ಗ್ರೀನ್ ಪಾಥ್‌ನಲ್ಲಿ ಮುಂಗಾರು ಬೀಜ ಮೇಳ
Team Udayavani, Jul 15, 2018, 11:46 AM IST
ಬೆಂಗಳೂರು: ನಗರಗಳಿಗೆ ಪೂರೈಕೆಯಾಗುವ ತರಕಾರಿಗಳು ವಿಷಯುಕ್ತವಾಗಿರುತ್ತದೆ. ಹೀಗಾಗಿ ಜನರು ಖುದ್ದಾಗಿ ವಿಷಮುಕ್ತ ತರಕಾರಿ ಬೆಳೆಸಿ,ಉಪಯೋಗಿಸಬೇಕು ಎಂದು ಸಾವಯವ ಚಳವಳಿ ಮುಖಂಡ ಎಚ್.ಆರ್. ಜಯರಾಮ್ ಹೇಳಿದರು.
ನಗರದ ಗ್ರೀನ್ ಪಾಥ್ ಆವರಣದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಮುಂಗಾರು ಬೀಜ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಚ್ಚು ಉತ್ಪಾದನೆ ಮಾಡುವ ಭರದಲ್ಲಿ ಆಹಾರ ಧಾನ್ಯದ ಬೆಳೆಗಳಿಗೆ ವಿಪರೀತ ರಾಸಾಯನಿಕ ಸುರಿಯಲಾಗುತ್ತಿದೆ. ಆರೋಗ್ಯಕ್ಕೆ ಮಾರಕವಾದ ಇಂಥ ಪದಾರ್ಥಗಳನ್ನು ಸೇವಿಸುವ ಬದಲಿಗೆ ಸಾವಯವ ಪದಾರ್ಥಗಳನ್ನು ನಾವೇ ಬೆಳೆದು ತಿನ್ನುವುದು ಉತ್ತಮ ಎಂದರು.
ಆರೆಂಟು ಬಗೆಯ ಸೊಪ್ಪು, ತರಕಾರಿಗಳನ್ನು ಮಾತ್ರವೇ ತರಕಾರಿ ಎಂದು ಭಾವಿಸಲಾಗಿದೆ. ಪೌಷ್ಠಿಕಾಂಶ ದೇಸಿ ತರಕಾರಿಗಳನ್ನು ಜನರು ಸುಲಭವಾಗಿ ಬೆಳೆಯಬಹುದು. ನಗರದ ಜನತೆ ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಯಸಂದ್ರ ಗ್ರಾಮದ ಸಾವಯವ ಕೃಷಿಕ ದಂಪತಿ ಕಾಂತರಾಜು- ಸುಚಿತ್ರಾ ಮೇಳ ಉದ್ಘಾಟಿಸಿದರು. ಬೀಜ ಮೇಳದ ಸಂಚಾಲಕ ಸಿ.ಶಾಂತಕುಮಾರ್, ಸಹಜ ಸೀಡ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಸಾಗರ್ ಉಪಸ್ಥಿತರಿದ್ದರು.
ಆಕರ್ಷಣೆ: ಮುಸುಕುಬದನೆ, ಕಪ್ಪುಮೆಣಸಿನಕಾಯಿ, ಈರಂಗೆರೆ ಬದನೆ, ಗೋಮುಖ ಬದನೆ, ಕೊತ್ತಿತಲೆ ಬದನೆ, ಕಾಶ್ಮೀರ ಸುಂದರಿ ಬದನೆ, ಕೀನ್ಯಾದ ಗೋಯಕಂಬ ಬದನೆ, ಕೆಂಪು ಹಾಗೂ ಹಸಿರು ನಕ್ಷತ್ರ ಬೆಂಡೆ, ಕಪ್ಪು, ಹಳದಿ, ಕೇಸರಿ ಕ್ಯಾರೆಟ್, ಗಣಕೆ, ನೆಲಬಸಳೆ ಸೊಪ್ಪು, 40 ಬಗೆಯ ಬೀನ್ಸ್‌ಗಳು, ಸಿರಿಧಾನ್ಯಗಳು ಮೇಳದ ಆಕರ್ಷಣೆಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.