರೆ. ಆದರೆ, ಆಸ್ಪತ್ರೆ ವೈದ್ಯರು ವಿದ್ವತ್‌ ಮದ್ಯ ಸೇವಿಸಿಲ್ಲ ಎಂದು ವರದಿ ನೀಡಿದ್ದಾರೆ ಎಂದು ವಾದಿಸಿದರು.

ಮೊಹಮ್ಮದ್‌ ಪರ ವಾದ ಮಂಡಿಸಿದ ವಕೀಲ ಟಾಮಿ ಸೆಬಾಸ್ಟಿನ್‌, ಮೊಹಮ್ಮದ್‌ ವಿರುದ್ಧ ದಾಖಲಾಗಿರುವ ಪ್ರಕರಣವೇ ಸುಳ್ಳು. ಫ‌ರ್ಜಿ ಕೆಫೆಯಲ್ಲಿನ ಸಿಸಿಟಿವಿಯನ್ನು ಆಧರಿಸಿ ವಶಕ್ಕೆ ಪಡೆಯಲಾಗಿದೆ. ಗಾಯಗೊಂಡಿರುವವರು ಆಸ್ಪತ್ರೆಯಲ್ಲಿ ಇರುವವರೆಗೂ ಆರೋಪಿಗಳು ಜೈಲಿನಲ್ಲಿ ಉಳಿಯಬೇಕೇ? ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರ ತನಿಖೆಗೆ ಸಹಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಬೇಕು ಎಂದು ವಾದ ಮಂಡಿಸಿದರು.

ಎರಡು ಕಡೆಯ ವಾದ-ಪ್ರತಿವಾದಗಳನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ. ಮಾ.2ರಂದು ತೀರ್ಪು ಪ್ರಕಟಿಸಲಿದ್ದಾರೆ. ನಮಗೆ ಜಾಮೀನು ಸಿಗುವ ವಿಶ್ವಾಸವಿದೆ. ಸದ್ಯದ ಮಾಹಿತಿ ಪ್ರಕಾರ ವಿದ್ವತ್‌ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗುತ್ತಾನೆ ಎಂಬ ಮಾಹಿತಿಯಿದೆ. ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
-ಟಾಮಿ ಸೆಬಾಸ್ಟಿನ್‌, ಮೊಹಮ್ಮದ್‌ ಪರ ವಕೀಲ

ಖಾಸಗಿಯಾಗಿ ನೇಮಕವಾಗಿರುವ ಪ್ರಾಸಿಕ್ಯೂಟರ್‌ಗಳು ಬಂದರೆ ಕೆಲವೊಂದು ಗೊಂದಲ ಸೃಷ್ಟಿಯಾಗುತ್ತವೆ. ಘಟನೆಯನ್ನು ಮಾಫಿಯಾಗೆ ಹೊಲಿಕೆ ಮಾಡಿದ್ದಾರೆ. ಇದೊಂದು ಸಣ್ಣ ಪ್ರಕರಣ ಮೊಹಮ್ಮದ್‌ ತಂದೆ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ದೊಡ್ಡದು ಮಾಡಲಾಗಿದೆ. ಈ ಘಟನೆಯ ಹಿಂದೆ ಸಂಘಪರಿವಾರದವರ ಕೈವಾಡವಿದೆ. 
-ಬಾಲನ್‌, ಆರೋಪಿಗಳ ಪರ ವಕೀಲ

ಸಮಾಜದಲ್ಲಿ ನಡುಕ ಹುಟ್ಟಿಸುವಂತಹ ಘಟನೆ ಇದು. ಇಂತಹ ಆರೋಪಿಗಳಿಗೆ ಮಾತ್ರ ಜಾಮೀನು ಲಭ್ಯವಾಗಬಾರದು.
-ಶ್ಯಾಮ್‌ಸುಂದರ್‌, ಸರ್ಕಾರಿ ಪರ ವಕೀಲರು. 

ಮಾಡಿದ ತಪ್ಪಿಗೆ ಶಿಕ್ಷೆ: ಮೊಹಮ್ಮದ್‌ ನಲಪಾಡ್‌ ವಿಚಾರದಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್‌ ಸೂಕ್ತ ಕಾನೂನು ಕ್ರಮ ಕೈಗೊಂಡಿದೆ ಎಂದು ಎಐಸಿಸಿ ಮಾಧ್ಯಮ ಸಂಪರ್ಕ ಪ್ರಭಾರ ರಣದೀಪ್‌ಸಿಂಗ್‌ ಸುರ್ಜೆವಾಲಾ ತಿಳಿಸಿದ್ದಾರೆ. ಶಾಸಕ ಹ್ಯಾರಿಸ್‌ ಪುತ್ರ ಮಾಡಿದ ತಪ್ಪಿಗೆ ಶಿಕ್ಷೆ ಆಗಿದೆ. ಕಾಂಗ್ರೆಸ್‌ ಕಾನೂನು ಪರ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಇಂಥವರಿಗೆ ಎಂದೂ ಮಣೆ ಹಾಕಿಲ್ಲ. ನಲಪಾಡ್‌ ಟಿಕೆಟ್‌ ಕೇಳಿಲ್ಲ, ಆತನಿಗೆ ಕೊಡುವುದೂ ಇಲ್ಲ ಎಂದು ಹೇಳಿದರು. ಹ್ಯಾರಿಸ್‌ಗೆ ಟಿಕೆಟ್‌ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದ್ದು ಎಂಎಲ್‌ಎ ಮಗ, ಎಂಎಲ್‌ಎ ಅಲ್ಲ. ಪ್ರಕರಣದಲ್ಲಿ ಶಾಸಕರದ್ದು ಯಾವುದೇ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡರು.

ಟಾಪ್ ನ್ಯೂಸ್

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.