ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರ್ತೇವೆ …
Team Udayavani, Apr 27, 2018, 6:00 AM IST
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಬೇರು ಭದ್ರವಾಗಿ ಬೇರೂರಿದ್ದು ಪ್ರಧಾನಿ ನರೇಂದ್ರಮೋದಿ ಅಲೆ ಹಾಗೂ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಕಾರ್ಯಕರ್ತರು- ಮುಖಂಡರ ಶ್ರಮದಿಂದ ಈ ಬಾರಿ ನಿಶ್ಚಿಚಿತವಾಗಿಯೂ ಗುರಿ ತಲಪಲಿದ್ದೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷದ ಹಿಂದೆಯೇ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡು ಚುನಾವಣಾ ಸಿದ್ಧತೆ, ಕಾರ್ಯತಂತ್ರ, 224 ಕ್ಷೇತ್ರಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಮುರಳೀಧರ್‌ರಾವ್ “ಉದಯವಾಣಿ’ಗೆ ನೀಡಿರುವ ಸಂದರ್ಶನದಲ್ಲಿ, ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ತೀವ್ರವಾಗಿದ್ದು ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಟಿಕೆಟ್ ಹಂಚಿಕೆಯ ನಂತರ ಬಿಜೆಪಿ ಸ್ಥಿತಿ ಹೇಗಿದೆ?
ತುಂಬಾ ಚೆನ್ನಾಗಿದೆ. ಆದೇ ವಿಶ್ವಾಸದಲ್ಲೇ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳುತ್ತಿದ್ದೇನೆ.
ಟಿಕೆಟ್ ಹಂಚಿಕೆಯಲ್ಲಿ ಬಂಡಾಯ ಹೆಚ್ಚಾಯಿತಲ್ಲಾ?
ಕಾಂಗ್ರೆಸ್‌ಗೆ ಹೋಲಿಸಿದರೆ ನಮ್ಮ ಬಂಡಾಯ ಹೆಚ್ಚೇನಲ್ಲ. ಈಗಾಗಲೇ ಬಹುತೇಕ ಕಡೆ ಟಿಕೆಟ್ ಸಿಗದೆ ಅಸಮಾಧಾನ
ಗೊಂಡಿರುವವರನ್ನು ಸಮಾಧಾನ ಮಾಡಿದ್ದೇವೆ.
ರೇವುನಾಯಕ್ ಬೆಳಮಗಿ, ಎಸ್.ಕೆ.ಬೆಳ್ಳುಬ್ಬಿಯಂತಹ ನಾಯಕರು ಪಕ್ಷ ಬಿಟ್ಟರಲ್ಲ?
ಮಾಲೀಕಯ್ಯ ಗುತ್ತೇದಾರ್, ಮಲ್ಲಿಕಾರ್ಜುನ ಖೂಬಾ, ಮಾನಪ್ಪ ವಜ್ಜಲ್, ಶಿವರಾಜ್ ಪಾಟೀಲ್, ಎ.ಎಸ್.ಪಾಟೀಲ್ ನಡಹಳ್ಳಿ ಇವರೆಲ್ಲಾ ಬಂದಿದ್ದು ಯಾಕೆ ನೀವು ಹೇಳಲ್ಲ
ಹಾಗಾದರೆ ನಿಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇತ್ತಾ?
ಇಲ್ಲಿ ಕೊರತೆ ಎಂಬ ಪ್ರಶ್ನೆ ಬರುವುದಿಲ್ಲ. ಚುನಾವಣೆ ಎಂದರೆ ಕಾರ್ಯತಂತ್ರ. ಎಲ್ಲರೂ ಗೆಲ್ಲುವ ಮಾನದಂಡ ಇಟ್ಟುಕೊಂಡೇ ಇರುತ್ತಾರೆ. ಹಾಗೆಂದು ಸಾರಾಸಗಟಾಗಿ ಬಂದವರಿಗೆಲ್ಲಾ ಸ್ವಾಗತ ಕೋರಿಲ್ಲ. ಒಂದು ಮಾತು ನೆನಪಿಡಿ ಬಿಜೆಪಿ ಸೇರಲು ಬಯಸಿದ್ದವರ ಪಟ್ಟಿ ದೊಡ್ಡದಿತ್ತು.
ಬಂಡಾಯದಿಂದ ಬಿಜೆಪಿಗೆ ನಷ್ಟವೇ ಆಗಿಲ್ಲವಾ?
