ಮನೆ ಕನ್ನಕ್ಕಾಗಿ ರೆಫೆರ್‌ ಹೌಸ್‌ ಮೇಡ್ಸ್‌  ಗ್ರೂಪ್‌ ; ಮುಂಬೈ ವುಮೆನ್ಸ್‌ ಗ್ಯಾಂಗ್‌ ಸೆರೆ

ಕೆಲಸಕ್ಕೆ ಸೇರಿದ ಮೂರೇ ದಿನದಲ್ಲಿ ಕೈಚಳಕ ತೋರಿದ ಕಳ್ಳಿಯರು

Team Udayavani, Jul 12, 2022, 2:59 PM IST

ಮನೆ ಕನ್ನಕ್ಕಾಗಿ ರೆಫೆರ್‌ ಹೌಸ್‌ ಮೇಡ್ಸ್‌  ಗ್ರೂಪ್‌ ; ಮುಂಬೈ ವುಮೆನ್ಸ್‌ ಗ್ಯಾಂಗ್‌ ಸೆರೆ

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಮನೆ ಕೆಲಸದವರು ಲಭ್ಯವಿದ್ದಾರೆ ಎಂದು “ಪಬ್ಲಿಕ್‌ ಗ್ರೂಪ್‌’ ತೆರೆದು ಮನೆ ಕೆಲಸದ ಸೋಗಿನಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಮುಂಬೈ ಮೂಲದ ನಟೋರಿಯಲ್‌ “ವುಮೆನ್ಸ್‌ ಗ್ಯಾಂಗ್‌’ ಬೆಂಗಳೂರು ನಗರ ಪೊಲೀಸರ ಬಲೆಗೆ ಬಿದ್ದಿದೆ.

ಮುಂಬೈ ನಿವಾಸಿಗಳಾದ ಪ್ರಿಯಾಂಕಾ ರಾಜೇಶ್‌ ಮೊಗ್ರೆ (29), ಮಹಾದೇವಿ (26) ಹಾಗೂ ನವ ಮುಂಬೈ ನಿವಾಸಿ ವನಿತಾ ಗಾಯ್ಕವಾಡ್‌ (37) ಬಂಧಿತರು. ಅವರಿಂದ 250 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಮಹಾದೇವಿ, ಹೆಣ್ಣೂರಿನ ಅರವಿಂದ ಎಂಬುವರ ಮನೆ ಯಲ್ಲಿ ಮನೆಗೆಲಸಕ್ಕೆ ಸೇರಿದ್ದಳು. ಕೆಲಸಕ್ಕೆ ಸೇರಿದ ಮೂರೇ ದಿನಕ್ಕೆ ಮನೆಯಲ್ಲಿ ಯಾರು ಇಲ್ಲದ ವೇಳೆ ಚಿನ್ನಾಭರಣ ದೋಚಿ ಪರಾರಿ ಯಾಗಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪಬ್ಲಿಕ್‌ ಗ್ರೂಪ್‌ ಹೆಸರಿನಲ್ಲಿ ವಂಚನೆ: ಮೂವರು ಫೇಸ್‌ಬುಕ್‌ನಲ್ಲಿ “ರೆಫೆರ್‌ ಹೌಸ್‌ ಮೇಡ್ಸ್‌’ ಎಂಬ ಪಬ್ಲಿಕ್‌ ಗ್ರೂಪ್‌ ಖಾತೆ ತೆರೆದು ಅದರಲ್ಲ ನಕಲಿ ಖಾತೆಗಳನ್ನು ತೆರೆದು ಮನೆಗೆಲಸಕ್ಕೆ ಕೆಲಸಗಾರರು ಲಭ್ಯವಿದ್ದಾರೆ ಎಂದು ಪೋಸ್ಟ್‌ ಮಾಡುತ್ತಿದ್ದರು. ಅದನ್ನು ಕಂಡ ಮಾಲೀಕರು ಸಂಪರ್ಕಿಸಿದರೆ, ಕೆಲಸಕ್ಕೆ ಸೇರಿಕೊಂಡು ಕೆಲವೇ ದಿನಗಳಲ್ಲಿ ಮನೆ ಮಾಲೀಕರು ಇಲ್ಲದ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಕಳೆದ ಮೇ ತಿಂಗಳಲ್ಲಿ ದೂರುದಾರ ಅರವಿಂದ್‌ ಫೇಸ್‌ಬುಕ್‌ನಲ್ಲಿ ಮನೆಗೆಲಸದವರ ಜಾಹೀರಾತು ನೋಡಿ ಮಹಾದೇವಿಯನ್ನು ಸಂಪರ್ಕಿಸಿದ್ದರು. ಈ ವೇಳೆ ಆಕೆ ತನ್ನ ಹೆಸರು ಸುಬ್ಬಲಕ್ಷ್ಮೀ ದಕ್ಷಿಣ ಕನ್ನಡ ಜಿಲ್ಲೆಯವಳು ಎಂದು ಹೇಳಿಕೊಂಡು ನಕಲಿ ಆಧಾರ್‌ ಕಾರ್ಡ್‌ ತೋರಿಸಿ, ಮೇ 5ರಂದು ಅರವಿಂದ ಮನೆಗೆ ಕೆಲಸಕ್ಕೆ ಸೇರಿದ್ದಳು. ಮೇ 6ರಂದು ಅರವಿಂದ ಹಾಗೂ ಅವರ ಕುಟುಂಬ ಹೊರಗೆ ಹೋದಾಗ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಳು.

