ಬಹು ಮಾದರಿ ಸಂಚಾರಕ್ಕೆ ಕಾಲ ಸನ್ನಿಹಿತ
ಬಿಎಂಆರ್‌ಸಿಎಲ್-ನೈರುತ್ಯ ರೈಲ್ವೆಒಪ್ಪಂದ 2022ಕ್ಕೆ ಈ ಸೌಲಭ್ಯ ಜನರಿಗೆ ಲಭ್ಯ
Team Udayavani, Oct 22, 2020, 12:13 PM IST
ಬೆಂಗಳೂರು: “ನಮ್ಮ ಮೆಟ್ರೋ’ ಮತ್ತು ರೈಲ್ವೆ ಹಾಗೂ ಬಸ್ ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಯಶವಂತಪುರ “ಬಹುಮಾದರಿ ಸಂಚಾರ ವ್ಯವಸ್ಥೆ’ಗೆ ಕೊನೆಗೂ ಕಾಲ ಸನ್ನಿಹಿತವಾಗಿದ್ದು, 2022ಕ್ಕೆ ಈ ಸೌಲಭ್ಯ ಜನರಿಗೆ ಲಭ್ಯವಾಗಲಿದೆ.
ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ಹಾಗೂ ನೈರುತ್ಯ ರೈಲ್ವೆ ಬುಧವಾರ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ರೈಲು, ಮೆಟ್ರೋ ಮತ್ತು ಬಸ್ ಮೂರು ವರ್ಗದ ಪ್ರಯಾಣಿಕರು ಹಾಗೂ ಪಾದ ಚಾರಿಗಳಿಗೆ ಅನುಕೂಲ ಆಗಲಿದೆ. ನಗರದಲ್ಲಿ ಒಟ್ಟಾರೆ ಎಂಟು ಈ ಮಾದರಿಯ ವ್ಯವಸ್ಥೆಗಳನ್ನು ಕಲ್ಪಿಸುವ ಗುರಿ ಇದ್ದು, ಆ ಪೈಕಿ ಅತಿ ದೊಡ್ಡ ಬಹುಮಾದರಿ ಸಂಚಾರ ಸೌಲಭ್ಯ ಇದಾಗಿದೆ. ಯಶವಂತಪುರ ಪ್ರದೇಶವು ನಗರದ ಪ್ರಮುಖಕೈಗಾರಿಕೆ,ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮಧ್ಯೆ ಇದ್ದು, ನೈರುತ್ಯರೈಲ್ವೆಗೆ ಇದುಅತ್ಯಂತ ಪ್ರಮುಖಟರ್ಮಿನಲ್‌ಕೂಡಆಗಿದೆ. ಪ್ರಯಾಣಿಕರು ಈ ಎರಡೂ ನಿಲ್ದಾಣಗಳ ನಡುವೆ ಹೆಚ್ಚಿನ ಸಂಖ್ಯೆಯಲ್ಲಿಪ್ರಯಾಣಿಸುತ್ತಿದ್ದು,ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸಲು ಈ ಒಪ್ಪಂದದಡಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಒಪ್ಪಂದದ ಅನ್ವಯ ಈ ನಿಲ್ದಾಣಗಳ ನಡುವೆ 82 ಮೀ. ಉದ್ದದ ಹೊಸ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ನೈರುತ್ಯ ರೈಲ್ವೆ ಪ್ಲಾಟ್‌ಫಾರಂ ಮತ್ತು ಮೆಟ್ರೋ ನಿಲ್ದಾಣದ ಒಳಗೆ ನೇರವಾಗಿ ತಲುಪಲು ಮತ್ತೂಂದು ಮೇಲ್ಸೇತುವೆ ನಿರ್ಮಾಣವು ಸೇರಿದಂತೆ, ಉಭಯ ನಿಲ್ದಾಣಗಳ ನಡುವೆ ತಡೆರಹಿತ ಸಂಚಾರಕ್ಕಾಗಿ ಹಲವು ಕಾಮಗಾರಿಗಳನ್ನು ಉಭಯ ಸಂಸ್ಥೆಗಳು ಕೈಗೆತ್ತಿಕೊಳ್ಳಲಿವೆ.
