ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ
Team Udayavani, Sep 2, 2017, 12:09 PM IST
ಬೆಂಗಳೂರು: ಸಾಲಬಾಧೆಯಿಂದ ಬೇಸತ್ತ ಮಹಿಳೆಯೊಬ್ಬರು ಡೆತ್‌ನೋಟ್ ಬರೆದಿಟ್ಟು 10 ತಿಂಗಳ ಹಸುಗೂಸು ಸೇರಿ ಇಬ್ಬರು ಮಕ್ಕಳಿಗೆ ನೇಣುಬಿಗಿದು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಹಲಸೂರಿನಲ್ಲಿ ನಡೆದಿದೆ.
ಮರ್ಫಿಟೌನ್‌ನ ನಾಲಾ ರಸ್ತೆಯ ಸತ್ಯನಾರಾಯಣ ದೇವಾಲಯದಲ್ಲಿ ಬಳಿ ಘಟನೆ ನಡೆ ದಿದ್ದು, 10 ತಿಂಗಳ ಹಸುಗೂಸು ಪಾವನಿ, ನಿಶ್ಚಿತಾ (6), ರೇಣುಕಾ (34) ಮೃತರು. ಪತಿ 35 ಲಕ್ಷ ರೂ. ಸಾಲ ಮಾಡಿದ್ದು, ಇದನ್ನು ತೀರಿಸಲಾಗದೆ ಹಿನ್ನೆಲೆಯಲ್ಲಿ ವಮಾನಕ್ಕೊಳಗಾಗಿದ್ದ ರೇಣುಕಾ, ಮಾನಸಿಕವಾಗಿ ಜಿಗುಪ್ಸೆಗೊಂಡಿದ್ದರು.
ತನ್ನ ಸಾವಿನ ನಂತರ ಮಕ್ಕಳು ಅನಾಥರಾಗುತ್ತಾರೆ ಎಂದು ಭಾವಿಸಿದ ರೇಣುಕಾ, ಮೊದಲು ಮಕ್ಕಳನ್ನು ಕೊಂಡು, ಬಳಿಕ ತಾವೂ ಕೂಡ ನೇಣಿಗೆ ಶರಣಾಗಿದ್ದಾರೆ. ಆದರೆ, ಅತ್ತೆ, ಮಾವನ ಕಿರುಕುಳದಿಂದ ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೇಣುಕಾ ಪೋಷಕರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಸಿಕೊಳ್ಳಲಾಗಿದೆ.
ಆಸ್ತಿ ಖರೀದಿಗೆ ಸಾಲ: ಚಿತ್ರದುರ್ಗ ಮೂಲದ ರೇಣುಕಾ, 8 ವರ್ಷಗಳ ಹಿಂದೆ ಸಾಫ್ಟ್ವೇರ್ ಎಂಜಿನಿಯರ್ ಹೇಮಂತ್ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗೆ ನಿಶ್ಚಿತ ಮತ್ತು ಪಾವನಿ ಎಂಬ ಇಬ್ಬರು ಮಕ್ಕಳಿದ್ದರು. ಇಂದಿರಾನಗರದ ಚಿನ್ಮಯ ಆಸ್ಪತ್ರೆಯಲ್ಲಿ ರೇಣುಕಾ ಲ್ಯಾಬ್ ಟೆಕ್ನಿಷಿಯನ್ ಆಗಿದ್ದರು.
ಈ ಮಧ್ಯೆ ಪತಿ ಆಸ್ತಿ ಖರೀದಿಗೆ 35 ಲಕ್ಷ ರೂ. ಸಾಲ ಮಾಡಿದ್ದರು. ಯಾವುದೇ ಹಣ ಉಳಿತಾಯ ಮಾಡದೆ ಏಕಾಏಕಿ ಇಷ್ಟೊಂದು ಸಾಲ ಮಾಡಿದರ ಬಗ್ಗೆ ಪತ್ನಿ ರೇಣುಕಾ ಬೇಸರಗೊಂಡಿದ್ದರು. ಪತಿ ಹೇಮಂತ್ ಗುರುವಾರ ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದರು. ರೇಣುಕಾ ಮಕ್ಕಳಿಗೆ ಊಟ ಮಾಡಿಸಿ ತಾನೂ ಊಟ ಮಾಡಿ ಮಲಗಿದ್ದಾರೆ.
ಆದರೆ, ತಡರಾತ್ರಿ ಮಕ್ಕಳಿಗೆ ನೇಣು ಹಾಕಿ, ತಾವು ಕೂಡ ಅದೇ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಪತಿ ಹೇಮಂತ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಹೇಮಂತ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ವೇಳೆ ತಮ್ಮ ಪೋಷಕರು ಮನೆಯಲ್ಲೇ ಇದ್ದರು ಎಂದು ಹೇಮಂತ್ ಹೇಳಿಕೆ ನೀಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಳಿಸಿದ್ದಾರೆ.
ಹೇಮಂತ್ ಪೋಷಕರ ಕಿರುಕುಳ: ಅತ್ತೆ, ಮಾವ ನಿತ್ಯ ನೀಡುತ್ತಿದ್ದ ಕಿರುಕುಳ ತಾಳದೆ ಮಗಳು ಆತ್ಮಹತ್ಯೆ ಹಾದಿ ತಿಳಿದಿರುವುದಾಗಿ ರೇಣುಕಾ ಪೋಷಕರು ಆರೋಪಿಸಿದ್ದಾರೆ. ಮಗಳು ಹಬ್ಬಕ್ಕೆ ತವರಿಗೆ ಬಂದರೆ ಬಂದ ಒಂದೆರಡು ದಿನಗಳಲ್ಲೇ ಕರೆ ಮಾಡಿ ಬೆಂಗಳೂರಿಗೆ ವಾಪಸ್ ಕರೆಸಿಕೊಳ್ಳುತ್ತಿದ್ದರು. ಸಣ್ಣ ವಿಚಾರಳಿಗೂ ಆಕೆಯ ಅತ್ತೆ-ಮಾವ ಜಗಳ ತೆಗೆಯುತ್ತಿದ್ದರು ಎಂದು ತಾಯಿ ಸುಶೀಲಮ್ಮ ದೂರಿದ್ದಾರೆ.
ಡೆತ್‌ನೋಟ್‌ನಲ್ಲೇನಿದೆ?: “ನನ್ನ ಮತ್ತು ಮಕ್ಕಳ ಸಾವಿಗೆ ನಾನೇ ಕಾರಣ. ಎಲ್ಲರೂ ಚೆನ್ನಾಗಿರಿ. ನನ್ನ ಮತ್ತು ಮಕ್ಕಳ ಅಂತ್ಯಕ್ರಿಯೆಯನ್ನು ಚಿತ್ರದುರ್ಗದಲ್ಲಿಯೇ ಮಾಡಬೇಕು. ಅಂತ್ಯಕ್ರಿಯೆಗೆ ಅಗತ್ಯವಿರುವ ಹಣವನ್ನು ನನ್ನ ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದೇನೆ” ಎಂದು ರೇಣುಕಾ ಡೆತ್‌ನೋಟ್ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.