ಪಾಲಿಕೆ ಬೋರ್‌ಗಳು ಜಲಮಂಡಳಿಗೆ
Team Udayavani, Mar 27, 2017, 12:18 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ಹಾಹಾಕಾರ ತಡೆಗಟ್ಟಲು ಬಿಬಿಎಂಪಿಯು ನಗರದ ಕೇಂದ್ರ ಭಾಗದಲ್ಲಿರುವ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ ಜಲಮಂಡಳಿಗೆ ಹಸ್ತಾಂತರಿಸಿದೆ. ಹೊರ ವಲಯದಲ್ಲಿರುವ ಪಾಲಿಕೆಯ ಕೊಳವೆ ಬಾವಿಗಳ ನಿರ್ವಹಣೆ ಹಾಗೂ ದುರಸ್ತಿ ಜವಾಬ್ದಾರಿಯನ್ನೂ ಜಲಮಂಡಳಿಗೇ ವಹಿಸಿದೆ.
ನಗರದಲ್ಲಿ ಬಿಬಿಎಂಪಿ ಒಡೆತನದ ಸುಮಾರು 12 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಆದರೆ, ಸಮರ್ಪಕ ನಿರ್ವಹಣೆಯಿಲ್ಲದ ಕಾರಣ ಬಹುತೇಕ ಹಾಳಾಗಿವೆ. ಬೇಸಿಗೆಯಲ್ಲಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪರ್ಯಾಯ ಕ್ರಮಗಳಿಗೆ ಮುಂದಾಗಿರುವ ಬಿಬಿಎಂಪಿ, ಕೇಂದ್ರ ಭಾಗದ ಕೊಳವೆ ಭಾವಿಗಳನ್ನು ದುರಸ್ತಿಗೊಳಿಸಿ ಜಲಮಂಡಳಿಗೆ ಹಸ್ತಾಂತರ ಮಾಡಿದೆ.
ಇದರೊಂದಿಗೆ ನಗರದ ಹೊರ ವಲಯದಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಯಿಂದ ನಿರ್ವಹಣೆ ಹಾಗೂ ದುರಸ್ತಿ ಮಾಡುವಂತೆ ಸೂಚಿಸಿದ್ದು, ಜಲಮಂಡಳಿ ಅದಕ್ಕೆ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ತನ್ನ ವಶದಲ್ಲಿರುವ ಎಲ್ಲ 12 ಸಾವಿರ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಒಪ್ಪಿಸಿದೆ. ವರ್ಷದ ಹಿಂದೆಯೇ ಕೊಳವೆ ಬಾವಿಗಳ ನಿರ್ವಹಣೆಯಲ್ಲಾಗುತ್ತಿರುವ ಲೋಪ ತಪ್ಪಿಸಲು ಎಲ್ಲ ಕೊಳವೆ ಬಾವಿಗಳನ್ನ ಜಲಮಂಡಳಿಗೆ ನೀಡಲು ತೀರ್ಮಾನಿಸಲಾಗಿತ್ತು.
ಆದರೆ, ಪಾಲಿಕೆ ವಶದಲ್ಲಿರುವ ಕೊಳವೆ ಬಾವಿಗಳ ನಿಖರ ಮಾಹಿತಿ ತಿಳಿಸದ ಕಾರಣ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿತ್ತು. ಜತೆಗೆ ಅವುಗಳ ನಿರ್ವಹಣೆ ಹಾಗೂ ದುರಸ್ತಿ ಸಂಬಂಧ ಸ್ಥಳೀಯ ಸಂಸ್ಥೆಗಳ ನಡುವೆ ಗೊಂದಲ ಏರ್ಪಟ್ಟಿತ್ತು. ಇದೀಗ ಗೊಂದಲ ಪರಿಹಾರವಾದ ಹಿನ್ನೆಲೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಒಟ್ಟಿಗೆ ಕಾರ್ಯನಿರ್ವಹಿಸಲು ಬಿಬಿಎಂಪಿ ಮತ್ತು ಬಿಡಿಎ ಮುಂದಾಗಿವೆ.
