ನನ್ನ ರಾಜಕೀಯ ಗುರು ಅನಂತಕುಮಾರ್: ಜಗದೀಶ್ ಶೆಟ್ಟರ್
ಅನಂತಕುಮಾರ್ ಅವರು ಮಾತ್ರ ಎಲ್ಲಾ ಸಮುದಾಯದ ನಾಯಕರನ್ನು ಬೆಳೆಸಿದ್ದಾರೆ
Team Udayavani, Sep 23, 2022, 2:50 PM IST
ಬೆಂಗಳೂರು: ಅನಂತಕುಮಾರ್ ಅವರು ರಾಜಕೀಯದಲ್ಲಿ ತಾವು ಬೆಳೆಯುವ ಜತೆಗೆ ನೂರಾರು ನಾಯಕರನ್ನು ಹುಟ್ಟುಹಾಕಿದ್ದಾರೆ. ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಮರಿಸಿದರು.
ಅನಂತಕುಮಾರ್ ಅವರು 63ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ನಗರದ ಶಂಕರಪುರದಲ್ಲಿನ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಲಾಗಿದ್ದ ಅನಂತ ಪ್ರೇರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎ-ಚಾಟ್ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಮೂಲೆ ಮೂಲೆಯಲ್ಲಿಯೂ ಅನಂತ ಕುಮಾರ್ ಅವರು ತಮ್ಮ ಬಳಗವನ್ನು ಕಟ್ಟಿದ್ದು,ಯುವಕರಲ್ಲಿ ಪ್ರೇರಣಾ ಶಕ್ತಿಯನ್ನು ತುಂಬುತ್ತಿದ್ದರು. ಅವರೊಂದಿಗೆ ಎಬಿವಿಪಿಯಲ್ಲಿ ಕೆಲಸ ಮಾಡಿದ್ದೇನೆ. ತದ ನಂತರ ರಾಜಕೀಯ ಕ್ಷೇತ್ರಕ್ಕೆ ಬರಲು ಅವರೇ ಕಾರಣೀಭೂತರು ಎಂದು ಅವರೊಂದಿಗಿದ್ದ ಸಂಗತಿಗಳನ್ನು ನೆನಪಿಸಿಕೊಂಡರು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಅನಂತ ಕುಮಾರ್ ಅವರು ಬಡವರು, ದಲಿತರ ಬಗ್ಗೆ ಸೇರಿದಂತೆ ಸಾಮಾಜಿಕ ನ್ಯಾಯ, ಸಮಾಜದ ಕಳಕಳಿ ಬಗ್ಗೆ ಮಾತನಾಡುತ್ತಿದ್ದರು ಎಂದು ಸ್ಮರಿಸಿದರು.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಅನಂತಕುಮಾರ್ ಅವರು ಮಾತ್ರ ಎಲ್ಲಾ ಸಮುದಾಯದ ನಾಯಕರನ್ನು ಬೆಳೆಸಿದ್ದಾರೆ. ಇಂದು ರಾಜಕೀಯ ವಾಣಿಜ್ಯೀಕರವಾಗಿದ್ದು, ಎಂಎಲ್‌ಎ ಅಥವಾ ಎಂಪಿಗಳು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಲು ತಿಂಗಳುಗಳು ಕಳೆಯುತ್ತಿವೆ. ಆದರೆ ಅನಂತ ಕುಮಾರ್ ಅವರು ಕೂಡಲೇ ಮಂತ್ರಿಗಳನ್ನು ಭೇಟಿ
ಮಾಡಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುತ್ತಿದ್ದರು ಎಂದು ಅನಂತಕುಮಾರ್ ಅವರನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ವಿಶಿಷ್ಟ 63 ದೇವಸ್ಥಾನಗಳ ಮಾಹಿತಿ ಪತ್ರ, 63 ಸಸ್ಯಗಳ ಮಾಹಿತಿ ಪತ್ರ, 6 ಜಿಲ್ಲೆಗಳ ಅಪರೂಪದ ದೇವಾಲಯಗಳ ಕೈಪಿಡಿ ಬಿಡುಗಡೆ, ಅನಂತಪಥ ಮಾಸ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಹಾಗೂ ಟಿ.ಎಸ್.ಗೋಪಾಲ್, ಸಂಧ್ಯಾ, ಕೆಂಗೇರಿ ಚಕ್ರಪಾಣಿ, ರಶ್ಮಿ ಕಿಲೇಗಾ, ಪೂರ್ಣಪ್ರಜ್ಞಾ, ಅಥರ್ವ ಸೇರಿದಂತೆ ಅನೇಕರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ಪಿ.ವಿ. ಕೃಷ್ಣ ಭಟ್, ತೇಜಸ್ವಿನಿ ಅನಂತಕುಮಾರ್, ನ್ಯಾ. ಎನ್.ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.