ಆಗಿದೆ. ಆದರೆ ಗುರಿ ತಲುಪಲು ಅಡ್ಡಿಯಾಗುವಷ್ಟಲ್ಲ, ನಮ್ಮಿಂದ ಬೇರೆ ಪಕ್ಷಕ್ಕೆ ಹೋದವರಿಗಿಂತ ಬೇರೆ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಸಿದ್ಧಾಂತ, ಮೋದಿ ಹಾಗೂ ಯಡಿಯೂರಪ್ಪ ನಾಯಕತ್ವ ಒಪ್ಪಿ ಬಂದಿರುವವರು ಹೆಚ್ಚಾಗಿದ್ದಾರೆ. ಹೀಗಾಗಿ, ಬಂಡಾಯ ತಾತ್ಕಾಲಿಕ. ನಮ್ಮದು ಕೇಡರ್ ಬೇಸ್ಡ್ ಪಕ್ಷ. ಪಕ್ಷ ಬಿಟ್ಟವರೊಂದಿಗೆ ಬಿಜೆಪಿಯ ಕಾರ್ಯಕರ್ತರು ಹಾಗೂ ಮತಗಳು ವರ್ಗಾವಣೆಯಾಗುವುದಿಲ್ಲ.
ಕರ್ನಾಟಕದಲ್ಲಿ ನಿಮ್ಮ ನೇರ ಸ್ಪರ್ಧಿ ಯಾರು?
ಶೇಕಡ 100 ಕ್ಕೆ 100 ರಷ್ಟು ಕಾಂಗ್ರೆಸ್.
ಹಾಗಾದರೆ ಜೆಡಿಎಸ್ ಬಗ್ಗೆ ಮೃಧು ಧೋರಣೆಯೇ?
ಹಾಗೇನಿಲ್ಲ. ಕಾಂಗ್ರೆಸ್ ಇಲ್ಲಿ ಐದು ವರ್ಷ ಆಡಳಿತ ನಡೆಸಿ ಭ್ರಷ್ಟಾಚಾರ, ಹಗರಣ, ಕಾನೂನು ಸುವ್ಯವಸ್ಥೆಯಲ್ಲಿ ವೈಫಲ್ಯ, ಅತ್ಯಾಚಾರ, ಕೊಲೆ, ಗೂಂಡಾಗಿರಿ ಸೇರಿ ಅಪರಾಧ ಪ್ರಕರಣಗಳ ಹೆಚ್ಚಳವಾಗುವಂತೆ ಮಾಡಿದೆ. ನಾವು ಇನ್ಯಾರ ವಿರುದ್ಧ ಹೋರಾಟ ಮಾಡಬೇಕು. ದೇಶವ್ಯಾಪಿ ನಾವು ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ.
ನೀವು ಭ್ರಷ್ಟಾಚಾರದ ಬಗ್ಗೆ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದೀರಿ. ಆದರೆ, ಅವೆಲ್ಲವೂ ನಿರಾಧಾರ ಎಂದು ಕಾಂಗ್ರೆಸ್ ಹೇಳುತ್ತಿದೆಯಲ್ಲಾ?
ಹೇಳಲಿ. ನಾವು ದಾಖಲೆ ಸಮೇತ ಇವರ ವೈಫಲ್ಯ ಜನರ ಮುಂದಿಡುತ್ತಿದ್ದೇವೆ. ಇವರು ಅದು ಸುಳ್ಳು ಎಂಬುದನ್ನು ಸಾಬೀತುಪಡಿಸಲಿ. ಅದು ಬಿಟ್ಟು ಪ್ರಧಾನಿ ನರೇಂದ್ರಮೋದಿ ಉತ್ತರದಿಂದ ಆಮದು ಮಾಡಿಕೊಂಡಿದ್ದೀರಿ, ಗುಜರಾತ್‌ನಲ್ಲೇನಾಗಿದೆ, ಉತ್ತರಪ್ರದೇಶದಲ್ಲೇನಾಗಿದೆ ಎಂದು ವಿಷಯಾಂತರ ಮಾಡುವುದು ಯಾಕೆ? ಕಾಂಗ್ರೆಸ್‌ನವರಿಗೆ ಬಿಜೆಪಿ ವಿರುದ್ಧ ಮಾತನಾಡಲು ವಿಷಯಗಳೇ ಇಲ್ಲ.
ನೀವು ಕಾಂಗ್ರೆಸ್‌ಗಿಂತ ಹೆಚ್ಚಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದೀರಲ್ಲಾ?
ಸಹಜ. ಕಾಂಗ್ರೆಸ್ ನೇತೃತ್ವದ ಸರ್ಕಾರದ ನಾಯಕತ್ವ ವಹಿಸಿರುವವವರು ಸಿದ್ದರಾಮಯ್ಯ. ಅವರೇ ಉತ್ತರಿಸಬೇಕಲ್ಲವೇ? ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಪ್ರತಿಯೊಂದಕ್ಕೂ ನರೇಂದ್ರಮೋದಿ ಹೆಸರು ಪ್ರಸ್ತಾಪಿಸುವುದಿಲ್ಲವೇ?