ನಗರದಲ್ಲಿವೆ 3 ಲಕ್ಷಕ್ಕೂ ಅಕ ಬೋರ್‌ವೆಲ್!: ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 3ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು, ಆ ಪೈಕಿ ಅಂದಾಜು 2.75 ಲಕ್ಷಕ್ಕಿಂತಲೂ ಹೆಚ್ಚು ಖಾಸಗಿ ಕೊಳವೆ ಬಾವಿಗಳಿವೆ. ಜಲಮಂಡಳಿ ಮತ್ತು ಬಿಬಿಎಂಪಿ ನಿರ್ವಹಣೆಯಲ್ಲಿರುವ ಕೊಳವೆ ಬಾವಿಗಳನ್ನು ಸಾರ್ವಜನಿಕರು, ಉದ್ಯಾನಗಳಿಗೆ ನೀರು ಪೂರೈಕೆ ಮಾಡಲು ಬಳಸಲಾಗುತ್ತಿದೆ. ಸದ್ಯ ಬಿಬಿಎಂಪಿಯ 12 ಸಾವಿರ ಕೊಳವೆ ಬಾವಿಯನ್ನು ಜಲಮಂಡಳಿಗೆ ವಹಿಸಲಾಗಿದ್ದು, ಆ ಕೊಳವೆ ಬಾವಿಯ ಮೋಟಾರು ದುರಸ್ತಿ ಸೇರಿ ಇನ್ನಿತರ ಕಾರ್ಯಗಳನ್ನು ಮಾಡಿ ಜನರಿಗೆ ನೀರು ಒದಗಿಸಲು ಜಲಮಂಡಳಿ ಸಿದ್ಧತೆ ನಡೆಸಿದೆ.
ವಿದ್ಯುತ್ ಬಿಲ್ ಮನ್ನಾ ಮಾಡಿ: ಪಾಲಿಕೆಯ 12 ಸಾವಿರ ಕೊಳವೆಬಾವಿಗಳಿಂದ ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚಿನ ವಿದ್ಯುತ್ ಬಿಲ್ ಅನ್ನು ಬಿಬಿಎಂಪಿ ಬೆಸ್ಕಾಂಗೆ ಪಾವತಿಸಬೇಕಿದೆ. ಬಿಬಿಎಂಪಿ ಕೊಳವೆ ಬಾವಿಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಕೆ ಮಾಡುವ ಸಲುವಾಗಿ ವಿದ್ಯುತ್ ಬಿಲ್ ಮನ್ನಾ ಮಾಡಲು ಬೆಸ್ಕಾಂಗೆ ಸೂಚಿಸುವಂತೆ ಬೆಂಗಳೂರು ನಗರಾಭಿವೃದ್ ಸಚಿವರಿಗೆ ಬಿಬಿಎಂಪಿ ಮನವಿ ಮಾಡಿದೆ. ಸಚಿವರು ಬೆಸ್ಕಾಂ ಅಕಾರಿಗಳೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ್ದು, ಬಾಕಿ ಮನ್ನಾ ಆಗುವ ಸಾಧ್ಯತೆಯಿದೆ ಎಂದು ಪಾಲಿಕೆಯ ಅಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ನೀರಿಗಾಗಿ ಅನುದಾನ ಮೀಸಲು
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಉಂಟಾಗುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಕುಡಿಯುವ ನೀರು ಒದಗಿಸಲು ಬಜೆಟ್‌ನಲ್ಲಿ ಹಳೆ ವಾರ್ಡ್‌ಗಳಿಗೆ ತಲಾ 15 ಲಕ್ಷ ರೂ. ಮತ್ತು ಹೊಸ ವಾರ್ಡ್‌ಗಳಿಗೆ ತಲಾ 40 ಲಕ್ಷ ರೂ.ನಂತೆ ಅನುದಾನ ಮೀಸಲಿಟ್ಟಿದ್ದು, ಅಗತ್ಯ ಬಿದ್ದರೆ ಮೇಯರ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವರ ನಿಯಿಂದ ಕುಡಿಯುವ ನೀರಿಗೆ ಅನುದಾನ ನೀಡಲು ಯೋಜನೆ ರೂಪಿಸಲಾಗಿದೆ.
ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಪಾಲಿಕೆಯಲ್ಲಿರುವ ಕೊಳವೆ ಬಾವಿಗಳನ್ನು ಜಲಮಂಡಳಿಗೆ ಹಸ್ತಾಂತರಿಸಲಾಗಿದೆ. ಕೇಂದ್ರ ಭಾಗದಲ್ಲಿದ್ದ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ ಜಲಮಂಡಳಿಗೆ ನೀಡಲಾಗಿದ್ದು, ಹೊರವಲಯದಲ್ಲಿನ ಕೊಳವೆ ಬಾವಿಗಳ ನಿರ್ವಹಣೆಯನ್ನು ಜಲಮಂಡಳಿ ವಹಿಸಿಕೊಂಡಿದೆ. ಇದರೊಂದಿಗೆ ವಿದ್ಯುತ್ ಬಿಲ್ ಮನ್ನಾ ಮಾಡುವಂತೆಯೂ ಸಚಿವರನ್ನು ಕೋರಲಾಗಿದೆ.
-ಜಿ.ಪದ್ಮಾವತಿ, ಮೇಯರ್
* ವೆಂ.ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.