ನನ್ನ ಮಗಳು ಸಿಂಹ ಇದ್ದಂತೆ
ರಾಗಿಣಿ ತಾಯಿ ರೋಹಿಣಿ ಆತ್ಮವಿಶ್ವಾಸ
Team Udayavani, Sep 16, 2020, 12:32 PM IST
ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟಿ ರಾಗಿಣಿ ಭೇಟಿಯಾಗಲು ಆಗಮಿಸಿದ ಆಕೆಯ ಪೋಷಕರು ನಿರಾಸೆಯಿಂದ ವಾಪಸ್ ತೆರಳಿದ್ದಾರೆ.ಬುಧವಾರ ಮಧ್ಯಾಹ್ನ ಪೋಷಕರು ತಮ್ಮ ಪರ ವಕೀಲರ ಜತೆ ಆಗಮಿಸಿ ಪುತ್ರಿಯ ಭೇಟಿಗೆ ಅವಕಾಶ ನೀಡುವಂತೆ ಕೋರಿದರು.ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಯಾವ ಖೈದಿಗಳ ಪೋಷಕರು, ಸಂಬಂಧಿಕರಿಗೆ ಅವಕಾಶವಿಲ್ಲ ಎಂದು ಜೈಲಿನ ಅಧಿಕಾರಿಗಳು ಸೂಚಿಸಿದರು.
ಹೀಗಾಗಿ ನಿರಾಸೆಯಲ್ಲಿಯೇ ಮನೆಗೆ ಹೊರಟ ಪೋಷಕರು ಪುತ್ರಿಯ ಸ್ಥಿತಿಗೆ ಕಾರಣವಾದವರ ಬಗ್ಗೆ ಆಕ್ರೋಶಗೊಂಡರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತಾಯಿ ರೋಹಿಣಿ, “ಆಕೆ ಹೆಣ್ಣು ಸಿಂಹ- ಇದ್ದಂತೆ. ನಾವು ಯಾವು ದಕ್ಕೂ ಹೆದರುವುದಿಲ್ಲ. ನನ್ನ ಮಗಳು ಹತ್ತು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿದ್ದಾಳೆ. ಮಾಧ್ಯಮಗಳಲ್ಲಿ ತಪ್ಪುಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆಕೆ ಆರೋಪ ಮುಕ್ತಳಾಗಿ ಬರುತ್ತಾಳೆ. ಆಗ ನಿಮ್ಮ ಮಾಧ್ಯಮಗಳಲ್ಲಿಯೇ ಉತ್ತರ ನೀಡಲಿದ್ದಾಳೆ. “ನಮ್ಮ ಬಳಿ ಇರುವುದು ಒಂದೇ ಫ್ಲ್ಯಾಟ್.ಮಾಧ್ಯಮಗಳಲ್ಲಿ3 ಫ್ಲ್ಯಾಟ್‌ಗಳಿವೆಎಂದು ಬಿಂಬಿಸಲಾಗುತ್ತಿದೆ. ಈಗಾಗಲೇ ಎಲ್ಲ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದರು.
ರಾಗಿಣಿಗೆ ಕ್ವಾರಂಟೈನ್-ಜೈಲಿನಆಸ್ಪತ್ರೆಯಲ್ಲಿ ಚಿಕಿತ್ಸೆ: ನಟಿ ರಾಗಿಣಿಗೆ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ವಿಚಾರಣಾಧೀನ ಖೈದಿ ಆಗಿರುವುದರಿಂದ ಜೈಲಿನ ಕ್ವಾರಂಟೈನ್ ಕೇಂದ್ರದಲ್ಲಿದ್ದಾರೆ. ಘಟನೆಯಿಂದ ಮಾನಸಿಕವಾಗಿ ನೊಂದಿರುವ ರಾಗಿಣಿಗೆ ಜೈಲಿನ ವೈದ್ಯಾಧಿಕಾರಿಗಳು, ಸುಸ್ತಾಗಿದ್ದಿರಾ. ಸರಿಯಾದ ಸಮಯಕ್ಕೆ ತಿಂಡಿ-ಊಟ ಮಾಡಬೇಕು ಎಂದು ಸೂಚಿಸಿ ದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿದೆ.
ವಿದೇಶಗಳಲ್ಲಿವಿ ರೇನ್ ಆಸ್ತಿ : ಪ್ರಕರಣದ ಪ್ರಮುಖ ಆರೋಪಿ ದೆಹಲಿ ಮೂಲದ ವಿರೇನ್ ಖನ್ನಾ, ದೆಹಲಿ, ಮುಂಬೈ, ಬೆಂಗಳೂರು ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿಯೂ ಕೋಟ್ಯಂತರ ರೂ. ಆಸ್ತಿ-ಪಾಸ್ತಿ ಹೊಂದಿದ್ದಾನೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಮೂರು ಫ್ಲ್ಯಾಟ್‌ಗಳು, ಮಂಬೈನಲ್ಲಿ ಫಾರ್ಮ್ ಹೌಸ್, ಅಮೆರಿಕಾ ಸೇರಿ ಕೆಲ ವಿದೇಶಗಳಲ್ಲಿಕೋಟ್ಯಂತರರೂ. ಆಸ್ತಿ-ಪಾಸ್ತಿ ಹೊಂದಿದ್ದಾನೆ. ಮೂಲಗಳ ಪ್ರಕಾ ರ10ಕ್ಕೂ ಅಧಿಕ ದೇಶಗಳಲ್ಲಿ ಆಸ್ತಿ ಹೊಂದಿದ್ದು, ವಾರ್ಷಿಕ ಬರೋಬರಿ ಎರಡುಕೋಟಿಗೂ ಅಧಿಕ ತೆರಿಗೆ ಪಾವತಿಸುತ್ತಾನೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.