ಸೆಕ್ಯೂರಿ ಗಾರ್ಡ್‌ಗೆ ಹಣದ ಆಮಿಷ: ಮುಂಬೈನಲ್ಲಿ ಅಪಾರ್ಟ್‌ ಮೆಂಟ್‌, ಮನೆಗಳ ಸೆಕ್ಯೂರಿಗಾರ್ಡ್‌ಗಳನ್ನು ಪರಿಚಯಿಸಿಕೊಂಡು ಒಂದು ತಿಂಗಳ ವೇತನ ನೀಡುವುದಾಗಿ ಹಣದ ಆಮಿಷ ತೋರಿಸಿ ಮಾಲೀಕರ ಜತೆ ಮಾತನಾಡಿಸಿ ಕೆಲಸಕ್ಕೆ ಸೇರುತ್ತಿದ್ದರು. ಬಳಿಕ ಪೂರ್ವ ನಿರ್ಧರಿತ ಸಂಚಿನಂತೆ ಮನೆಯ ಮಾಲೀಕರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು. ಮುಂಬೈನಲ್ಲಿ ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ಸೆಕ್ಯೂರಿಗಾರ್ಡ್‌ಗಳ ಸಹಾಯದಿಂದ ಮನೆಗೆಲಸಕ್ಕೆ ಸೇರಿ ಕಳ್ಳತನ ಮಾಡಿದ್ದಾರೆ. ಬಳಿಕವೂ ಅವರಿಗೂ ಹಣ ಕೊಡದೆ ಪರಾರಿಯಾಗಿದ್ದಾರೆ ಎಂಬುದು ಪತ್ತೆಯಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ಹೇಳಿದರು.

ಬಾಣಸವಾಡಿ ಉಪವಿಭಾಗದ ಎಸಿಪಿ ನಿಂಗಪ್ಪ ಬಿ. ಸಕ್ರಿ ಮಾರ್ಗದರ್ಶನದಲ್ಲಿ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್‌ ಎಂ.ವಸಂತಕುಮಾರ್‌, ಪಿಎಸ್‌ಐ ನಿಂಗರಾಜ್‌, ಎಎಸ್‌ಐ ಆಸ್ಕರ್‌ ಮಿರ್ಜಾ, ಕಾನ್‌ಸ್ಟೇಬಲ್‌ ಗಳಾದ ಸಂತೋಷ್‌ ಲಮಾಣಿ, ಸವಿತಾ ಹಾಗೂ ಇತರರ ತಂಡ ಆರೋಪಿಗಳನ್ನು ಪತ್ತೆ ಹಚ್ಚಿದೆ. ಈ ಕಾರ್ಯಕ್ಕೆ ನಗರ ಪೊಲೀಸ್‌ ಆಯುಕ್ತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮೊಬೈಲ್‌ ನೀಡಿದ ಸುಳಿವು : ಆರೋಪಿಗಳು ಮುಂಬೈನಲ್ಲಿ ಮೊಬೈಲ್‌ ಕದ್ದು ಅದರ ಮೂಲಕವೇ ಫೇಸ್‌ಬುಕ್‌ನಲ್ಲಿ ಮನೆಗೆಲಸದವರು ಲಭ್ಯವಿದ್ದಾರೆ ಎಂದು ಟ್ಯಾಗ್‌ ಮಾಡುವಾಗ ಕದ್ದ ಮೊಬೈಲ್‌ ಸಂಖ್ಯೆಯನ್ನೇ ನೀಡಿದ್ದರು. ಪ್ರಕರಣದ ಬಳಿಕ ದೂರುದಾರರ ಮನೆ ಸಮೀಪದ ಸಿಸಿ ಕ್ಯಾಮೆರಾ ಶೋಧಿಸಿದಾಗ ಆರೋಪಿಗಳ ಚಹರೆ ಪತ್ತೆಯಾಗಿತ್ತು. ಬಳಿಕ ಮೊಬೈಲ್‌ ಸಂಖ್ಯೆ ಜಾಡು ಹಿಡಿದು ಮುಂಬೈಗೆ ತೆರಳಿ ಪರಿಶೀಲಿಸಿದಾಗ ಅದು ಕದ್ದಿರುವ ಮೊಬೈಲ್‌ ಎಂಬುದು ಗೊತ್ತಾಗಿದೆ.

