ಮೊರಾಸ್‌ ಗುರುದೀಕ್ಷೆ ಸಂಭ್ರಮ ಸಂಪನ್ನ


Team Udayavani, Dec 7, 2017, 12:23 PM IST

Bernad-Morris.jpg

ಬೆಂಗಳೂರು: ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಡಾ.ಬರ್ನಾರ್ಡ್‌ ಮೊರಾಸ್‌ ಅವರು ಬುಧವಾರ ನಗರದ ಕೋಲ್ಸ್‌ ಪಾರ್ಕ್‌ ಬಳಿ ಇರುವ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಪ್ರಧಾನಾಲಯದಲ್ಲಿ ಗುರುದೀಕ್ಷೆಯ ಸುವರ್ಣ ಸಂಭ್ರಮ ಆಚರಿಸಿಕೊಂಡರು.

ಕ್ರೈಸ್ತ ಧರ್ಮದ ಧಾರ್ಮಿಕ ವಿಧಿ-ವಿಧಾನ ಹಾಗೂ ಸರ್ವಧರ್ಮದ ಗಣ್ಯರ ಸಮ್ಮುಖದಲ್ಲಿ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಜೆ.ಆರ್‌.ಲೋಬೋ, ಎನ್‌.ಎ.ಹ್ಯಾರಿಸ್‌, ವಿಧಾನಪರಿಷತ್‌ ಮುಖ್ಯ ಸಚೇತಕ ಐವಾನ್‌ ಡಿಸೋಜಾ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಕೃತಜ್ಞತಾ ಭಾವದ ಬಲಿಪೂಜೆ ಅರ್ಪಣೆ: ಬಲಿಪೂಜೆ ಅರ್ಪಣೆಗೂ ಪೂರ್ವ ಮಾತನಾಡಿದ ಡಾ.ಬರ್ನಾರ್ಡ್‌ ಮೊರಸ್‌, “50 ವರ್ಷದ ಗುರುದೀಕ್ಷೆಯ ಸಂದರ್ಭದಲ್ಲಿ ದೇವರಿಗೆ ಕೃತಜ್ಞತಾ ಪೂರ್ವಕವಾಗಿ ಧನ್ಯವಾದ ಸಲ್ಲಿಸಲು ಹಾಗೂ ದೇವರ ದಯೆ ಮತ್ತು ಕರುಣೆಗೋಸ್ಕರ ವಂದನೆ ಸಲ್ಲಿಸಲು ನಾನು ಈ ಬಲಿಪೂಜೆಯನ್ನು ನಿಮ್ಮೊಂದಿಗೆ ಅರ್ಪಿಸುತ್ತಿದ್ದೇನೆ’ ಎಂದರು.

50 ವರ್ಷದ ಗುರುದೀಕ್ಷೆಯ ಜೀವನದಲ್ಲಿ ದೇವರ ಪ್ರೀತಿಯನ್ನು ಅನುಭವಿಸಿದ್ದೇನೆ. ಅವರ ಕರುಣೆಯಿಂದ ನಾನು ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಬಲಿಪೂಜೆ ಅರ್ಪಿಸುವಾಗ ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ನನ್ನ ಜೀವನದಲ್ಲಿ ಕಷ್ಟ, ಸಂಕಷ್ಟ, ಹಾಗೂ ನನ್ನಿಂದಾದ ತಪ್ಪು ಇರಬಹುದು, ಬಲಿಪೂಜೆ ಅರ್ಪಿಸುವಾಗ ನಾವು ನಮ್ಮ ಪಾಪಗಳನ್ನ ನೆನೆದುಕೊಂಡು ದೇವರಿಗೆ ಕ್ಷೇಮ ಬೇಡಿಕೊಳ್ಳೊಣ, ಎಲ್ಲರ ಕ್ಷೇಮಕ್ಕಾಗಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಬಲಿಪೂಜೆ ಅರ್ಪಿಸೋಣ ಎಂದು ಬಲಿಪೂಜೆ ನಡೆಸಿದರು.