ಹೈದರಾಬಾದ್ ಸಂಸ್ಥೆಗೆ ಗುತ್ತಿಗೆ: ಪಾದಚಾರಿ ಮೇಲ್ಸೇತುವೆ ಮತ್ತು ವಾಹನ ನಿಲುಗಡೆ ಸೌಲಭ್ಯಗಳ ವಿನ್ಯಾಸದ ಗುತ್ತಿಗೆ ಯನ್ನು ಹೈದರಾಬಾದ್ನ ಆರ್ವಿ ಸಂಸ್ಥೆಗೆ ಬಿಎಂಆರ್‌ಸಿಎಲ್ ನೀಡಿದೆ. ನೈರುತ್ಯ ರೈಲ್ವೆಯು ಈಗಾಗಲೇ ಇತರೆ ಸೌಲಭ್ಯಗಳ ನಿರ್ಮಾಣ ಕಾರ್ಯವನ್ನುಕೈಗೆತ್ತಿಕೊಂಡಿದೆ. “ಯಶವಂತಪುರ ರೈಲು ನಿಲ್ದಾಣದಿಂದ ಮೆಟ್ರೋ ನಡುವೆ ಪಾದಚಾರಿ ಎತ್ತರಿಸಿದ ಮಾರ್ಗವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು. ಇದರಿಂದ ಪ್ರಯಾಣಿಕರಿಗೆ ಅನುಕೂಲ ಆಗುವುದರ ಜತೆಗೆ ಹೆಚ್ಚು ಜನರನ್ನೂ ಆಕರ್ಷಿಸಲಿದೆ. ನಂತರದಲ್ಲಿ ಹಳೆಯ ಯಶವಂತಪುರದಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸಬೇಕು’ ಎಂಬುದು ರೈಲ್ವೆ ಹೋರಾಟಗಾರರ ಒತ್ತಾಯ.
ಸೋಪ್ ಫ್ಯಾಕ್ಟರಿ-ಟಿಟಿಎಂಸಿ ಮಧ್ಯೆ ಮೇಲ್ಸೇತುವೆ : ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಿಂದ ಯಶವಂತಪುರದ ಬಿಎಂಟಿಸಿ ನಿಲ್ದಾಣದವರೆಗೆ 1,500 ಮೀಟರ್ ಉದ್ದದ ಪಾದಚಾರಿ ಮೇಲ್ಸೇತುವೆ ತಲೆಯೆತ್ತಲಿದೆ. ಇಲ್ಲಿಂದ ಭಾರತೀಯ ವಿಜ್ಞಾನ ಸಂಸ್ಥೆಯವರೆಗೆ (ಐಐಎಸ್ಸಿ) ಸಂಪರ್ಕ ಕಲ್ಪಿಸುವಉದ್ದೇಶವಿದೆ. ಈ ಮೇಲ್ಸೇತುವೆಯ ವಿನ್ಯಾಸದ ಗುತ್ತಿಗೆಯನ್ನೂ ಆರ್‌ವಿ ಅಸೋಸಿಯೇಟ್ಸ್ ಗೆ ನೀಡಲಾಗಿದೆ.
ಬರಲಿರುವ ಸೌಲಭ್ಯ :
- ನೈರುತ್ಯ ರೈಲ್ವೆ ಪಾದಚಾರಿ ಮೇಲ್ಸೇತುವೆಯಿಂದ ಮೆಟ್ರೋ ನಿಲ್ದಾಣದ ಒಳಗಿನವರೆಗೆ 82 ಮೀಟರ್ ಉದ್ದದ ಮೇಲ್ಸೇತುವೆ.
- ರೈಲ್ವೆ ನಿಲ್ದಾಣದ ಪಶ್ಚಿಮ ಭಾಗದಿಂದ ಪೂರ್ವ ಭಾಗಕ್ಕೆ 230 ಮೀಟರ್ ಉದ್ದದ ಹೊಸ ಪಾದಚಾರಿ ಮೇಲ್ಸೇತುವೆ
- ಮೆಟ್ರೋ ನಿಲ್ದಾಣದ ವಾಯವ್ಯ ಭಾಗದಿಂದ ರೈಲ್ವೆ ನಿಲ್ದಾಣಕ್ಕೆ ರಸ್ತೆಯಿಂದ ಪ್ರವೇಶ ಸೌಲಭ್ಯ.
- ಬೆಂಗಳೂರು-ತುಮಕೂರು ರಸ್ತೆಯಿಂದ ರೈಲ್ವೆ ನಿಲ್ದಾಣವನ್ನು ಮೆಟ್ರೋ ನಿಲ್ದಾಣದ ಮಧ್ಯ ಭಾಗದಿಂದಲೇ ತಲುಪಲು ಅವಕಾಶ ಕಲ್ಪಿಸಲಾಗುತ್ತದೆ.
- ತುಮಕೂರು-ಬೆಂಗಳೂರು ರಸ್ತೆಯ ನೈರುತ್ಯ ಮೂಲೆಯಲ್ಲಿ ಬಿಎಂಟಿಸಿ ಬಸ್‌ಗಳ ನಿಲುಗಡೆಗೆ ಅವಕಾಶ.
- ಆಟೋ ನಿಲ್ದಾಣ ಸಾಮರ್ಥ್ಯ ವಿಸ್ತರಣೆ.
- ಕಾರು, ಟ್ಯಾಕ್ಸಿ, ಆಟೊಗಳಿಗೆ ಪಿಕ್ ಅಪ್-ಡ್ರಾಪ್ ಸ್ಥಳಗಳು ಬೈಸಿಕಲ್ ಮತ್ತು ದ್ವಿಚಕ್ರ ಬಾಡಿಗೆ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ.
- ನಿಲ್ದಾಣಗಳ ಮುಂದಿನ ಖಾಲಿ ಜಾಗದ ಸೌಂದರ್ಯಿಕರಣಕ್ಕೆ ಒತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.