South Western Railway: ನೈಋತ್ಯ ರೈಲ್ವೆಯಿಂದ ಮಲ್ಟಿ ಮಾಡಲ್ ಪ್ಲಾನ್!
Team Udayavani, Jan 2, 2024, 2:29 PM IST
ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಯಲಹಂಕ- ದೇವನಹಳ್ಳಿ ಹಾಗೂ ದೇವನಹಳ್ಳಿ- ಬಂಗಾರಪೇಟೆ- ಕೋಲಾರ ಮಾರ್ಗದ ರೈಲ್ವೆ ಟ್ರ್ಯಾಕ್‌ನ್ನು “ಮಲ್ಟಿ ಮಾಡಲ್’ ಪ್ಲಾನ್ ಮೂಲಕ ಅಭಿವೃದ್ಧಿ ಪಡಿಸಿ, ರೈಲು ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯಲಹಂಕ -ದೇವನಹಳ್ಳಿ ಮಾರ್ಗ ಹಾಗೂ ದೇವ ನಹಳ್ಳಿ-ಬಂಗಾರಪೇಟೆ- ಕೋಲಾರ ಮಾರ್ಗದ ರೈಲ್ವೆ ಸಿಂಗಲ್ ಟ್ರ್ಯಾಕ್‌ಗಳನ್ನು ಡಬಲಿಂಗ್ ಮಾಡಲು ಯೋಜನೆ ಹಾಕಿಕೊಂಡಿದ್ದು, ಮೊದಲ ಹಂತದಲ್ಲಿ ಎರಡು ಮಾರ್ಗದಲ್ಲಿ ಟ್ರ್ಯಾಕ್ ನಿರ್ಮಾ ಣದ ಕಾರ್ಯ ಸಾಧ್ಯತೆಗಳ ಕುರಿತು ಸಮೀಕ್ಷೆ ನಡೆಸಿ ವರದಿ ತಯಾರಿಸುವ ಸಿದ್ಧತೆ ನಡೆಯುತ್ತಿದೆ.
10.5 ಕೋಟಿ ಮಂಜೂರು: ಮೊದಲ ಹಂತದಲ್ಲಿ ಯಲಹಂಕ-ದೇವನಹಳ್ಳಿ ಮಾರ್ಗದ ಸುಮಾರು 23ಕಿ.ಮೀ. ಟ್ರ್ಯಾಕ್ ಡಬಲಿಂಗ್ ವರದಿ ಸಲ್ಲಿಕೆಗೆ 8 ಕೋಟಿ ಹಾಗೂ ದೇವನಹಳ್ಳಿ- ಬಂಗಾರಪೇಟೆ -ಕೋಲಾರ ಮಾರ್ಗದ ಸುಮಾರು 125 ಕಿ.ಮೀ. ಡಬಲಿಂಗ್ ಹಾಗೂ ಆಟೋಮ್ಯಾಟಿಕ್ ಸಿಗ್ನಲ್ ಆಳವಡಿಕೆ ಕುರಿತು ಅಧ್ಯಯನ ನಡೆಸಿ ಅಗತ್ಯವಿರುವ ಸ್ಥಳಾವಕಾಶ, ಕಾರ್ಯ ಸಾಧ್ಯತೆ ಹಾಗೂ ಅಸಾಧ್ಯತೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ವೇ ನಡೆಸಲು 2.5ಕೋಟಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಒಂದು ಜೋಡಿ ಟ್ರೈನ್!: ಪ್ರಸ್ತುತ ಬೆಂಗಳೂರು- ಕೋಲಾರ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಯೊಂದು ರೈಲು ಸಂಚರಿಸುತ್ತಿದೆ. ಈ ಮಾರ್ಗವಾಗಿ ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಆದರೆ, ರೈಲುಗಳ ಓಡಾಟ ಕಡಿಮೆ ಇರುವುದರಿಂದ ಅನೇಕರು ಬಸ್ ಹಾಗೂ ಖಾಸಗಿ ವಾಹನಗಳ ಬಳಕೆಗೆ ಮುಂದಾಗುತ್ತಿದ್ದಾರೆ. ಇನ್ನೂ ಕೈಗಾರಿಕಗಳ ಸರಕು ಹಾಗೂ ರೈತರ ಬೆಳೆಗಳನ್ನು ವಾಹನಗಳ ಮೂಲಕ ಕೋಲಾರ-ಬೆಂಗಳೂರು ಮಾರ್ಗವಾಗಿ ಸಾಗಟ ಮಾಡಲಾಗುತ್ತಿದೆ.