ಪ್ರಸಾದ ವಿತರಣೆ: ನಂತರ ಡಾ.ಬರ್ನಾರ್ಡ್‌ ಮೊರಾಸ್‌ ಸೇರಿದಂತೆ ಮಹಾಧರ್ಮಗುರುಗಳು, ಧರ್ಮಗುರುಗಳು ಭಕ್ತರ ಬಳಿಗೆ ಬಂದು ಪ್ರಸಾದ ವಿತರಿಸಿದರು. ಬೆಂಗಳೂರು ಮಹಾಧರ್ಮಕ್ಷೇತ್ರದಿಂದ ಸಿದ್ಧಪಡಿಸಿದ್ದ ಕೇಕ್‌ ಕತ್ತರಿಸಿ, ಅವರಿಂದ ಸನ್ಮಾನ ಸ್ವೀಕರಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಪ್ರಾರ್ಥನೆ: ಕನ್ನಡ, ಇಂಗ್ಲಿಷ್‌ ಹಾಗೂ ತಮಿಳು ಭಾಷೆಯಲ್ಲಿ ವಿವಿಧ ಪ್ರಾರ್ಥನೆಯನ್ನು ಸಾಮೂಹಿಕವಾಗಿ ನೆರವೇರಿಸಿದರು. ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಮಹಾಧರ್ಮಾಧ್ಯಕ್ಷರಿಗೆ ಅರ್ಪಿಸಲು ವಿಶೇಷ ಪ್ರಾರ್ಥನೆಯೊಂದನ್ನು ಸಿದ್ಧಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅದರ ಪ್ರತಿಯನ್ನು ಎಲ್ಲರಿಗೂ ವಿತರಿಸಿ ಸಾಮೂಹಿಕವಾಗಿ ಹಾಡಿದರು. ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಪ್ರಧಾನಾಲಯದ ವ್ಯಾಪ್ತಿಯಲ್ಲಿ ಕೆಥೋಲಿಕ್‌ ಸಮುದಾಯ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಡಾ.ಬರ್ನಾರ್ಡ್‌ ಮೊರಾಸ್‌ ನೆರವೇರಿಸಿದರು.

ಗಣ್ಯರಿಂದ ಅಭಿನಂದನೆ: ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿ, ಗೃಹಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಗಣ್ಯರು ಡಾ.ಬರ್ನಾರ್ಡ್‌ ಮೊರಾಸ್‌ ಅವರಿಗೆ ಅಭಿನಂದನೆ ಸಲ್ಲಿಸಿದರು. ಭೋಪಾಲ್‌, ಚಿಕ್ಕಮಗಳೂರು, ಮೈಸೂರು, ಕಲಬುರಗಿ, ಬೆಳಗಾವಿ, ಬಳ್ಳಾರಿ, ಕಾರವಾರ, ಶಿವಮೊಗ್ಗ, ಮಂಡ್ಯ ಹಾಗೂ ತಮಿಳುನಾಡಿನ ವಿವಿಧ ಚರ್ಚ್‌ನ ಧರ್ಮಾಧ್ಯಕ್ಷರು, ಧರ್ಮಗುರುಗಳು, ಸಂಘಟನಾ ಸಮಿತಿಯ ಶ್ರೇಷ್ಠಗುರುಗಳಾದ ಮೊನ್‌ಸಿಜೊnàರ್‌ ಎಸ್‌.ಜಯನಾಥನ್‌, ಮೊನ್‌ಸಿಜೊರ್‌ ಸಿ.ಫ್ರಾನ್ಸಿಸ್‌, ಧಾರ್ಮಿಕ ಸಮುದಾಯದ ಮಹಾಧರ್ಮಾಕ್ಷೇತ್ರದ ಪ್ರತಿನಿಧಿ ಸ್ವಾಮಿ ಕ್ಸೇವಿಯರ್‌ ಮನಾವತ್‌ ಮೊದಲಾದವರು ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಸ್ವಾಗತ: ಸಂಜೆ 5 ಗಂಟೆ ಸುಮಾರಿಗೆ ಡಾ.ಬರ್ನಾರ್ಡ್‌ ಮೊರಾಸ್‌ ಅವರನ್ನು ಸಾಂಪ್ರದಾಯಿಕವಾಗಿ ಮಕ್ಕಳ ಬ್ಯಾಂಡ್‌ನೊಂದಿಗೆ ಪ್ರಧಾನಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಆನಂತರ ಮಹಾಧರ್ಮಗುರುಗಳು, ಧರ್ಮಾಧ್ಯಕ್ಷರು, ಧರ್ಮಗುರು ಅವರನ್ನು ಪ್ರಧಾನಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆ ಕರೆದುಕೊಂಡು ಹೋದರು.

ಬೆಂಗಳೂರು ಮಹಾಧರ್ಮ ಕ್ಷೇತ್ರದ ಮಹಾಧರ್ಮಾಧ್ಯಕ್ಷರು ಹಾಗೂ ಕರ್ನಾಟಕ ಪ್ರಾಂತೀಯ ಕೆಥೋಲಿಕ್‌ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರಾದ ಡಾ.ಬರ್ನಾರ್ಡ್‌ ಮೊರಾಸ್‌ ಅವರು ತಮ್ಮ ಗುರು ದೀಕ್ಷೆಯ ಸುವರ್ಣ ಮಹೋತ್ಸವವನ್ನು ಕರ್ನಾಟಕದ ಹಾಗೂ ಇತರೆ ಧರ್ಮಾಕ್ಷರು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಭಕ್ತ ಜನತೆಯ ಸಮ್ಮುಖದಲ್ಲಿ ಬಲಿಪೂಜೆ ಅರ್ಪಿಸುವ ಮೂಲಕ ಸಂಪನ್ನಗೊಳಿಸಿದರು.

ಟಾಪ್ ನ್ಯೂಸ್

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.