ಬಳಿಕ ಸತತ ಒಂದು ತಿಂಗಳ ಕಾಲ ಮೊಬೈಲ್‌ ಕರೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನಟೋರಿಯಸ್‌ ಮುಂಬೈ ಗ್ಯಾಂಗ್‌ : ಮೂವರು ಆರೋಪಿಗಳು ವಿರುದ್ಧ ಮುಂಬೈನಲ್ಲಿ ಹತ್ತಾರು ಪ್ರಕರಣಗಳಿದ್ದು, ಜೈಲಿಗೂ ಹೋಗಿ ಜಾಮೀನು ಪಡೆದು ಬಂದಿದ್ದಾರೆ. ಆರೋಪಿಗಳ ಪೈಕಿ ವನಿತಾ ಗಾಯ್ಕವಾಡ್‌ ವಿರುದ್ಧವೇ ಮುಂಬೈನಲ್ಲಿ 37 ಪ್ರಕರಣಗಳಿದ್ದು, ಪ್ರಿಯಕರ ಜತೆ ಸೇರಿ ಮನೆ ಕಳವು ಮಾಡುತ್ತಿದ್ದಳು. ಉಳಿದ ಆರೋಪಿಗಳಾದ ಮಹಾದೇವಿ ಹಾಗೂ ಪ್ರಿಯಾಂಕಾ ವಿರುದ್ಧ ತಲಾ 14 ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ನಕಲಿ ಆಧಾರ್‌ ಕಾರ್ಡ್‌ ಸಿದ್ಧಪಡಿಸಿಕೊಂಡು ಬೇರೆ ಬೇರೆ ಹೆಸರಿನಲ್ಲಿ ಮನೆ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದರು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.

ಬೆಂಗಳೂರಿನಲ್ಲಿ ಫೇಸ್‌ಬುಕ್‌ ಬಳಕೆ : ವಿಶೇಷವೆಂದರೆ ಬೆಂಗಳೂರಿಗೆ ಬಂದಿದ್ದ ಮೂವರು ಮನೆ ಕಳವು ಮಾಡಲು ಫೇಸ್‌ಬುಕ್‌ ಅನ್ನು ವೇದಿಕೆಯಾಗಿ ಮಾಡಿಕೊಂಡಿದ್ದು, ಮನೆಕೆಲಸದವರು ಲಭ್ಯವಿದ್ದಾರೆ ಎಂದು ಪೋಸ್ಟ್‌ ಮಾಡುತ್ತಿದ್ದರು. ಅದನ್ನು ಕಂಡ ಮಾಲೀಕರು ಹೇಳಿದ ಮೊತ್ತಕ್ಕೆ ಕೆಲಸಕ್ಕೆ ಸೇರಿಕೊಂಡು ಕೆಲವೇ ದಿನಗಳಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಆರೋಪಿಗಳು ರೈಲಿನಲ್ಲಿ ಬೆಂಗಳೂರಿಗೆ ಬಂದು ಮೆಜೆಸ್ಟಿಕ್‌ನ ಲಾಡ್ಜ್ನಲ್ಲಿ ರೂಮ್‌ ಪಡೆದು ಮನೆಗಳ್ಳತನಕ್ಕೆ ಸಂಚು ರೂಪಿಸಿದ್ದರು. ಅದರಂತೆ ಅರವಿಂದ ಮನೆಯಲ್ಲಿ ಮಹಾದೇವಿ ಕಳ್ಳತನ ಮಾಡಿಕೊಂಡು ಹೊರಬಂದ ಬಳಿಕ ಮೂವರು ಮುಂಬೈಗೆ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.