ಮಲ್ಟಿ ಮಾಡಲ್ ಸ್ಕೀಂ!: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ ಮಲ್ಟಿ ಮಾಡಲ್ ಪ್ಲಾನ್ ಗಮನದಲ್ಲಿ ಇಟ್ಟುಕೊಂಡು ರೈಲ್ವೆ ಟ್ರ್ಯಾಕ್ ಡಬಲಿಂಗ್ ಮಾಡಲಿದೆ. ಪ್ರಸ್ತುತ ಸಿಂಗಲ್ ಟ್ರ್ಯಾಕ್‌ನ್ನು ಮೇಲ್ದಜೇìಗೆರಿಸಿ ಡಬಲ್ ಮಾಡುತ್ತಿದೆ. ಇದರಿಂದ ಎರಡು ಮಾರ್ಗವಾಗಿ ಎಲೆಕ್ಟ್ರಿಕ್ ಮೆಮು ರೈಲುಗಳ ಸಂಖ್ಯೆ ಏರಿಕೆಯಾಗಲಿದೆ. ಇದರಿಂದ ನಿತ್ಯ ಸಂಚರಿಸುವ ಐಟಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ. ಇನ್ನೂ ರೈಲ್ವೆ ಲಾಜಿಸ್ಟಿಕ್ ಗಮನದಲ್ಲಿ ಇಟ್ಟುಕೊಂಡು ಗೂಡ್ಸ್ ರೈಲುಗಳ ಓಡಾಟವೂ ಹೆಚ್ಚಾಗುವುದರಿಂದ ಕೈಗಾರಿಕಾ ಘಟಕಗಳ ಸರಕು ಹಾಗೂ ರೈತರ ಬೆಳೆಗಳನ್ನು ಗೂಡ್ಸ್ ರೈಲುಗಳ ಮೂಲಕ ಸಾಗಾಟ ಮಾಡಲು ಅನುಕೂಲವಾಗಲಿದೆ. ಇದರಿಂದ ರೈಲ್ವೆ ಇಲಾಖೆಯ ಲಾಜಿಸ್ಟಿಕ್ ವ್ಯವಸ್ಥೆ ಇನ್ನಷ್ಟು ವಿಸ್ತಾರವಾಗಲಿದೆ. ಇನ್ನೂ ಯಲಂಹಕ-ದೇವನಹಳ್ಳಿ ಮಾರ್ಗವಾಗಿ ಟ್ರ್ಯಾಕ್ ಡಬಲಿಂಗ್‌ನಿಂದ ಮೆಮು ರೈಲು ಸಂಚಾರ ಹೆಚ್ಚಾಗಲಿದ್ದು, ಇದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವವರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಯಲಹಂಕ-ದೇವನಹಳ್ಳಿ ಹಾಗೂ ದೇವನಹಳ್ಳಿ- ಕೋಲಾರ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಡಬಲಿಂಗ್‌ಗೆ ಕುರಿತು ಸರ್ವೇ ಕಾರ್ಯಕ್ಕೆ ಅನುದಾನ ಮಂಜೂರಾಗಿದೆ. ಟ್ರ್ಯಾಕ್ ಡಬಲಿಂಗ್‌ನಿಂದಾಗಿ 2 ಮಾರ್ಗದ ರೈಲುಗಳ ಸಂಚಾರ ಹೆಚ್ಚಿಸಬಹುದಾಗಿದೆ. ಇನ್ನೂ ಕೋಲಾರದ ರೈತರಿಗೆ ತಮ್ಮ ಬೆಳೆಯನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಲು ಅನುಕೂಲವಾಗಲಿದೆ. ● ಕುಸುಮಾ ಹರಿಪ್ರಸಾದ್, ನೈಋತ್ಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕಿ
-ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.