ಗಣಿ ಹಗರಣದ ಆರೋಪ ಹೊತ್ತ ಜನಾರ್ಧನರೆಡ್ಡಿ ಅವರು ಬಿಜೆಪಿ ಪರ ಪ್ರಚಾರ ಮಾಡುವುದರಿಂದ ಮುಜುಗರ ಆಗುವುದಿಲ್ಲವೇ?
ನೋಡಿ, ಪದೇ ಪದೇ ನೀವು ಅದೇ ಪ್ರಶ್ನೆ ಕೇಳುತ್ತೀರಿ. ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ರೆಡ್ಡಿ ಇದ್ದಾರಾ? ಶ್ರೀರಾಮುಲು ಅವರ ಸ್ನೇಹಿತ, ಆ ಕಾರಣಕ್ಕೆ ಅವರ ಪರ ಪ್ರಚಾರ ಮಾಡಬಹುದು. ಅದಕ್ಕೂ ನಮಗೂ ಏನು ಸಂಬಂಧ.
ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಯಾಕೆ ನಿರಾಕರಿಸಲಾಯಿತು?
ಈಗಾಗಲೇ ಯಡಿಯೂರಪ್ಪ ಅವರು ಈ ಬಗ್ಗೆ ಹೇಳಿದ್ದಾರಲ್ಲಾ. ವಿಜಯೇಂದ್ರ ಅವರು ಹೇಳಿದ್ದಾರೆ. ನಮ್ಮದು ಕುಟುಂಬ ರಾಜಕಾರಣ ವಿರೋಧಿಸುವ ಪಕ್ಷ. ಹೀಗಾಗಿ, ಕೆಲವೊಂದು ತೀರ್ಮಾನ ಕೈಗೊಂಡಿದ್ದೇವೆ.
ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆಯಲ್ಲಾ?
ನಾವು ಕಾಂಗ್ರೆಸ್ ಅನ್ನು ಕೇಳಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ, ಯಡಿಯೂರಪ್ಪ ಐದು ವರ್ಷ ಪೂರ್ತಿ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ.
ಮಿಷನ್ 150 ಗುರಿ ತಲುಪುತ್ತೀರಾ?
ಕರ್ನಾಟಕದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕಂತೂ ಬರುತ್ತೇವೆ. ಸ್ವಂತ ಕ್ಷೇತ್ರ ಗೆಲ್ಲಲಾಗದ ಸಿದ್ದರಾಮಯ್ಯ ಬಾದಾಮಿಗೆ ಹೋಗಿದ್ದಾರೆ. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಎಲ್ಲಿ ಬರುತ್ತೆ.
ಶ್ರೀರಾಮುಲು ಸಹ ಬಳ್ಳಾರಿ ಗ್ರಾಮಾಂತರ ಬಿಟ್ಟು ಮೊಳಕಾಳೂ¾ರಿಗೆ ಹೋದರಲ್ಲ?
ಶ್ರೀರಾಮುಲು ಜನನಾಯಕ. ಅವರು ಅಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಪಕ್ಷದ ನಿರ್ಧಾರ. ಅದಕ್ಕೆ ಅವರು ತಲೆಬಾಗಿದ್ದಾರೆ.
ಬಾದಾಮಿಯಲ್ಲಿ ಶ್ರೀರಾಮುಲು “ಹರಕೆಯ ಕುರಿ’ಯಾ?
ಒಬ್ಬ ಮುಖ್ಯಮಂತ್ರಿ ವಿರುದ್ಧ ನಾವು ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದ್ದೇವೆ ಎಂದರೆ ಅವರ ಸಾಮರ್ಥ್ಯ ಅರ್ಥಮಾಡಿಕೊಳ್ಳಿ. ಶ್ರೀರಾಮುಲು ಬಿಜೆಪಿಯ ವರ್ಚಸ್ವಿ ನಾಯಕ.
ಸಿದ್ದರಾಮಯ್ಯ ಅವರದು ಟೂ ಪ್ಲಸ್ ಒನ್ ಫಾರ್ಮುಲಾ
ವಿಜಯೇಂದ್ರಗೆ ಟಿಕೆಟ್ ವಿಚಾರದಲ್ಲಿ ನೀವು ಹತ್ತು ದಿನಗಳ ಹಿಂದೆಯೇ ಕಾದು ನೋಡಿ ಎಂದು ಹೇಳಿದ್ದಿರಿ?
ಹೌದು, ಯಾಕೆಂದರೆ ಪಕ್ಷದ ತೀರ್ಮಾನ ನನಗೆ ಗೊತ್ತಿತ್ತು. ನಮ್ಮದು ಒನ್ಲಿ ಒನ್ ಫಾರ್ಮುಲಾ, ಸಿದ್ದರಾಮಯ್ಯ ಅವರದು ಟೂ ಪ್ಲಸ್ ಒನ್ ಫಾರ್ಮುಲಾ. ನಮಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಅತಿ ಮುಖ್ಯ ವಿಚಾರ.
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.