![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Mar 6, 2018, 9:49 AM IST
ಬೆಂಗಳೂರು: ತಾಯಿ ಮತ್ತು ಮಗ ಅಪಾರ್ಟ್‌ಮೆಂಟ್‌ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿಯ ಬೆಳ್‌ತೂರು ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತರು ಯಾದಗಿರಿ ಮೂಲದವರಾಗಿದ್ದು, 55 ವರ್ಷದ ಸುಂದರಮ್ಮ ಮತ್ತು ಮಗ ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿರುವ 33 ವರ್ಷದ ಮೌನೇಶ್ ಎನ್ನುವವರಾಗಿದ್ದಾರೆ.
ಪ್ರೇಮ ಪ್ರಕರಣ ದುರಂತಕ್ಕೆ ಕಾರಣ?
ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಕಾಡುಕೋಡಿ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಪ್ಪ ಎನ್ನುವವರ ಸಹೋದರಿಗೆ ಪ್ರೇಮಾಂಕುರವಾಗಿ ಇಬ್ಬರೂ ಮನೆ ಬಿಟ್ಟು ತೆರಳಿದ್ದರು ಎನ್ನಲಾಗಿದೆ. ಇದೇ ವಿಚಾರದಲ್ಲಿ ಚಂದ್ರಪ್ಪ ಅವರು ಮೌನೇಶ್ ಮತ್ತು ತಾಯಿನನ್ನು ಕೂಡಿ ಹಾಕಿ ಬೆದರಿಸಿದ್ದರು ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಚಂದ್ರಪ್ಪ ಅವರ ವರ್ಗಾವಣೆಯೂ ಆಗಿತ್ತು ಎಂದು ವರದಿಯಾಗಿದೆ.
ಕಾಡುಗೋಡಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.